ಬೆಳಗ್ಗಿನ ಉಪಹಾರಕ್ಕೆ ದೋಸೆ ,ಇಡ್ಲಿ ಮುಂತಾದ ಬಗೆಬಗೆಯ ತಿಂಡಿಗಳನ್ನು ಮಾಡುವುದು ಹೆಚ್ಚಿನವರ ಅಭ್ಯಾಸ . ಆದರೆ ಹೆಚ್ಚಿನ ಹಳ್ಳಿಗಳಲ್ಲಿ ಇರುವ ಶ್ರಮಿಕವರ್ಗ ರಾತ್ರಿ ಉಳಿದ ಅನ್ನವನ್ನು ಗಂಜಿಯಾಗಿ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ .ಗಂಜಿ ಉಣ್ಣುವವರನ್ನು ತೀರಾ ಬಡವರು ಎಂದು ಹೆಸರಿಸುವ ಜನ ,ನಿಜವಾಗಲೂ ತಿಳಿಯಬೇಕಾದ ವಿಚಾರವೇನೆಂದರೆ ಅವರು ಆರೋಗ್ಯದ ದೃಷ್ಟಿಯಲ್ಲಿ ನಿಜವಾಗಲೂ ಶ್ರೀಮಂತರು ಎಂದು.ಈ ಬಗ್ಗೆ ಅಧ್ಯಯನ ನಡೆಸಿದ ಸಂಸ್ಥೆಯೊಂದು ಗಂಜಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದೆ .ದಕ್ಷಿಣ ಏಷ್ಯಾದ ಜನರ ಜೀವನ ಶೈಲಿಯನ್ನು ಗಮನಿಸಿದರೆ, ಗಂಜಿಯ ಜೊತೆಗೆ ಉಪ್ಪಿನಕಾಯಿ ಅಥವಾ ಮಜ್ಜಿಗೆ ಹಾಕಿ ಊಟಮಾಡುವುದು ಕ್ರಮ ಅದರಲ್ಲೂ ಕರ್ನಾಟಕದ ಕರಾವಳಿ ಭಾಗ ಅಂದರೆ ತುಳುನಾಡು , ತಮಿಳುನಾಡು ಹಾಗೂ ಕೇರಳದಲ್ಲಿ ಮಾವಿನಕಾಯಿಯ ಚಲ್ಲಿ (ಉಪ್ಪು ನೀರಲ್ಲಿ ಹಾಕಿಟ್ಟ ಮಾವಿನಕಾಯಿ) ಹಾಗೂ ಉಪ್ಪಡಚ್ಚಿಲ್ (ಹಲಸು ) ನ್ನು ಸೈಡ್ ಡಿಶ್ ಆಗಿ ಬಳಸಿ ಗಂಜಿ ಸೇವಿಸುತ್ತಾರೆ .
ಈ ರೀತಿ ಊಟ ಮಾಡುವ ಕಾರಣ ಗದ್ದೆಗಳಲ್ಲಿ ಅಥವಾ ಕೂಲಿ ಕೆಲಸದಂತಹ ಕಠಿಣ ಕೆಲಸ ಮಾಡುವ ವ್ಯಕ್ತಿಗಳಿಗೆ , ಮಧ್ಯಾಹ್ನದ ವರೆಗೆ ಹಸಿವು ಕಾಡುವುದಿಲ್ಲ . ಅದೇ ರೀತಿ ವಿದ್ಯಾರ್ಥಿಗಳು ಕೂಡಾ ಇದೇ ರೀತಿಯ ಅಭ್ಯಾಸದಲ್ಲಿ ತೊಡಗಿರುವ ಕಾರಣ ,ಎರಡೆರಡು ಬುತ್ತಿಗಳನ್ನು ಕೊಂಡುಹೋಗುವ ಅವಶ್ಯಕತೆ ಇರುವುದಿಲ್ಲ.ಅಥವಾ ಹಸಿವಿನ ಕಾರಣದಿಂದ ಪಾಠದ ಕಡೆಗೆ ಗಮನ ತಪ್ಪುವುದಿಲ್ಲ .ರಾತ್ರಿ ಉಳಿದ ಅನ್ನವನ್ನು (ಅಂದಾಜು ೧೦೦ಗ್ರಾಂ ಅಕ್ಕಿ) ಮಣ್ಣಿನ ಮಡಿಕೆಯಲ್ಲಿ ಹನ್ನೆರಡು ಗಂಟೆಗಳ ಕಾಲ ,ನೀರಿನಲ್ಲಿ ಹಾಕಿಟ್ಟು ಮರುದಿನ ಊಟಮಾಡುವುದರಿಂದ ಕಬ್ಬಿಣಾಂಶದ ಪ್ರಮಾಣ 3.4mg ನಿಂದ 73.91mg ವರೆಗೆ ಏರಿಕೆಯಾಗುತ್ತದೆ . ಅದೇ ರೀತಿ ಕ್ಯಾಲ್ಸಿಯಂ ಪ್ರಮಾಣವೂ ಹೆಚ್ಚುತ್ತದೆ . ಇದರಿಂದಾಗಿ ದೇಹಕ್ಕೆ ಶಕ್ತಿ ಹಾಗೂ ದೇಹವನ್ನು ತಂಪಾಗಿರಿಸಲು ಕೂಡಾ ಸಹಾಯಕಾರಿ ಎಂದು ವಿವಿಧ ಭಾಗಗಳ ಆಹಾರ ಅಭ್ಯಾಸದ ಬಗ್ಗೆ ಅಧ್ಯಯನ ನಡೆಸಿದ ವಿಜ್ಞಾನಿಗಳು ತಿಳಿಸಿದ್ದಾರೆ .
