ಆರೋಗ್ಯ

ಬೇಸಿಗೆಯಲ್ಲಿ ಅಧಿಕ ಸೂರ್ಯನ ತಾಪದಿಂದ ನಮ್ಮನ್ನು ನಾವು ರಕ್ಷಿಸಲು ಈ ಟಿಪ್ಸ್..

Pinterest LinkedIn Tumblr

ಮನುಷ್ಯನ ಮಿದುಳಿನಲ್ಲಿರುವ ಉಷ್ಣತೆಯನ್ನು ನಿಯಂತ್ರಿಸುವ ಕೇಂದ್ರಕ್ಕೆ ಹೊಡೆತ ಬೀಳುವ ಕಾರಣ ಅಧಿಕ ಸೂರ್ಯತಾಪದಿಂದ ಮೂರ್ಛಾವಸ್ಥೆ ಉಂಟಾಗುತ್ತದೆ. ದೇಹದ ಉಷ್ಣತೆ ಸುಮಾರು 108 ಫಾರನ್ ಹೀಟ್‌ನಿಂದ 118ವರೆಗೂ ಹೆಚ್ಚಾಗಬಹುದು.

ವೃದ್ಧರಲ್ಲಿ: ಸಾಮಾನ್ಯವಾಗಿ ವೃದ್ದರು ಹೆಚ್ಚಾಗಿ ಬಿಸಿಲ ಹೊಡೆತಕ್ಕೆ ತುತ್ತಾಗುತ್ತಿರುತ್ತಾರೆ. ವಯಸ್ಸು ಹೆಚ್ಚಾಗುವುದು, ರೋಗನಿರೋಧಕ ಶಕ್ತಿ ಕಡಿಮೆ ಇರುವುದು, ದೀರ್ಘಕಾಲದ ರೋಗಗಳಿಂದ ನರಳುವುದು, ವಯಸ್ಸಿನ ಕಾರಣ ಹೆಚ್ಚು ಬಿಸಿಯನ್ನು ತಾಳಲಾಗದು, ವಿಶ್ರಾಂತಿ ಇಲ್ಲದಿರುವುದು.

ಮಕ್ಕಳಲ್ಲಿ: ಮಕ್ಕಳು ಬೇಸಿಗೆಯಲ್ಲಿ ಬಿಸಿಲಿನಲ್ಲಿ ಆಟವಾಡುತ್ತಿರುತ್ತಾರೆ. ಈ ಸಮಯದಲ್ಲಿ ಅವರಿಗೆ ಅಷ್ಟಾಗಿ ಬಿಸಿಲು ಅನ್ನಿಸಲ್ಲ. ದೇಹಕ್ಕೆ ಬೇಕಾದ ನೀರು ಸಿಗಲ್ಲ. ಸೂಕ್ತ ಪೌಷ್ಟಿಕಾಹಾರ ಇಲ್ಲದೆ ಬೇಸಿಗೆ ತಾಪ ತಾಳಲಾರದೆ ಬಿಸಿಲ ಹೊಡೆತಕ್ಕೆ ಗುರಿಯಾಗುತ್ತಾರೆ.

ಲಕ್ಷಣಗಳು:
1. ವಿಪರೀತ ದಾಹ
2. ತಲೆನೋವು, ತಲೆ ಸುತ್ತುವುದು
3. ಮೂತ್ರ ವಿಸರ್ಜನೆಯಲ್ಲಿ ಉರಿ
4. ವಾಂತಿ, ನೀರು ಭೇದಿ
5. ಒಮ್ಮೊಮ್ಮೆ ಫಿಟ್ಸ್ ಬರುವುದು
6. ಕೆಲವು ಸಂದರ್ಭಗಳಲ್ಲಿ ಮೂಗಿನಿದ ರಕ್ತ ಸುರಿಯುವುದು
7. ಚರ್ಮ ಕೆಂಪಗೆ ಬದಲಾಗಿ ಬಿಸಿಯಾಗಿರುವುದು
8. ಮೂರ್ಛಾವಸ್ಥೆ ಸ್ಥಿತಿಗೆ ಸೇರುವುದು
9. ದೇಹ ಸುಸ್ತಾದಂತೆ ಇರುವುದು

ಪ್ರಭಾವ:
ಬಿಸಿಲಿನ ಹೊಡೆತ ಮುಖ್ಯವಾಗಿ ಅಂಗಾಂಗಗಳ ಮೇಲಾಗುತ್ತದೆ. ಹೃದಯ, ಮೂತ್ರಕೋಶಗಳು, ಸ್ನಾಯುಗಳು, ಲಿವರ್, ರಕ್ತ ಹೆಪ್ಪುಗಟ್ಟುವ ವ್ಯವಸ್ಥೆ… ಹೀಗೆ ಎಲ್ಲದರ ಮೇಲೂ ಬಿಸಿಲ ಹೊಡೆತ ಪ್ರಭಾವ ಬೀರುತ್ತದೆ. ಆರಂಭದಲ್ಲೇ ಬಿಸಿಲ ಹೊಡೆತದ ಲಕ್ಷಣಗಳನ್ನು ಗುರುತಿಸಿದರೆ ಆ ದುಷ್ಬ್ರಾಭಾಗಳನ್ನು ತಡೆಯಬಹುದು.

