ಆರೋಗ್ಯ

ಗರ್ಭಪಾತಕ್ಕೆ ಕಾರಣಗಳು…..ಪರಿಹಾರ ತಿಳಿದುಕೊಳ್ಳಿ…

Pinterest LinkedIn Tumblr

ಅಮ್ಮನಾಗುವ ಬಯಕೆ ಪ್ರತಿಯೊಂದೂ ಹೆಣ್ಣಿನಲ್ಲಿರುತ್ತದೆ. ಬದಲಾದ ಜೀವನಶೈಲಿ, ಒತ್ತಡದ ಬದುಕು ಇಂಥ ಸುಮಧುರ ಅನುಭವವನ್ನು ಹೆಣ್ಣಿನಿಂದ ಕಸಿದು ಕೊಳ್ಳುತ್ತಿರುವುದು ಮಾತ್ರ ದುರಂತ. ಆದರೆ, ಬಹುತೇಕ ಸಂದರ್ಭಗಳಲ್ಲಿ ಎಲ್ಲವೂ ಸರಿಯಿದ್ದೂ, ಹೆಣ್ಣು ಗರ್ಭ ಧರಿಸಲು ವಿಫಲಳಾಗುತ್ತಾಳೆ. ಅಕಸ್ಮಾತ್ ಗರ್ಭ ಧರಿಸಿದರೂ, ಕೆಲವೇ ಕೆಲವು ವಾರಗಳಲ್ಲಿ ಗರ್ಭಪಾತವಾಗುತ್ತದೆ.

ಗರ್ಭಧಾರಣೆ ವೇಳೆ ಮಗುವಿನ ಬೆಳವಣಿಗೆ, ತಾಯಿಯ ದೇಹ ಸ್ಥಿತಿ, ರಕ್ತ ಸಂಚಾರ ಹಾಗೂ ಹಾರ್ಮೋನ್‌ಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದು ಎಲ್ಲರಿಗೂ ಗೊತ್ತು. ಇದಲ್ಲದೇ ಇನ್ಯಾವ ಕಾರಣಗಳು ಅಬಾರ್ಷನ್‌ಗೆ ಕಾರಣವಾಗಬಲ್ಲದು.

ಕಾರಣವೇನು?

ವರ್ಣತಂತು ತೊಂದೆರೆ.
ಗರ್ಭ ಚೀಲ ಅಥವಾ ಹೊಕ್ಕಳ ಬಳ್ಳಿಯಲ್ಲಿ ತೊಂದರೆ ಕಾಣಿಸಿಕೊಂಡರೆ.
ಅನುವಂಶಿಕ ಸಮಸ್ಯೆಯಿಂದ ಮಗು ಬಳಲುತ್ತಿದ್ದರೆ.
ಸೋಂಕು
ಮಧುಮೇಹ ಮತ್ತು ಥೈರಾಯ್ಡ್
ಹಾರ್ಮೋನ್ ತೊಂದರೆ
ಅಸಹಜ ಗರ್ಭಕೋಶದ ಬೆಳವಣಿಗೆ
ಗರ್ಭಪಾತದ ಇತಿಹಾಸವಿದ್ದರೆ.
ಕುಡಿತ ಹಾಗೂ ಧೂಮಪಾನ.
ವಿಷಹಾರಿ ಆಹಾರ ಸೇವನೆ.

ತಡೆಯುವುದೇಗೆ ?

ಉಷ್ಣ ಪದಾರ್ಥ ಸೇವಿಸಬಾರದು.
ದೂರದೂರಿನ ಪ್ರಯಾಣ ನಿಯಂತ್ರಿಸಿ.
ವ್ಯಾಕ್ಸಿನೇಷನ್ ಹಾಕಿಸೋದ ಮರೆಯಬೇಡಿ.
ಒತ್ತಡ ಮುಕ್ತರಾಗಿ.
ಸಮಸ್ಯೆ ಕಾರಣ ತಿಳಿಯಲು ಸೂಕ್ತ ವೈದ್ಯರ ಹತ್ತಿರ, ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.

Comments are closed.