ಆರೋಗ್ಯ

ಅಕ್ಕಿಯನ್ನು ಹುಳಗಳ ಬಾಧೆ ಇಲ್ಲದೇ ಕಾಪಾಡಲು ಸುಲಭ ಉಪಾಯ

Pinterest LinkedIn Tumblr

ಅಕ್ಕಿ, ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಬಹಳ ಪ್ರಮುಖವಾದದ್ದು. ಅಕ್ಕಿಯನ್ನ ಹೊರತು ಪಡಿಸಿ ನಾವು ಹೆಚ್ಚು ಅಡುಗೆಗಳನ್ನ ಮಾಡಲು ಸಾಧ್ಯವಿಲ್ಲ. ನಾವು ನೀವೆಲ್ಲರೂ ಅಕ್ಕಿಯನ್ನ ನಮಗೆ ಬೇಕಾದಷ್ಟು ಕೊಂಡು ತರುತ್ತೇವೆ. ಆದರೆ ಅಕ್ಕಿಯನ್ನ ಬೆಳೆದ ರೈತ ವರ್ಷಗಟ್ಟಲೆ ಹಾಗೆಯೆ ಶೇಖರಿಸಿಡುತ್ತಾನೆ. ಹಲವಾರು ಹೇಳುವ ಪ್ರಕಾರ ಹೊಸ ಅಕ್ಕಿಗಿಂತ ಹಳೆಯ ಅಕ್ಕಿಯೇ ಹೆಚ್ಚು ರುಚಿ.

ಅಕ್ಕಿಯನ್ನ ಬೆಳೆದ ಬಹಳ ದಿನಗಳ ವರೆಗೆ ಶೇಖರಿಸಿಟ್ಟರೆ ಕೆಲವೊಮ್ಮೆ ಹುಳಗಳಾಗುವ ಸಾಧ್ಯತೆ ಇರುತ್ತದೆ. ಇದನ್ನ ತಡೆಯಲು ಹಲವಾರು ಬಹಳಷ್ಟು ಪ್ರಯತ್ನಗಳನ್ನ ಮಾಡಿರುತ್ತಾರೆ. ಬಿಸಿಲಿಗೆ ಒಣಗಿಸುತ್ತಾರೆ. ಗಟ್ಟಿಯಾಗಿ ಚೀಲ ಅಥವಾ ಡಬ್ಬಿಯ ಬಾಯಿ ಮುಚ್ಚುತ್ತಾರೆ ಆದರೂ ಹುಳುಗಳ ಕಾಟ ತಪ್ಪುವುದಿಲ್ಲ. ಆದರೆ ಇನ್ನು ಮುಂದೆ ಹುಳುಗಳಾಗುತ್ತವೆ ಎಂಬ ಭಯ ಬೇಡ. ಏಕೆಂದರೆ ಅದಕ್ಕೆ ಇಲ್ಲಿದೆ ಒಂದು ಸುಲಭ ಉಪಾಯ….

ಅಕ್ಕಿಯಲ್ಲಿ ಹುಳ ಆಗದಂತೆ ವರ್ಷಗಟ್ಟಲೆ ಸಂಗ್ರಹಿಸಿ ಇಡಬಹುದು. ಹೇಗೆಂದರೆ ಕಹಿಬೇವಿನ ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿಮಾಡಿ ,1 ಕಪ್ ನಷ್ಟು ಪುಡಿಯನ್ನು ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ ಸಿಪ್ಪೆಯ ಪುಡಿ 1ಕಪ್ ಹಾಕಿ, ಮತ್ತೆ ಅದಕ್ಕೆ ಲವಂಗ ಹುರಿದು ಪುಡಿ ಮಾಡಿ ¼ ಕಪ್ ತೆಗೆದುಕೊಂಡು, ಮೂರನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಸೇರಿಸಿ ಕಲಸಿ (ಹಿಟ್ಟು ಗಟ್ಟಿಯಾಗಿರಲಿ). ನಂತರ ಅದನ್ನು ಚಿಕ್ಕ ಚಿಕ್ಕ ಉಂಡೆಯಾಗಿ ಮಾಡಿ 2 ದಿನ ಬಿಸಿಲಲ್ಲಿ ಒಣಗಿಸಿ. ಆಮೇಲೆ ಅದನ್ನು ಒಂದು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಅಕ್ಕಿ ಡಬ್ಬ ಅಥವಾ ಚೀಲದಲ್ಲಿ ಹಾಕಿಡಿ. ಹೀಗೆ ಮಾಡುವುದರಿಂದ ಅಕ್ಕಿ 2 ವರ್ಷದವರೆಗೂ ಏನು ಆಗುವುದಿಲ್ಲ

Comments are closed.