ಆರೋಗ್ಯ

ಖಿನ್ನತೆ ತಡೆಯಲು ಈ ಬೀಜವನ್ನು ತಿನ್ನಿ !

Pinterest LinkedIn Tumblr

ಕುಂಬಳಕಾಯಿಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಕುಂಬಳಕಾಯಿಯು ಅನೇಕ ಆರೋಗ್ಯ ಸಹಾಯಕಾರಿ ಗುಣಗಳನ್ನು ಹೊಂದಿದ್ದು, ಆದರೆ ಕುಂಬಳಬೀಜವೂ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥಗಳಲ್ಲೊಂದು.

ಕುಂಬಳಬೀಜವು ಸ್ವಲ್ಪ ಸಿಹಿಯಾದ ರುಚಿಯನ್ನು ಹೊಂದಿರುತ್ತದೆ. ಚೆನ್ನಾಗಿ ಒಣಗಿಸಿಟ್ಟುಕೊಂಡರೆ ಗರಿಗರಿಯಾಗಿಯೂ ಇರುತ್ತದೆ. ನೇರವಾಗಿ ಸೇವಿಸಬಹುದು. ರುಚಿಕರವಾಗಿಯೂ ಇರುತ್ತದೆ. ಆದರೆ ಎಲ್ಲಕ್ಕಿಂತ ಇದರ ಔಷಧೀಯ ಗುಣಧರ್ಮವೇ ಹಿರಿದು. ಮೆಗ್ನೇಷಿಯಂ, ಪಾಸ್ಪರಸ್, ಮ್ಯಾಂಗನೀಸ್, ಝಿಂಕ್, ಕಬ್ಬಿಣ ಹಾಗೂ ತಾಮ್ರದಂಶವನ್ನು ಕುಂಬಳಬೀಜವು ಹೊಂದಿದೆ. ಅಲ್ಲದೇ ಕುಂಬಳಬೀಜವು ಪ್ರೋಟೀನ್​ನ ಮುಖ್ಯ ಆಗರ. ಜೊತೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ ಹಾಗೂ ವಿಟಮಿನ್ ಇ ಸಹ ಕುಂಬಳಬೀಜದಲ್ಲಿ ಇರುತ್ತದೆ.

ಕುಂಬಳಬೀಜವು ಕೇವಲ ವಿಟಮಿನ್ನುಗಳು, ಖನಿಜ ಲವಣಗಳು, ಪ್ರೋಟೀನ್ ಮಾತ್ರವಲ್ಲ; ಒಳ್ಳೆಯ ಕೊಬ್ಬನ್ನೂ ಹೊಂದಿದೆ. ಈ ಎಲ್ಲ ಅಂಶಗಳಿಂದಾಗಿ ಕುಂಬಳಬೀಜದ ಔಷಧೀಯ ಗುಣಗಳು ವಿಸ್ತಾರವಾಗುತ್ತ ಹೋಗುತ್ತವೆ. ಒತ್ತಡವನ್ನು ಕಡಿಮೆ ಮಾಡುವಲ್ಲಿ ಕುಂಬಳಬೀಜ ಹೆಚ್ಚು ಫಲದಾಯಕ. ಮಾನಸಿಕ ಖಿನ್ನತೆಯಿಂದ ಹೊರತರುವ ಸಾಮರ್ಥ್ಯ ಇದರದ್ದು. ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೇಷಿಯಂನ್ನು ಹೊಂದಿರುವುದರಿಂದ ಮನಸ್ಸನ್ನು ಸಮಾಧಾನದಲ್ಲಿಡಲು ಸಹಾಯ ಮಾಡುತ್ತದೆ. ನರವ್ಯೂಹದ ಆರೋಗ್ಯಕ್ಕೆ ಉತ್ತಮ. ಪುರುಷರಲ್ಲಿ ಕಾಡಬಹುದಾದ ಪ್ರಾಸ್ಟೇಟ್ ಕ್ಯಾನ್ಸರ್ ಬರುವಂತಹ ಸಂಭವತೆಯನ್ನು ಕಡಿಮೆ ಮಾಡುತ್ತದೆ. ಪ್ರಾಸ್ಟೇಟ್ ಗ್ರಂಥಿಯ ಆರೋಗ್ಯಕ್ಕೂ ಉತ್ತಮ. ಮುಂದಿನ ಅಂಕಣದಲ್ಲಿ ಕುಂಬಳಬೀಜದ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

Comments are closed.