ಶುಂಠಿ ಆರೋಗ್ಯಕ್ಕೆ ಒಳ್ಳೆಯದು ಎಂದು ಬಹಳಷ್ಟು ಮಂದಿ ಜಿಂಜರ್ ಟಿ, ಜಿಂಜರ್ ಷರಬತ್ತು ಸೇವಿಸುತ್ತಿರುತ್ತಾರೆ. ಆದರೆ ಶುಂಠಿ ಎಲ್ಲರ ಆರೋಗ್ಯಕ್ಕೂ ಒಳ್ಳೆಯದಲ್ಲ. ಇದರಲ್ಲಿ ಜೀರ್ಣಶಕ್ತಿ ಹೆಚ್ಚಿಸುವ, ನೆಗಡಿ ಕೆಮ್ಮನ್ನು ನಿವಾರಿಸುವ ಗುಣಗಳಿದ್ದರೂ ಈ ಕೆಳಗೆ ಸೂಚಿಸಿದವರು ಶುಂಠಿಯನ್ನು ಬಳಸದಿರುವುದೇ ಉತ್ತಮ.
ಗರ್ಭಿಣಿಯರು
ಶುಂಠಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಆದರೆ ಗರ್ಭಿಣಿಯರು ತಿಂದರೆ ಅವಧಿಪೂರ್ವ ಪ್ರಸವ ಆಗುವ ಸಾಧ್ಯತೆ ಹೆಚ್ಚು. ಅದರಲ್ಲೂ 6 ತಿಂಗಳ ಬಳಿಕ ಶುಂಠಿ ತಿನ್ನದಿರುವುದು ಒಳ್ಳೆಯದು. ಮೊದಲ ತ್ರೈಮಾಸಿಕದಲ್ಲಿ ಬೆಳಗ್ಗೆ ಕಾಡುವ ಸುಸ್ತು, ವಾಂತಿ ನಿವಾರಣೆಗೆ ಒಂದು ತುಂಡು ಶುಂಠಿ ತಿನ್ನಬಹುದು, ಆದರೆ ಹೀಗೆ ತಿನ್ನುವ ಮುನ್ನ ವೈದ್ಯರ ಸಲಹೆ ಕೇಳಿ.
ರಕ್ತ ಸಂಬಂಧಿ ಸಮಸ್ಯೆಯಿದ್ದರೆ
ಶುಂಠಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಹೀಮೋಫಿಲಿಯಾ(hemophilia) ಸಮಸ್ಯೆ ಇರುವವರಿಗೆ ಶುಂಠಿ ಒಳ್ಳೆಯದಲ್ಲ. ಈ ಸಮಸ್ಯೆ ಇರುವವರಿಗೆ ಚಿಕ್ಕ ಗಾಯವಾದರೂ ರಕ್ತ ಹರಿಯುವುದು ನಿಲ್ಲುವುದಿಲ್ಲ.
ಈ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ
ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಶುಂಠಿ ಒಳ್ಳೆಯದಲ್ಲ.ಕಡಿಮೆ ತೂಕ ಇರುವವರು
ಕಡಿಮೆ ಮೈ ತೂಕ ಇರುವವರು ಕೂಡ ಶುಂಠಿ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಶುಂಠಿ ಮತ್ತಷ್ಟು ತೂಕ ಕಡಿಮೆ ಮಾಡುವುದು.
Comments are closed.