ಬೆಲ್ಲ ಬಳಕೆ ಮಾಡುವುದರಿಂದ ಈ 13 ಲಾಭಗಳನ್ನು ಪಡೆದುಕೊಳ್ಳಬಹುದು.
1. ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ.
2. ಇದು ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
3. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.
4. ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ.
5. ರಕ್ತಹೀನತೆ ಇರುವವರಿಗೆ ಬೆಲ್ಲ ಸೇವನೆ ಅತ್ಯುತ್ತಮ. ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ.
6. ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು.
7. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ. ಇದು ಮೊಡವೆಯನ್ನು ಕಡಿಮೆಗೊಳಿಸುತ್ತದೆ. ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ.
8. ಗಂಟಲು ಕೆರೆತ, ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.
9. ಬೆಲ್ಲದ ಚೂರನ್ನು ಬಾಯಿಗೆ ಹಾಕಿಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.
10. ಅಸ್ತಮಾ ಕಾಯಿಲೆ ಇರುವವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಒಳ್ಳೆಯದು.
11. ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ. ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ.
12. ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ.
13. ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲವನ್ನು ಸೇವಿಸುವುದರಿಂದ ನೋವು ಕಡಿಮೆಯಾಗುವುದು.
Comments are closed.