· ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.
· ಭೇದಿಯಾಗುತ್ತಿರುವಾಗ ಖರ್ಜೂರ ಸೇವಿಸಿದರೆ ನಿವಾರಣೆಯಾಗುವುದು
· ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ
· ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು
· ವಾಂತಿಭೇದಿ ಆದಾಗ ತುಳಸಿಯ ಬೀಜ ಬಳಸಬೇಕು
· ರಕ್ತಭೇದಿ ಬಾಧೆಗೆ 10 ಗ್ರಾಂ ಗುಲಾಬಿಹೂಗಳನ್ನು ಎರಡು ಗಂಟೆಕಾಲ ನೀರಲ್ಲಿ ನೆನೆಯಿಟ್ಟು, ನುಣ್ಣಗೆ ಅರೆದು, ಅದಕ್ಕೆ ಕಲ್ಲುಸಕ್ಕರೆಪುಡಿ ಬೆರಸಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು. ನೆಗಡಿಗೆ ಗುಲಾಬಿಚಹ ಕುಡಿಯಬೇಕು
Comments are closed.