ಸ್ಕಿನ್ ಕೇರ್‌ಎನ್ನುವುದು ಮಹಿಳೆಯರಿಗಷ್ಟೇ ಸೀಮಿತವಲ್ಲ. ಸ್ಕಿನ್‌ಕೇರ್‌ಹಾಗೂ ಡ್ರೆಸ್ಸಿಂಗ್‌ಕಡೆ ಗಮನ ನೀಡಿದರಷ್ಟೇ ಆಕರ್ಷಕವಾಗಿ ಕಾಣಲು ಸಾಧ್ಯ.
ಆಕರ್ಷಕವಾದ ಲುಕ್ ನಮ್ಮ ಆತ್ಮ ವಿಶ್ವಾಸ ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವುದರಲ್ಲಿ ನೋ ಡೌಟ್. ಇಲ್ಲಿ ಪುರುಷರ ತ್ವಚೆ ಸೌಂದರ್ಯ ಹೆಚ್ಚಿಸಲು ಕೆಲ ಟಿಪ್ಸ್ ನೀಡಿದ್ದೇವೆ ನೋಡಿ.
1. ನೀರು ಕುಡಿಯಿರಿ
ತ್ವಚೆ ಆರೈಕೆಗೆ ಮೊದಲು ಮಾಡಬೇಕಾಗಿರುವುದು ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ 2 ಲೀಟರ್‌ನೀರು ಕುಡಿಯಲೇಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತ್ವಚೆ ಡ್ರೈಯಾಗುವುದು.
2. ಮಾಯಿಶ್ಚರೈಸರ್‌ಹಚ್ಚಿ
ಪ್ರತೀದಿನ ಮಾಯಿಶ್ಚರೈಸರ್‌ಹಚ್ಚಿ. ಶೇವಿಂಗ್ ಬಳಿಕ ಮಾಯಿಶ್ಚರೈಸರ್/ ಆಫ್ಟರ್‌ಶೇವ್‌ಮಾಡಲು ಮರೆಯದಿರಿ.
3. ಸನ್‌ಸ್ಕ್ರೀನ್
ಬಿಸಿಲಿಗೆ ಓಡಾಡುವಾಗ ಸನ್‌ಸ್ಕ್ರೀನ್‌ಲೋಷನ್ ಬಳಸಿ.
4. ಹಣ್ಣು ತರಕಾರಿ ತಿನ್ನಿ
ಬ್ರೇಕ್‌ಫಾಸ್ಟ್‌ಹಾಗೂ ಡಿನ್ನರ್‌ಜತೆ ಒಂದು ಬೌಲ್‌ಬೇಯಿಸಿದ ತರಕಾರಿ ಹಾಗೂ ಹಣ್ಣು ತಿನ್ನಿ.
5. ವ್ಯಾಯಾಮ
ದಿನದಲ್ಲಿ ಒಂದು ಗಂಟೆಯನ್ನು ವ್ಯಾಯಾಮಕ್ಕಾಗಿ ಮೀಸಲಿಡಿ. ಇದರಿಂದ ಸೌಂದರ್ಯದ ಜತೆಗೆ ಆರೋಗ್ಯ ಹೆಚ್ಚಾಗುವುದು.
6. ನಿದ್ದೆ
ಹಾಸಿಗೆಯಲ್ಲಿ ಮಲಗಿದ ಮೇಲೆ ಪುನಃ ಮೊಬೈಲ್‌ನೋಡುವ ಅಭ್ಯಾಸ ಬೇಡ, ಮೊಬೈಲ್‌ದೂರವಿಟ್ಟು 8 ಗಂಟೆ ನಿದ್ದೆ ಮಾಡಿ.
Comments are closed.