ದಾಂಪತ್ಯ ಜೀವನದಲ್ಲಿ ಸೆಕ್ಸ್ ವಿಷಯ ಪ್ರಮುಖವಾದುದು. ಇದರಲ್ಲಿ ಸ್ವಲ್ಪ ಯಡವಟ್ಟಾದರೆ ಜೀವನವೇ ಏರುಪೇರಾಗುತ್ತದೆ. ಹಲವು ತೊಂದರೆಗಳಿಗೂ ಕಾರಣವಾಗುತ್ತದೆ. ಅಂಥ ತೊಂದರೆಗಳಲ್ಲಿ 5 ಈ ರೀತಿಯಿದೆ.
1) ಮೈತುಂಬ ಟೈಟಾದ ಬಟ್ಟೆ: ಮೈತುಂಬ ತುಂಬಾ ಟೈಟಾದ ಬಟ್ಟೆಗಳನ್ನ ಧರಿಸುವುದು ಕೆಲವರಿಗೆ ಫ್ಯಾಷನ್ ಎನಿಸಬಹುದು. ಆದರೆ ಸೆಕ್ಸ್ ಜೀವನಕ್ಕೆ ಇದು ಅಪಾಯವೇ ಸರಿ. ಮಿಲನದಲ್ಲಿ ತೊಡಗಿಕೊಳ್ಳುವಾಗ ಕಡಿಮೆ ತುಂಡು ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಸಂಭೋಗದ ವೇಳೆ ಅಡಚಣೆಯಾಗಿ ಆಸಕ್ತಿ ಕಡಿಮೆಯಾಗುವ ಸಾಧ್ಯತೆಯಿದೆ.
2) ಮದ್ಯಪಾನ ಹೆಚ್ಚು ನಿಮಗೇ ಆಪತ್ತು: ಕೆಲವರು ಮದ್ಯಪಾನ ಹೆಚ್ಚು ಸೇವಿಸಿ ಸೆಕ್ಸ್’ನಲ್ಲಿ ತೊಡಗಿಕೊಂಡರೆ ಸುಖದ ಸುಪತ್ತಿಗೆಯಲ್ಲಿ ತೇಲಾಡಬಹುದು ಎಂದುಕೊಂಡಿದ್ದಾರೆ. ಆದರೆ ಅತಿಯಾದ ಮದ್ಯಪಾನ ತೊಂದರೆ ತರಬಲ್ಲದು.ಒಂದೆರಡು ಪೆಗ್ ಓಕೆ. ಹೆಚ್ಚಾದರೆ ನಿಮಿರು, ಸ್ಖಲನ ಸಮಸ್ಯೆ ಎದುರಿಸಬೇಕಾಗುತ್ತದೆ.
3) ಧೂಮಪಾನ : ಸಿಗರೇಟ್ ಬೀಡಿಯಂಥ ತಂಬಾಕುಗಳ ಸೇವನೆಯು ಸೆಕ್ಸ್ ಜೀವನಕ್ಕೆ ಅಪಾಯ ತರಬಲ್ಲದು. ಬರಬರುತ್ತಾ ವೀರ್ಯ ಪ್ರಮಾಣ ಕಡಿಮೆಯಾಗುತ್ತದೆ. ಬರುಬರುತ್ತಾ ವೀರ್ಯಗಳ ಚಲನಶೀಲತೆ ದುರ್ಬಲಗೊಳ್ಳುತ್ತದೆ. ಸಂತಾನೋತ್ಪತ್ತಿಗೂ ಡೇಂಜರ್.
4) ಒತ್ತಡ: ಒತ್ತಡ ಕೂಡ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.ಪದೇಪದೆ ಒತ್ತಡದಿಂದ ಇದ್ದರೆ ಸೆಕ್ಸ್ ಲೈಫ್ ಚೆನ್ನಾಗಿರುವುದಿಲ್ಲ. ಮಿಲನವ ವೇಳೆ ಶೀಘ್ರ ಸ್ಖಲನ ಸಮಸ್ಯೆ ಎದುರಿಸಬೇಕಾಗುತ್ತದೆ. ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಮನಸ್ಸನ್ನು ಚಟುವಟಿಕೆಯಿಂದ ಇರಿಸಿಕೊಳ್ಳುವುದು ಕ್ಷೇಮ.
5) ರೋಗಗಳಿಂದ ದೂರವಿರಿ: ದೀರ್ಘಕಾಲದ ಕಾಯಿಲೆಗಳನ್ನು ನಿಮ್ಮನ್ನು ಕಾಡುತ್ತಿದ್ದರೆ ಲೈಂಗಿಕ ಜೀವನಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ. ಡಯಾಬಿಟಿಸ್, ಕಿಡ್ನಿ ಸಂಬಂಧಿತ ಕಾಯಿಲೆಗಳು, ಬಿಪಿ, ಕ್ಯಾನ್ಸರ್ ಇವುಗಳಲ್ಲಿ ಪ್ರಮುಖವಾದುದ್ದು. ಸಂತಾನೋತ್ಪತ್ತಿಗೂ ರೋಗಗಳು ಭಾಧಿಸುತ್ತವೆ. ವ್ಯಾಯಾಮ, ಚಟುವಟಿಕೆಯಿಂದ ರೋಗಗಳನ್ನು ಆದಷ್ಟು ತಡೆಯಿರಿ.
Comments are closed.