ಎಲ್ಲಾ ಚಿಂತನೆಗಳನ್ನು ತೆಗೆದು ಹಾಕಲು ಅಸಾಧ್ಯವಾದರೂ, ಧ್ಯಾನವು ನಮ್ಮ ಮನಸ್ಸಿನಿಂದ ಹೆಚ್ಚು ನಕಾರಾತ್ಮಕ ಮತ್ತು ಪುನರಾವರ್ತಿತ ಆಲೋಚನೆಗಳನ್ನು ತೆಗೆದುಹಾಕಲು ಮತ್ತು ಕಡಿಮೆ ಮಾಡಲು ಪ್ರಬಲ ಸಾಧನವಾಗಿದೆ. ನಕಾರಾತ್ಮಕ ಚಿಂತನೆಯು ಮನಸ್ಸಿನ ಅಭ್ಯಾಸವಾಗಿರಬಹುದು. ನೀವು ಮೊದಲು ಋಣಾತ್ಮಕವಾಗಿ ಆಲೋಚಿಸುವುದನ್ನು ಪ್ರಾರಂಭಿಸಿದಾಗ ನಿಮ್ಮ ತಲೆಯಿಂದ ಆಲೋಚನೆಗಳನ್ನು ಹೊರಹಾಕಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿ. ನಕಾರಾತ್ಮಕ ಚಿಂತನೆಯ ಮನಸ್ಸನ್ನು ತೆರವುಗೊಳಿಸಲು ಈ ಕೆಳಗಿನ ಸೂತ್ರಗಳನ್ನು ಪಾಲಿಸಿ. ಯೋಗ, ಧ್ಯಾನ, ಪ್ರಾಣಾಯಾಮ, ಮುದ್ರೆಗಳನ್ನು ಅಭ್ಯಾಸ ಮಾಡಿ.
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದರಿಂದ ಇನ್ನೂರರ ತನಕ ಸಾಮಾನ್ಯ ಉಸಿರಾಟವನ್ನು ಲೆಕ್ಕ ಹಾಕುವ ಧ್ಯಾನ ಮಾಡಿ. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗಿ, ನಿರ್ಮಲಗೊಂಡು ಪ್ರಸನ್ನತೆಯಿಂದ ಅರಳುತ್ತದೆ. ಸರಳ ವ್ಯಾಯಾಮ, ಯೋಗಾಸನಗಳನ್ನು ಸುಮಾರು ಮೂವತ್ತು ನಿಮಿಷ ಮಾಡಿ. ಪ್ರಮುಖವಾಗಿ ತಾಡಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ಪದ್ಮಾಸನ, ವಜ್ರಾಸನ, ಶಶಾಂಕಾಸನ, ಸರ್ವಾಂಗಾಸನ, ಹಲಾಸನ, ಮಕರಾಸನ, ಭುಜಂಗಾಸನ, ಅಧೋಮುಖಶ್ವಾನಾಸನ, ಶವಾಸನ. ಮಂತ್ರಮುದ್ರೆ, ಮತ್ತು ಧ್ಯಾನ ಮಾಡಿ. ನಿಮ್ಮ ದೇಹಭಾಷೆಯನ್ನು (ಬಾಡಿ ಲಾಂಗ್ವೇಜ್) ಬದಲಾಯಿಸಿ. ಯೋಚನೆಗಳ ವಿಷಯವನ್ನು ಸುಧಾರಿಸಿ.
ತಲೆತಿರುಗುವ ಸಮಸ್ಯೆಗೆ ಯೋಗ ಮುದ್ರೆಗಳು
ತಲೆ ತಿರುಗಲು ಹಲವು ಕಾರಣಗಳಿವೆ. ಒಮ್ಮೆ ನುರಿತ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ನಿರಂತರ ತಲೆತಿರುಗುವಿಕೆಯಿಂದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಮತೋಲನ ಇಲ್ಲದಿರುವುದು, ಮಂಕಾದ ಭಾವನೆ ಹಾಗೂ ಅಸ್ಥಿರತೆ ಕಂಡುಬರುತ್ತದೆ. ವರ್ಟಿಗೊ ಸಮಸ್ಯೆಯಿಂದ ತಲೆತಿರುಗುವ ಅನುಭವವಾಗುತ್ತದೆ.
ಸರಳ ಯೋಗವು ನರಮಂಡಲದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರಿಂದ ನರಮಂಡಲ ಸಚೇತನಗೊಳ್ಳುತ್ತದೆ. ಸ್ಥಿರತೆಯನ್ನು ಸಾಧಿಸುತ್ತದೆ. ಸದ್ಯಕ್ಕೆ ನೀವು ವಜ್ರಾಸನ, ಪಶ್ಚಿಮೋತ್ಥಾನಾಸನ, ಸೇತುಬಂಧಾಸನ, ಮಕರಾಸನ, ಬಾಲಾಸನ, ಶವಾಸನ ಮಾಡಿದರೆ ಸಹಾಯವಾಗುತ್ತದೆ. ಸುಖಪ್ರಾಣಾಯಾಮ, ನಾಡಿಶುದ್ಧಿ, ಶೀತಲೀ ಪ್ರಾಣಾಯಾಮ, ಚಂದ್ರಭೇದ, ಭ್ರಾಮರಿ ಪ್ರಾಣಾಯಾಮಗಳನ್ನು ತಲಾ 9 ಬಾರಿ ಅಭ್ಯಾಸ ಮಾಡಿ. ಮುದ್ರೆಗಳಲ್ಲಿ ವ್ಯಾನಮುದ್ರೆ ಇಪ್ಪತ್ತರಿಂದ ಮೂವತ್ತು ನಿಮಿಷ, ಶೂನ್ಯಮುದ್ರೆ, ಆಕಾಶ ಮುದ್ರೆ ತಲಾ ಇಪ್ಪತ್ತು ನಿಮಿಷ ಮಾಡಿ. ಶಂಖ ಮುದ್ರೆಯಲ್ಲಿ ಹನ್ನೊಂದು ಬಾರಿ ಓಂಕಾರ ಪಠಿಸಿ.
Comments are closed.