ಆರೋಗ್ಯ

ನಿದ್ದೆಯಿಂದ ಎದ್ದು ಮೂತ್ರವಿಸರ್ಜನೆಗೆ ಹೋಗುವ ಮುನ್ನ ನಾಲ್ಕು ನಿಮಿಷದ ಜಾಗೃತೆ,….ಯಾಕೆ?

Pinterest LinkedIn Tumblr

ನಾವು ಪೇಪರನಲ್ಲಿ ಮತ್ತು ನ್ಯೂಸ್ ಚಾನೆಲ್ ನಲ್ಲಿ ಎಷ್ಟೋ ಸಲ ಕೇಳ್ತೇವೆ ಚಿಕ್ಕ ವಯಸ್ಸಿನ ವ್ಯಕ್ತಿ ಹೃದಯ ವಿಕಾರದಿಂದ ಮೃತಪಟ್ಟ ಅಷ್ಟೇ ಏಕೆ ನಮ್ಮ ಸುತ್ತಮುತ್ತಲೂ ಅನೇಕ ಸಂಗತಿಗಳನ್ನು ಕೇಳುತ್ತೇವೆ. ಜೊತೆಗೆ ಕೆಲವರಂತೂ ತಪ್ಪದೆ ಜಿಮ್ ಗೆ ಹೋಗುವವರ ಮರಣವು ಸಹಿತ ಇದರಿಂದ ಆಗಿದನ್ನು ಕೇಳಿರಬಹುದು.

ಹಾಗಾದರೆ ಇದರಿಂದ ಬಚಾವಾಗಲು ಬರೀ ಮೂರರಿಂದ ನಾಲ್ಕು ನಿಮಿಷ ಅಷ್ಟೇ ಸಾಕು.ಡಾಕ್ಟರಗಳ ಪ್ರಕಾರ ಯಾರು ನಸುಕಿನಲ್ಲಿ ಮತ್ತು ನಿದ್ರೆಯಿಂದ ಎದ್ದು ಮೂತ್ರವಿಸರ್ಜನೆಗೆ ಹೋಗುತ್ತಾರೆ ಅವರ ಸಲುವಾಗಿ ಅತೀ ಮುಖ್ಯವಾದ ಸೂಚನೆ ಇದೆ.

ರಾತ್ರಿಯಲ್ಲಿ ನಿದ್ರೆಯಿಂದ ಮೂತ್ರ ವಿಸರ್ಜನೆ ಅಥವಾ ಯಾವುದೇ ಕಾರಣಕ್ಕೆ ಆಕಸ್ಮಿಕವಾಗಿ ಎದ್ದಾಗ ಆ ವೇಳೆಯಲ್ಲಿ ನಾವು 3 ರಿಂದ 4 ನಿಮಿಷ ಜಾಗೃತೆ ವಹಿಸಿದರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಯಾವಾಗ ಇಂತಹ ಸುದ್ದಿಗಳನ್ನು ಕೇಳಿದ್ದೇವೆಯೋ ಆಗಾಗ ಶಾರೀರಿಕ ದೃಷ್ಟಿಯಿಂದ ಸದೃಢವಾದ ವ್ಯಕ್ತಿಯೇ ರಾತ್ರಿ ಸಮಯದಲ್ಲಿ ಮರಣ ಹೊಂದಿದ್ದಾನೆ.ಇಂತಹ ವ್ಯಕ್ತಿಗಳ ಬಗ್ಗೆ ನಾವು ಎಷ್ಟೋ ಸಲ ಮಾತಾಡುತ್ತೇವೆ ಅಯ್ಯೋ ಈತನಿಗೆ ನಾನು ನಿನ್ನೆ ಮಾತಾಡಿಸಿದ್ದೇ ನಿನ್ನೆನೆ ಚೆನ್ನಾಗಿದ್ದ ಒಮ್ಮೆಲೇ ಏನಾಯ್ತು? ಇದು ಸಾಧ್ಯವೇ ಇಲ್ಲ. ಅಂತೆಲ್ಲ ಮಾತಾಡ್ತೇವೆ. ಇದಕ್ಕೆಲ್ಲ ಮುಖ್ಯ ಕಾರಣ ರಾತ್ರಿ ನಿದ್ರೆಯಿಂದ ಮೂತ್ರವಿಸರ್ಜನೆಗೆ ಲಗುಬಗೆಯಿಂದ ಎದ್ದು ಓಡುವದು.ಗಾಢ ನಿದ್ರೆಯಿಂದ ಒಮ್ಮೆಲೇ ಏಳುವದರಿಂದ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ.

ಈಗ ಮೇಲೆ ಹೇಳಿದ ಪ್ರಕಾರ ಈ ಸಮಯದಲ್ಲಿಯ ನಾಲ್ಕು ನಿಮಿಷ ಬಹಳ ಪ್ರಾಮುಖ್ಯವಾದದು. ಗಾಢ ನಿದ್ರೆಯಿಂದ ತ್ವರಿತವಾಗಿ ಹಾಸಿಗೆಯಿಂದ ಏಳುವದರಿಂದ ಶರೀರದ ಇಸಿಜಿಯ ಪ್ಯಾಟರ್ನ್ ಒಮ್ಮೆಲೇ ಚೇಂಜ್ ಆಗುವದು. ಇದರಿಂದ ಮೆದುಳಿಗೆ ರಕ್ತ ಸಂಚಾರ ಒಮ್ಮೆಲೇ ಹರಿಯುವದಿಲ್ಲ. ಇದರಿಂದ ಹೃದಯಕ್ಕೆ ಆಘಾತವಾಗುವದು. ಆದ್ದರಿಂದ ಬಚಾವಾಗಲು ನಾಲ್ಕು ನಿಮಿಷದ ಒಳ್ಳೆಯ ಉಪಾಯ ಮತ್ತು ರೂಢಿ ಅನುಸರಿಸಿದರೆ ತುಂಬಾ ಒಳ್ಳೆಯದು.
1)ನಿದ್ರೆಯಿಂದ ಎಚ್ಚರವಾದಾಗ ಹಾಗೆ ಒಂದು ನಿಮಿಷ ಹಾಸಿಗೆಯಲ್ಲಿಯೇ ಮಲಗಿರಿ .
2)ಮುಂದಿನ ಅರ್ಧ ನಿಮಿಷ ಅಥವಾ ಒಂದು ನಿಮಿಷ ಹಾಸಿಗೆಯಲ್ಲಿ ಕುಳಿತುಕೊಳ್ಳಿ .
3) ಆನಂತರ ಮುಂದಿನ ಎರಡು ನಿಮಿಷ ಪಲ್ಲಂಗದ ಮೇಲಿನಿಂದ ಕಾಲುಗಳನ್ನು ಕೆಳಗೆ ಬಿಟ್ಟು ಕುಳಿತುಕೊಳ್ಳಿ ಇಷ್ಟೂ ಸಮಯವನ್ನು ದಿನಾಲು ರೂಢಿಸಿಕೊಂಡರೆ ಹೃದಯ ಕ್ರಿಯೆಯ ಸಮಸ್ಯೆ ಈ ಸಮಯದಲ್ಲಿ ಬರುವುದು ಅಶಕ್ಯ. ಆದ್ದರಿಂದ ಆಕಸ್ಮಿಕ ಮೃತ್ಯುವಿನ ಸಂಖ್ಯೆ ಸಹಿತ ಕಡಿಮೆ ಆಗುವದನ್ನು ತಡೆಗಟ್ಟಬಹದು.

Comments are closed.