ಸ್ಟ್ರಾಬೆರಿ ಹಣ್ಣು ವಿದೇಶದ ಕೊಡುಗೆಯಾಗಿದ್ದರೂ ನಮ್ಮ ನೆಲದ ಫಲ ಎಂಬಂತೆ ಕರ್ನಾಟಕದಲ್ಲಿಯೂ ಬೆಳೆಯುತ್ತದೆ. ಮನೆಯಂಗಳದಲ್ಲಿ ಇದರ ಬಳ್ಳಿಯನ್ನು ಬೆಳೆಸಿ ಹಣ್ಣು ಕೊಯ್ಯಬಹುದು. ಕುಂಡಗಳಲ್ಲಿಯೂ ಬೆಳೆಯುತ್ತದೆ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಅದರಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ಕಬ್ಬಿಣ, ಸುಣ್ಣ, ಪೊಟಾಸಿಯಂ, ಮೆಗ್ನೇಷಿಯಂ, ಮ್ಯಾಂಗನೀಸ್, ಸತು, ನಿಯಾಸಿನ್, ಪ್ಯಾಂಟೋಥೆನಿಕ್ ಅಮ್ಲಗಳಲ್ಲದೆ ಎ, ಬಿ, ಸಿ, ಕೆ ಜೀವಸತ್ವಗಳೂ ಇವೆ.
ಈ ಹಣ್ಣಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮಕ್ಕೆ ಆದ್ಯತೆ ನೀಡುವ ಮೂಲಕ ಚರ್ಮದ ಹೊಳಪು. ಚರ್ಮದ ಆರೋಗ್ಯವನ್ನು ಕಾಪಾಡುವುದರಲ್ಲಿ ಉತ್ತಮವಾದ ಸ್ಥಾನ ಪಡೆದಿದೆ.
ಅಗದರೇ ಈ ಹಣ್ಣಿನಿಂದ ಏನು ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿಯೋಣ…
ತುಂಬಾ ಸೆನ್ಸಿಟಿವ್ ಸ್ಕಿನ್ ಇರುವವರಿಗೆ ಸ್ಟ್ರಾಬೆರಿ ಉತ್ತಮ ಹಣ್ಣು. ಸ್ಟ್ರಾಬೆರಿ ಹಣ್ಣನ್ನು ಅರ್ಧಕ್ಕೆ ಕಟ್ ಮಾಡಿ ಮುಖದ ಮೇಲೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಿರಿ. ಮುಖದಲ್ಲಿ ಕಾಂತೀಯತೆ ಹೆಚ್ಚುತ್ತದೆ.
ಸ್ಟ್ರಾಬೆರಿ ಹಣ್ಣು ಮತ್ತು ಹಾಲಿನ ಕೆನೆಯನ್ನು ಚೆನ್ನಾಗಿ ರುಬ್ಬಿ. ಮುಖಕ್ಕೆ ಹಚ್ಚಿಕೊಂಡು 10 ರಿಂದ 15 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಮೊಡವೆ ಕಡಿಮೆ ಆಗುತ್ತದೆ.ಸ್ಟ್ರಾಬೆರಿಯನ್ನು ಸಕ್ಕರೆ ಜೊತೆ ಬೆರೆಸಿ ಪೇಸ್ಟ್ ಮಾಡಿಕೊಂಡು ತುಟಿಯ ಮೇಲೆ ಹಚ್ಚಿಕೊಳ್ಳುವುದರಿಂದ ತುಟಿ ಮೃದುವಾಗಿ. ಕೆಂಪಾಗುತ್ತವೆ.
ಸ್ಟ್ರಾಬೆರಿಯಲ್ಲಿ ಫೋಲಿಕ್ ಆ್ಯಸಿಡ್, ಫೈಬರ್ ಜಾಸ್ತಿ ಇರುವುದರಿಂದ ಆಯಾಸ ಆಗದಂತೆ ತಡೆಗಟ್ಟುತ್ತದೆ. ಹೊಸ ಜೀವ ಕಣಗಳು ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.
ಸ್ಟ್ರಾಬೆರಿ ಹಣ್ಣಿನಿಂದ ಹಲ್ಲು ಉಜ್ಜಿದರೆ ಹಲ್ಲು ಬೆಳ್ಳಗೆ ಫಳ ಫಳ ಹೊಳೆಯುತ್ತವೆ.
ಸ್ಟ್ರಾಬೆರಿಯನ್ನು ಕಟ್ ಮಾಡಿ ಕಣ್ಣಿನ ಮೇಲೆ ಇಟ್ಟು ಕೊಂಡರೆ ಕಣ್ಣು ನೋವು. ಕಣ್ಣಿನ ಆಯಾಸ ಕಡಿಮೆಯಾಗುತ್ತದೆ.
ಸ್ಟ್ರಾಬೆರಿ ರುಬ್ಬಿ ಕೂದಲಿಗೆ ಹಚ್ಚುವುದರಿಂದ ತಲೆಗೂದಲು ಉದುರುವುದು, ಕೂದಲು ತೆಳ್ಳಗಾಗುವುದು ಕಡಿಮೆಯಾಗುತ್ತದೆ.
ಸ್ಟ್ರಾಬೆರಿ ಜ್ಯೂಸ್ ಮಾಡಿ ಅದಕ್ಕೆ ಸ್ವಲ್ಪ ರೋಸ್‌ವಾಟರ್ ಹಾಕಿ ಫ್ರಿಜ್‌ನಲ್ಲಿ ಇಟ್ಟು, ಮುಖಕ್ಕೆ ಹಚ್ಚಬಹುದು.
ಸ್ಟ್ರಾಬೆರಿ ಹಣ್ಣನ್ನು ರುಬ್ಬಿ. ಅದಕ್ಕೆ ಆಲಿವ್ ಆಯಿಲ್. ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ ಕಾಲಿಗೆ ಹಚ್ಚಿ, 10 ನಿಮಿಷ ಬಿಟ್ಟು ತೊಳೆದುಕೊಂಡು ಮಾಯಿಶ್ಚರೈಸರ್ ಹಚ್ಚಿದರೆ ಪಾದಗಳು ಕಾಂತಿಯುತವಾಗುತ್ತದೆ.
ವಿಟಮಿನ್ ಸಿ ಅಧಿಕವಾಗಿರುವ ಸ್ಟ್ರಾಬೆರಿಯನ್ನು ತಿನ್ನುವುದರಿಂದ, ತ್ವಚೆಯ ಶುದ್ಧತೆಯನ್ನು ಸುಧಾರಿಸಿ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟಬಹುದು.
ಈ ಒಂದು ಸ್ಟ್ರಾಬೆರಿ ಹಣ್ಣು ಎಷ್ಟೆಲ್ಲಾ ಸೌಂದರ್ಯ ಸಾಧನವನ್ನು ಒಳಗೊಂಡಿದೆ ಅಲ್ಲವೇ …..
Comments are closed.