ಗಂಜಿ ಊಟವನ್ನು ಮಾಡುವುದರಿಂದ b6 b12 ವಿಟಮಿನ್ ಗಳು, ಸುಲಭವಾಗಿ ದೊರಕಲು ಸಹಾಯವಾಗುತ್ತದೆ ಹಾಗೂ ಇದನ್ನು ಬೇರೆ ಮೂಲಗಳಿಂದ ಪಡೆಯಲು ತುಂಬಾ ಕಷ್ಟ ಪಡ ಬೇಕಾಗುತ್ತದೆ ಎಂಬ ಅಂಶವನ್ನೂ ತಿಳಿಸಿದ್ದಾರೆ .ಗಂಜಿಯಲ್ಲಿ ನಡೆಯುವ ಬ್ಯಾಕ್ಟೀರಿಯಾ ಪ್ರಕ್ರಿಯೆಗಳಿಂದ ,ಇದು ಜೀರ್ಣಾಂಗ ಸಾಮರ್ಥ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತದೆ ಮತ್ತು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ .ಅದೇ ರೀತಿ ವಿವಿಧ ರೀತಿಯ ಗಂಟುನೋವು , ಚರ್ಮ ಸುಕ್ಕು ಕಟ್ಟುವಿಕೆಗಳಿಂದ ಇದು ತಡೆಯುತ್ತೆ ,ಚರ್ಮದ ಕಾಂತಿಗಾಗಿ ಹೆಣ್ಣುಮಕ್ಕಳು ಶೃಂಗಾರ ಸಾಧನಗಳಿಗೆ ಜೋತುಬೀಳಬೇಕಾದ ಅವಶ್ಯಕತೆಯನ್ನು ದೂರಮಾಡುತ್ತದೆ .
ಅಮೇರಿಕನ್ ನ್ಯೂಟ್ರಿಷನ್ ಅಸೋಸಿಯೇಷನ್, ಅನ್ನವನ್ನು ಗಂಜಿಯಾಗಿಸಿ ಉಣ್ಣುವದರಿಂದ ಆಗುವ ಲಾಭಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದೆ .
★ಗಂಜಿ ಊಟ ಮಾಡುವುದರಿಂದ ದೇಹವು ಸುಧೃಡ ಹಾಗೂ ಶಕ್ತಿಯುತವಾಗಿರುತ್ತದೆ .
★ಇದು ಜೀರ್ಣಾಂಗ ವ್ಯವಸ್ಥೆಗೆ ಅನುಕೂಲವಾಗಿರುವ ಬ್ಯಾಕ್ಟೀರಿಯಾಗಳನ್ನು ,ದೇಹಕ್ಕೆ ಹೇರಳವಾಗಿ ಒದಗಿಸುತ್ತವೆ
★ದೇಹವನ್ನು ತಂಪಾಗಿರಿಸುತ್ತೆ .
★ದೇಹದಲ್ಲಿರುವ ಜಡತ್ವ ದೂರವಾಗಿಸಿ ಮಲಬದ್ದತೆಯನ್ನು ತಡೆಗಟ್ಟಲು ಸಹಾಯಕಾರಿ .
★ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು ಸಹಾಯಕಾರಿ
★ವಿವಿಧ ರೀತಿಯ ಅಲರ್ಜಿ ಹಾಗೂ ಅಲ್ಸರ್ಗಳನ್ನು ತಡೆಗಟ್ಟುತ್ತದೆ
★ತಾರುಣ್ಯವನ್ನು ಧೀರ್ಘಾವಾಗಿರಿಸುತ್ತದೆ .
ಮತ್ತೇಕೆ ತಡ ,ಬೆಳಗ್ಗಿನ ತಿಂಡಿಯ ಬದಲಿಗೆ ಗಂಜಿ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ ಹಾಗೂ ಆರೋಗ್ಯವಂತರಾಗಿ .
ಸಂಗ್ರಹ ಮಾಹಿತಿ
Comments are closed.