ಆರೋಗ್ಯ

ಕೂದಲು ಉದರುವಿಕೆ ಸಮಸ್ಯೆಗೆ ಹಾರ್ಮೋನ್ಸ್ ಕೂಡ ಕಾರಣ…ಗೋತ್ತೆ…?

Pinterest LinkedIn Tumblr

ಆಯುರ್ವೇದ ಸಾವಿರಾರು ವರ್ಷ ಹಳೆಯ ವೈದ್ಯಕೀಯ ಪದ್ಧತಿ, ಆಯುರ್ವೇದ ಪದ್ದತಿಯಲ್ಲಿ ಕೂದಲಿಗೆ ವಿಶೇಷ ಮಹತ್ವವನ್ನು ಕೊಡಲಾಗುತ್ತದೆ. ನಮ್ಮ ದೇಹದ ವಿವಿಧ ಭಾಗಗಳಲ್ಲಿ ಕೂದಲನ್ನು ಕಾಣಬಹುದು. ಸಾಮಾನ್ಯವಾಗಿ 20-22 ವರ್ಷ ವಯಸ್ಸಾದ ನಂತರ ಪುರುಷ ಹಾಗು ಮಹಿಳೆಯರಲ್ಲಿ ಕೂದಲು ಉದುರಲು ಪ್ರಾರಂಭವಾಗುತ್ತದೆ. ವೈದ್ಯರ ಪ್ರಕಾರ ದಿನಕ್ಕೆ ನೂರು ಕೂದಲು ಉದರುವುದು ಸಾಮಾನ್ಯ ಆದರೆ ಅದಕ್ಕಿಂತ ಹೆಚ್ಚಾಗಿ ಉದುರಲು ಪ್ರಾರಂಭಿಸಿದರೆ ನೀವು ಕೂದಲಿಗೆ ಅಗತ್ಯ ಕಾಳಜಿ ವಹಿಸಬೇಕು. ಕೆಲವು ಹಾರ್ಮೋನ್ಸ್ ಸಮಸ್ಯೆಕೂಡ ಕೂದಲು ಉದರುವಿಕೆಗೆ ಕಾರಣವಾಗುತ್ತದೆ ಅದಲ್ಲದೆ ನೀವು ಸೇವಿಸುವ ಆಹಾರ ಕೂಡ ಕಾರಣವಾಗಬಹುದು.

ಕೂದಲು ಯಾಕೆ ಉದುರುತ್ತದೆ ?
ಕೂದಲು ಉದರುವಿಕೆಗೆ ನಿಖರವಾದ ಕಾರಣ ವೈದ್ಯರಿಗೂ ಗೊಂದಲ ಮೂಡಿಸುತ್ತದೆ, ಹಾರ್ಮೋನ್ಸ್ ನಲ್ಲಿ ಏರುಪೇರಾದಾಗ, ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ಸ್, ಪೌಷ್ಟಿಕ ಆಹಾರ, ಪ್ರೋಟೀನ್ಸ್ ಕಡಿಮೆ ಇದ್ದಾಗ, ಅಥವಾ ನೀವು ಯಾವುದೇ ಔಷಧ ಸೇವನೆಯಲ್ಲಿದ್ದರೆ ಕೂದಲು ಉದುರಬಹುದು. ಹಾರ್ಮೋನ್ಸ್ ಸಮಸ್ಯೆ ಇದ್ದಾರೆ ಕೂದಲಿನ ಬುಡ ತೆಳ್ಳಗಾಗಿ ಕೂದಲು ಉದುರುತ್ತದೆ, ಹೇರ್ ಫಾಲಿಕಲ್ಸ್ ನಲ್ಲಿ ಸಮಸ್ಯೆ ಉಂಟಾಗುತ್ತದೆ ಅದರಿಂದ ಕೂದಲು ಉದುರಲು ಪ್ರಾರಂಭವಾಗುತ್ತದೆ. ಕೂದಲು ಸಮಸ್ಯೆ ಅನುವಂಶೀಯ ಕೂಡ ಆಗಿರಬಹುದು, ಜೀನ್ಸ್ ಸಮಸ್ಯೆಗಳಿಂದ ಕೂಡ ಕೂದಲು ಸಮಸ್ಯೆ ಉಂಟಾಗುತ್ತದೆ. ಪುರುಷರ ಹಾರ್ಮೋನ್ಸ್ ಕೂದಲಿನ ಫಾಲಿಕಲ್ಸ್ ನಲ್ಲಿ ಸಂವೇದನೆಯನ್ನುಂಟು ಮಾಡುತ್ತದೆ. ಹಾಗು ಈ ಸಮಸ್ಯೆ ಅನುವಂಶೀಯ ಕೂಡ ಆಗಿರಬಹುದು. ಈ ತರದ ಸಮಸ್ಯೆಯನ್ನು ಆಯುರ್ವೇದದಲ್ಲಿ ಪಿತ್ತ ಸಂವಿದಾನವೆಂದು ಕರೆಯುತ್ತಾರೆ.

