ಆರೋಗ್ಯ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು.. ಕಬ್ಬಿನ ರಸ ಸೇವನೆ ಉತ್ತಮ..

Pinterest LinkedIn Tumblr

ಕಬ್ಬಿನಲ್ಲಿ ಗ್ಲೂಕೋಸ್ ಅಂಶ ಹೆಚ್ಚು. ದೇಹದಲ್ಲಿನ ತೇವಾಂಶ ಕಳೆದುಕೊಂಡಾಗ ನಿರ್ಜಲೀಕರಣವಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್ ಇರುತ್ತದೆ. ಇದರಲ್ಲಿ ಪ್ರೋಟೀನ್ ಪ್ರಮಾಣ ಸಹ ಜಾಸ್ತಿ. ಮೂತ್ರಕೋಶಗಳ ಸಮಸ್ಯೆಯಿಂದ ನರಳುವವರು ಒಂದು ಗ್ಲಾಸ್ ಕಬ್ಬಿನ ರಸದಲ್ಲಿ ಸ್ವಲ್ಪ ನಿಂಬೆರಸ, ಎಳನೀರು ಬೆರೆಸಿಕೊಂಡು ಕುಡಿದರೆ ಒಳಿತು. ಆಂಟಿ ಆಕ್ಸಿಡೆಂಟ್‌ಗಳು ಕಬ್ಬಿನಲ್ಲಿ ಲಭಿಸುತ್ತವೆ. ದೇಹದಲ್ಲಿನ ನಾನಾ ರೀತಿಯ ಇನ್‌ಫೆಕ್ಷನ್‌ಗಳ ಜತೆಗೆ ಹೋರಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ…

ಜೀರ್ಣ ವ್ಯವಸ್ಥೆ ಸ್ವಚ್ಛಗೊಳ್ಳುತ್ತದೆ. ಕಬ್ಬಿನಲ್ಲಿ ಆರೋಗ್ಯಕ್ಕೆ ಉಪಯೋಗವಾಗುವ ಮಿನರಲ್ಸ್, ವಿಟಮಿನ್ಸ್, ಹಾಗೂ ಆಂಟಿ ಆಕ್ಸಿಡೆಂಟ್ಸ್ ಅಧಿಕವಾಗಿ ಇವೆ. ಕಬ್ಬಿನ ರಸ ತಕ್ಷಣ ಶಕ್ತಿಯನ್ನು ನೀಡುವುದು ಇರದ ವಿಶೇಷತೆ. ಮೂತ್ರ ಸಂಬಂಧಿ ತೊಂದರೆಗಳಿಂದ ನರಳುವವರಿಗೆ ಕಬ್ಬಿನರಸ ಒಳ್ಳೆಯ ಪರಿಹಾರ. ಕೆಲವು ವಿಶೇಷವಾದ ಕಾಯಿಲೆಗಳನ್ನೂ ಇದು ನಿವಾರಿಸುತ್ತದೆ. ಕಾಮಾಲೆಯನ್ನು ಸಹಜವಾಗಿ ನಿವಾರಿಸುವ ಒಂದು ಔಷಧ. ರಸವನ್ನು ಸೇವಿಸುವುದರಿಂದ ಮೂತ್ರಕೋಶದಲ್ಲಿನ ಕಲ್ಲುಗಳನ್ನು ಕರಗಿಸಲು ಇದು ಉಪಯುಕ್ತ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಜತೆಗೆ ಬಿ2 (ರೈಬೋಫ್ಲಾವಿನ್) ಹೇರಳವಾಗಿ ಇರುತ್ತದೆ.

ಕ್ಯಾಲರಿಗಳು ಕಡಿಮೆ.. ಪೋಷಕಾಂಶಗಳು ಜಾಸ್ತಿ. ರುಚಿಯ ಜತೆಗೆ ಕಡಿಮೆ ಬೆಲೆಗೆ ಲಭ್ಯವಿರುವ ಕಬ್ಬಿನ ರಸದಲ್ಲಿ ಕಾರ್ಬೊಹೈಡ್ರೇಟ್ ಅಪಾರ. ಇದರಲ್ಲಿ ಆಲ್ಕನೀನ್ ಇರುವ ಕಾರಣ, ಕಬ್ಬಿನ ರಸ ಮುಖ್ಯವಾಗಿ ಪ್ರೋಸ್ಟೇಟ್, ಶ್ವಾಸಕೋಶದ ಕ್ಯಾನ್ಸರ್ ಕಾರಗಳನ್ನು ನಿರೋಧಿಸುತ್ತದೆ. ಬೇಸಿಗೆ ಕಾಲದಲ್ಲಿ ಕಬ್ಬಿನ ರಸ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ದೇಹದನ್ನು ತಂಪಾಗಿಸುತ್ತದೆ. ಕಬ್ಬಿನ ರಸ ಕುಡಿಯುವುದರಿಂದ ದಂತಗಳು ಸ್ವಚ್ಛವಾಗಿ, ದಂತ ಕ್ಷಯವನ್ನು ನಿವಾರಿಸುತ್ತದೆ. ಕಬ್ಬಿನ ರಸ ತೆಗೆದುಕೊಳ್ಳುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಜೀರ್ಣಕ್ರಿಯೆ ಆಗಿ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ.

Comments are closed.