ಬೆಳಗ್ಗೆ ತಲೆ ಬಾಚುವಾಗ ಕೂದಲು ನುಣಪಾಗಿ, ಮಂದವಾಗಿ ಕಾಣುವಂತಿದ್ದರೆ ಯಾವ ಹೇರ್ ಸ್ಟೈಲ್ ಮಾಡಿದರೂ ಆಕರ್ಷಕವಾಗಿ ಕಾಣುವುದು. ಆದರೆ ಕೆಲವೊಮ್ಮೆ ತಲೆ ಬಾಚಲು ಹೋದಾಗ ನಮ್ಮ ಕೂದಲು ನೋಡಿ ಬೇಸರ ಉಂಟಾಗುತ್ತದೆ. ಕೆಲವೊಮ್ಮೆ ಗಂಟು-ಗಂಟಾಗಿ ಇರುತ್ತದೆ, ಇಲ್ಲಾ ಕೂದಲು ಒಂದಕ್ಕೊಂದು ಅಂಟಿಕೊಂಡಿರುತ್ತದೆ.
ಹೀಗೆ ಆಗುವುದನ್ನು ತಡೆಯಲು, ಬೆಳಗ್ಗೆ ನೀವು ಬಯಸಿದಂತಹ ಹೇರ್ ಸ್ಟೈಲ್ ಸ್ಟೈಲ್ ಮಾಡಲು ಕೆಲವೊಂದು ಸರಳ ಟಿಪ್ಸ್ ಪಾಲಿಸಿದರೆ ಸಾಕು:
ಟಿಪ್ಸ್ 1
ಸಿಲ್ಕ್ ಕವರ್‌ನ ದಿಂಬು ಬಳಸಿ
ಹೇರ್ ಸೆಟ್ಟಿಂಗ್ ಮಾಡಿದ್ದರೆ ಅದು ಹಾಳಾಗದಿರಲು ಕಾಟನ್ ಬದಲಿಗೆ ಸಿಲ್ಕ್ ಕವರ್‌ನ ದಿಂಬು ಬಳಸಿ.
ಟಿಪ್ಸ್ 2
ಕೂದಲು ಮಂದವಾಗಿ ಕಾಣಲು
ಕೂದಲನ್ನು ಮಂದವಾಗಿ ಕಾಣುವಂತೆ ಮಾಡುವ volumizing spray ಬಳಸಿ ಸಡಿಲವಾದ ತುರುಬು ಕಟ್ಟಿ. ಈ ರೀತಿ ಮಾಡುವುದರಿಂದ ಕೂದಲು ಮಂದವಾಗಿ ಕಾಣುವುದು.
ಟಿಪ್ಸ್ 3
ಹೇರ್ ಮಾಸ್ಕ್
ಮೊಟ್ಟೆಯ ಬಿಳಿ, ಬಾದಾಮಿ ಪೇಸ್ಟ್, ತೆಂಗಿನೆಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ, ಶವರ್ ಮಾಸ್ಕ್ ಹಾಕಿ ಮಲಗಿ. ಬೆಳಗ್ಗೆ ಮೈಲ್ಡ್ ಶ್ಯಾಂಪೂ ಬಳಸಿ ತೊಳೆದು, ಗಾಳಿಗೆ ಕೂದಲನ್ನು ಒಣಗಿಸಿದರೆ ಕೂದಲು ಆಕರ್ಷಕವಾಗಿ ಕಾಣುವುದು.
ಟಿಪ್ಸ್ 4
ಒದ್ದೆ ಕೂದಲಿನಲ್ಲಿ ಮಲಗಬೇಡಿ
ರಾತ್ರಿ ತಲೆಸ್ನಾನ ಮಾಡಿ, ಒಣಗಿಸದೆ ಮಲಗಿದರೆ ಮಾರನೆಯ ದಿನ ಕೂದಲು ಆಕರ್ಷಕವಾಗಿ ಕಾಣುವುದಿಲ್ಲ.
Comments are closed.