ಆರೋಗ್ಯ

ಅಸ್ತಮಾ ರೋಗವನ್ನು ಹೀಗೂ ನಿಯಂತ್ರಿಸಬಹುದು…!

Pinterest LinkedIn Tumblr

ಜೇನು: ಜೇನನ್ನು ಅಸ್ತಮಾಗೆ ಉತ್ತಮ ಮನೆಮದ್ದಾಗಿ ಉಪಯೋಗಿಸಲಾಗಿಸುತ್ತದೆ.ಅಸ್ತಮಾ ಕಾಣಿಸಿಕೊಂಡಾಗ ಬಿಸಿ ನೀರಿನಲ್ಲಿ ಜೇನನ್ನು ಹಾಕಿ ಅದರ ಆವಿಯನ್ನು ತೆಗೆದುಕೊಂಡರೆ ಬೇಗ ಪರಿಣಾಮ ಬೀರುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಜೇನು ಬೆರೆಸಿ ಅದನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಅಸ್ತಮಾ ನಿಯಂತ್ರಿಸಬಹುದು.

ಮೂಲಂಗಿ: ಒಂದು ಕಪ್ ತುರಿದ ಮೂಲಂಗಿ, ಒಂದು ಚಮಚ ಜೇನು ಮತ್ತು ಒಂದು ಚಮಚ ನಿಂಬೆರಸ ಬೆರೆಸಿ 20 ನಿಮಿಷ ಕಾಯಿಸಿ ಇದನ್ನು ದಿನವೂ ಒಂದು ಚಮಚ ಸೇವಿಸುತ್ತಾ ಬಂದರೆ ಪರಿಣಾಮಕಾರಿಯಾಗಿ ಅಸ್ತಮಾ ನಿವಾರಿಸುತ್ತದೆ.

ಹಾಗಲಕಾಯಿ:ಹಾಗಲಕಾಯಿ ಅಸ್ತಮಾಗೆ ಮತ್ತೊಂದು ಪರಿಣಾಮಕಾರಿ ಮದ್ದು.
ಜೇನಿನೊಂದಿಗೆ ಹಾಗಲಕಾಯಿ ಪೇಸ್ಟ್, ತುಳಸಿ ಎಲೆ ರಸ ಸೇರಿಸಿ ಕುಡಿಯುವುದರಿಂದ ಅಲರ್ಜಿ ನಿವಾರಿಸಿ ಅಸ್ತಮಾ ಬರುವುದನ್ನು ತಡೆಗಟ್ಟುತ್ತದೆ.

ಮೆಂತ್ಯೆಕಾಳು:ಮೆಂತ್ಯೆಕಾಳಿನಲ್ಲಿ ಅಲರ್ಜಿ ನಿವಾರಿಸಬಲ್ಲ ಶಕ್ತಿಯಿದೆ.

ನೀರಿನೊಂದಿಗೆ ಮೆಂತ್ಯೆ ಕಾಳು ಬೇಯಿಸಿ ಅದಕ್ಕೆ ಒಂದು ಚಮಚ ಜೇನು ಮತ್ತು ಶುಂಠಿ ರಸದೊಂದಿಗೆ ಬೆರೆಸಿ ದಿನಕ್ಕೊಮ್ಮೆ ಸೇವಿಸಿದರೆ ಚಳಿಗಾಲದಲ್ಲಿ ಅಸ್ತಮಾ ಕಡಿಮೆ ಮಾಡಬಹುದು.

Comments are closed.