ಆಯುರ್ವೇದದ ಪ್ರಕಾರ ಪಿತ್ತ ಹೆಚ್ಚಾಗಲು ಹಲವು ಕಾರಣಗಳಿವೆ, ಅವುಗಳೆಂದರೆ ಬಿಸಿಯಾದ ವಾತಾವರಣ, ಮಸಾಲಾ ಪದಾರ್ಥಗಳು, ಉಪ್ಪು, ಹುಲಿ ಆಹಾರಗಳು, ದೇಹದ ಬಿಸಿಯನ್ನು ಹೆಚ್ಚಿಸುವ ಆಹಾರಗಳು, ಅತಿಯಾದ ಕಾಫಿ, ಟೀ, ಆಲ್ಕೋಹಾಲ್, ಮಾಂಸ ಹಾಗು ಅತಿಯಾದ ದೂಮಪಾನ ದಿಂದ ಹೆಚ್ಚಾಗುತ್ತದೆ. ಹೆಚ್ಚು ಕರಿದ ಪದಾರ್ಥಗಳು, ಜಿಡ್ಡ್ಡಿನ ಪದಾರ್ಥಗಳನ್ನು ಸೇವಿಸವುದರಿಂದ ಪಿತ್ತ ಹೆಚ್ಚಾಗುತ್ತದೆ. ಪಿತ್ತವನ್ನು ಸಮತೋಲನದಲ್ಲಿಡಬೇಕಾದರೆ ಹಸಿ ತರಕಾರಿಗಳು, ಅದರಲೂ ಕಹಿ ಅಂಶವುಳ್ಳ ತರಕಾರಿಗಳು ಪಿತ್ತವನ್ನು ಸಮತೋಲನದಲ್ಲಿಡುತ್ತವೆ. ಕೂದಲ ಗುಣಮಟ್ಟವನ್ನು ಸುಧಾರಿಸಲು ಹಸಿ ತರಕಾರಿಗಳನ್ನು ತಿನ್ನುವುದು ದೇಹಕ್ಕೂ ಹಾಗು ಕೂದಲ ಆರೈಕೆಗೂ ಒಳ್ಳೆಯದು. ಹಾಗು ಪಿತ್ತ ಹೆಚ್ಚು ಮಾಡುವ ಆಹಾರಗಳನ್ನು ಕಡಿಮೆ ಮಾಡುವುದು ಒಳ್ಳೆಯದು.

ಈ ಕಾರಣಗಳನ್ನು ಬಿಟ್ಟರೆ ಅತಿಯಾದ ಮಾನಸಿಕ ಒತ್ತಡ, ಥೈರಾಯಿಡ್ ಸಮಸ್ಯೆ ಇಂದಲೂ ಕೂದಲು ಉದರುತ್ತದೆ. ಸಾಮಾನ್ಯವಾಗಿ ಕೂದಲು ಉದರುವುದಕ್ಕೆ ಕರಣ ನಾವು ಸೇವಿಸುವ ಆಹಾರ ಹಾಗು ಜೀವನ ಶೈಲಿ ಬಹು ಮುಖ್ಯ ಕಾರಣವಾಗುತ್ತದೆ. ನಿಮ್ಮ ಆಹಾರ ಕ್ರಮವನ್ನು ಸರಿಪಡಿಸಿಕೊಂಡರೆ ನಿಮ್ಮ ಹಲವಾರು ಸಮಸ್ಯೆಗಳು ದೂರವಾಗುತ್ತದೆ.

Comments are closed.