ಪ್ರಥಮ ಚಿಕಿತ್ಸೆ:
1. ಬಿಸಿಲ ಹೊಡೆತಕ್ಕೆ ಒಳಗಾದ ವ್ಯಕ್ತಿಗೆ ತುರ್ತಾಗಿ ನೆರಳು, ಗಾಳಿ ಇರುವ ಪ್ರದೇಶಕ್ಕೆ ಕೊಂಡೊಯ್ಯಬೇಕು. ಬಳಿಕ ದೇಹದ ಮೇಲಿನ ಬಟ್ಟೆಗಳನ್ನು ತೆಗೆದು ಐಸ್ ಕ್ಯೂಬ್‌ಗಳಿಂದ ಅಥವಾ ತಣ್ಣಗಿನ ನೀರಿನ ಒದ್ದೆ ಬಟ್ಟೆಯಲ್ಲಿ ದೇಹವನ್ನು ವರೆಸಬೇಕು.
2. ಪ್ರಜ್ಞೆ ತಪ್ಪಿದರೆ ಕೂಡಲೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು.
3. ಸಾಧ್ಯವಾದಷ್ಟು ಹೆಚ್ಚು ಎಳನೀರು, ನಿಂಬೆರಸ, ಮಜ್ಜಿಗೆ, ಓಆರ್‌ಎಸ್ ದ್ರಾವಣ ಕುಡಿಸಬೇಕು.
4. ಪ್ರಥಮ ಚಿಕಿತ್ಸೆ ಮಾಡಿದರೂ ಎಚ್ಚರಗೊಳ್ಳದಿದ್ದರೆ ಆಸ್ಪತ್ರೆಗೆ ಸಾಗಿಸಬೇಕು.
5. ದೇಹ ಕಳೆದುಕೊಂಡಿರುವ ಲವಣಗಳನ್ನು ಮತ್ತೆ ಸಿಗುವಂತೆ ಐವಿ ಫ್ಲೂಯಿಡ್ಸ್ ನೀಡಬೇಕು.

ಇವು ಕಡ್ಡಾಯ:
1. ಹೆಚ್ಚು ಹೊತ್ತು ಬಿಸಿಲಲ್ಲಿ ಓಡಾಡಬಾರದು
2. ನೀರು, ಮಜ್ಜಿಗೆ, ಎಳನೀರು, ಹಣ್ಣಿನ ರಸಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು.
3. ಬಿಸಿಲಿಗೆ ಹೋಗುವಾಗ ಛತ್ರಿ, ಟೋಪಿಯಂತಹವನ್ನು ಧರಿಸಬೇಕು.
4. ಸಾಧ್ಯವಾದಷ್ಟು ಕಪ್ಪಗಿನ ವಸ್ತ್ರಗಳಿಂದ ದೂರ ಇರಬೇಕು.
5. ಮನೆಯಲ್ಲಿ ಉಷ್ಟತೆಯನ್ನು ಕಡಿಮೆ ಮಾಡಲು ಕಿಟಕಿಗಳಿಗೆ, ಬಾಗಿಲುಗಳಿಗೆ ಕರ್ಟನ್ ಬಳಸಿ ಬಿಸಿಲನ್ನು ಕಡಿಮೆ ಮಾಡಿಕೊಳ್ಳಬಹುದು.
6. ದೇಹ, ನೀರಿನ ಪ್ರಮಾಣವನ್ನು ಕಳೆದುಕೊಳ್ಳದಂತೆ ಮನೆಯಲ್ಲಿ ಲಭಿಸುವ ಉಪ್ಪು, ಸಕ್ಕರೆ ಮಿಶ್ರಿತ ದ್ರಾವಣ ತೆಗೆದುಕೊಳ್ಳಬೇಕು.
7. ಕಲುಷಿತ ನೀರು, ಆಹಾರದ ಮೂಲಕ ಟೈಫಾಯಿಡ್, ಅತಿಸಾರ ಬರುತ್ತದೆ. ಆದಕಾರಣ ಎಚ್ಚರ ಅಗತ್ಯ.
8. ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಹೆಚ್ಚು ಸಲ ತಿನ್ನಬೇಕು. ಸಡಿಲವಾಗಿರುವ ಕಾಟನ್ ವಸ್ತ್ರಗಳನ್ನು ಧರಿಸಬೇಕು.

Comments are closed.