ಆರೋಗ್ಯ

ನಡೆದಾಗ, ಓಡಿದಾಗ, ಅಥವಾ ವ್ಯಾಯಾಮ ಮಾಡಿದಾಗ ಸ್ನಾಯುವಿನ ಸೆಳೆತವಾಗಿದೆಯೇ….?

Pinterest LinkedIn Tumblr

ವಯಸ್ಸಾಗುತ್ತಿದ್ದಂತೆಯೇ ಅಥವಾ ತುಂಬಾ ದಿನಕ್ಕೆ ಯಾವುದಾದರು ಸ್ವಲ್ಪ ಕಠಿಣವಾದ ಕೆಲಸ ಮಾಡಿದಾಗ, ತುಂಬಾ ದೂರ ನಡೆದಾಗ ಅಥವಾ ಓಡಿದಾಗ, ವ್ಯಾಯಾಮ ಮಾಡಿದಾಗ ಹೀಗೆ ಅನೇಕ ಕಾರಣಗಳಿಂದ ಸ್ಯಾಯುವಿನ ಸೆಳೆತ ಕಾಣಿಸಿಕೊಳ್ಳುತ್ತದೆ. ಆಗ ಕುಳಿತುಕೊಳ್ಳಲೂ ಆಗದೆ, ನಡೆಯಲೂ ಆಗದೆ, ಮಲಗಲೂ ಆಗದೆ ನೋವಿನಿಂದ ಬಳಲಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿ ಸ್ನಾಯುವಿನ ಸೆಳೆತವನ್ನು ಸರಾಗಗೊಳಿಸಲು ಇಲ್ಲಿವೆ ಕೆಲವು ಸಿಂಪಲ್​​ ಸಲಹೆಗಳು.

1. ವಿದ್ಯುದ್ವಿಚ್ಛೇದ್ಯಗಳನ್ನು ಹೊಂದಿರುವ ಸಾಕಷ್ಟು ದ್ರವಗಳ ಪದಾರ್ಥಗಳನ್ನು ಮತ್ತು ಪಾನೀಯಗಳನ್ನು ಕುಡಿಯುವುದರಿಂದ ಸ್ನಾಯು ಸೆಳೆತವನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
2. ಕ್ರಮೇಣವಾಗಿ ಮತ್ತು ಸುಲಭವಾಗಿ ಸ್ನಾಯುಗಳು ಹರಡುವ ಹಾಗೆ ಸೆಳೆತ ಇರುವ ಪ್ರದೇಶವನ್ನು ಮೃಧುವಾಗಿ ಮಸಾಜ್ ಮಾಡಿ,
3. ಸೆಳೆತ ಇರುವ ಸ್ನಾಯುವಿನ ಮೇಲೆ ಐಸ್ ಪ್ಯಾಕ್ ಅನ್ನು ಅನ್ವಯಿಸಿ.
4. ನೋವು ಮತ್ತು ಊತವನ್ನು ಕಡಿಮೆ ಮಾಡುವಂತಹ ನೋವುನಿವಾರಕವನ್ನು ಬಳಸಿ.
5. ಇಷ್ಟೆಲ್ಲಾ ಮಾಡಿದ ಮೇಲೆ ಏನೂ ಸಹಾಯವಾಗದಿದ್ದರೆ, ವೈದ್ಯರನ್ನು ಸಂಪರ್ಕಿಸಿ.

Comments are closed.