ವಿವಿಧ ರೀತಿಯ ಪದಾರ್ಥಗಳಲ್ಲಿ ಬಳಸಿಕೊಳ್ಳುವ ಆಲೂಗಡ್ಡೆಯಲ್ಲಿರುವ ರುಚಿ ತುಂಬಾ ಜನರಿಗೆ ಇಷ್ಟ. ಕೆಲವರಿಗೆ ಇದರಿಂದ ವಾಯು ಪ್ರಕೋಪ ಉಂಟಾಗುತ್ತದೆ ಎನ್ನುವ ಭೀತಿಯಿದೆ. ಆದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಆಲೂಗಡ್ಡೆ ಹಾಗೂ ಅದರ ಸಿಪ್ಪೆಯಲ್ಲಿ ಹಲವಾರು ಪೋಷಕಾಂಶಗಳಿದ್ದು, ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಆಲೂಗಡ್ಡೆಯ ಸಿಪ್ಪೆ ಹಾಗೂ ಆಲೂಗಡ್ಡೆ ಮುಖದಲ್ಲಿನ ಕಪ್ಪು ಕಲೆ ಹಾಗೂ ಮೊಡವೆಗಳ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅದೇ ರೀತಿಯ ಹಸಿ ಆಲೂಗಡ್ಡೆಯ ಜ್ಯೂಸ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.
ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ನಾರಿನಾಂಶ, ವಿಟಮಿನ್ ಬಿ, ಪೊಟಾಶಿಯಂ, ಮೆಗ್ನಿಶಿಯಂ, ಮ್ಯಾಂಗನೀಸ್, ಕಬ್ಬಿನಾಂಶ ಹಾಗೂ ಪ್ರೋಟೀನ್ ಸಮೃದ್ಧವಾಗಿದೆ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ತ್ವಚೆಗೆ ತುಂಬಾ ಪರಿಣಾಮಕಾರಿ. ಆಲೂಗಡ್ಡೆಯ ಆರೋಗ್ಯ ಲಾಭಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಹಸಿ ಆಲೂಗಡ್ಡೆಯ ಜ್ಯೂಸ್ ನಿಂದ ಆಗುವ ಲಾಭಗಳನ್ನು ಮುಂದೆ ಓದುತ್ತಾ ತಿಳಿಯಿರಿ….
ಜೀರ್ಣಕ್ರಿಯೆ ಮತ್ತು ರಕ್ತ ಸಂಚಾರ ಸುಧಾರಣೆ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ನೋವುಗಳು ರಕ್ತ ಸಂಚಾರ ಸರಿಯಾಗಿರದ ಪರಿಣಾಮ ದೇಹದ ಕೆಲವೊಂದು ಕೋಶಗಳಿಗೆ ಸರಿಯಾದ ಆಮ್ಲಜನಕ ಹಾಗೂ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ಇದರಿಂದ ಕೋಶಗಳು ತುಂಬಾ ದುರ್ಬಲವಾಗಿ ಹಲವಾರು ಕಾಯಿಲೆ ಹಾಗೂ ನೋವಿಗೆ ಕಾರಣವಾಗಬಹುದು. ದೇಹದ ಪ್ರತಿಯೊಂದು ಕೋಶಗಳಿಗೆ ಸರಿಯಾದ ಪೋಷಕಾಂಶಗಳು ಸಿಗಬೇಕಾದೆರ ಸರಿಯಾದ ಜೀರ್ಣಕ್ರಿಯೆ ಹಾಗೂ ರಕ್ತ ಸಂಚಾರವು ಅತೀ ಅಗತ್ಯವಾಗಿ ಬೇಕೇಬೇಕು. ಹಸಿ ಆಲೂಗಡ್ಡೆಯ ಜ್ಯೂಸ್ ಈ ಎಲ್ಲಾ ಸಮಸ್ಯೆ ನಿವಾರಿಸಲಿದೆ. ಇದು ಜೀರ್ಣಕ್ರಿಯೆ ಸುಧಾರಣೆ ಮಾಡಿ ರಕ್ತ ಸಂಚಾರ ಸರಾಗವಾಗಿ ದೇಹದ ಪ್ರತಿಯೊಂದು ಕೋಶವು ಪುನಶ್ಚೇತನಗೊಳ್ಳುವಂತೆ ಮಾಡುವುದು. ಜೀರ್ಣಕ್ರಿಯೆ ಉತ್ತಮವಾಗಲು 9 ಮನೆಮದ್ದುಗಳು ಇಲ್ಲಿವೆ.
ಕೊಲೆಸ್ಟ್ರಾಲ್ ತಗ್ಗಿಸುವುದು ಆಲೂಗಡ್ಡೆಯಲ್ಲಿ ನಾರಿನಾಂಶವು ಸಮೃದ್ಧವಾಗಿದೆ ಮತ್ತು ಇದು ದೇಹದಲ್ಲಿ ಹೆಚ್ಚಿರುವ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವುದು. ಆಲೂಗಡ್ಡೆಯಲ್ಲಿ ಕೊಲೆಸ್ಟ್ರಾಲ್ ಇಲ್ಲದೆ ಇರುವ ಕಾರಣದಿಂದ ಇದು ಕೊಲೆಸ್ಟ್ರಾಲ್ ರಹಿತ ಆಹಾರವಾಗಿದೆ. ಇದರಿಂದ ಹಸಿ ಆಲೂಗಡ್ಡೆ ಜ್ಯೂಸ್ ಅನ್ನು ಪ್ರಯತ್ನಿಸಬೇಕು.
ತಯಾರಿಸುವ ವಿಧಾನ ಆಲೂಗಡ್ಡೆ ಜ್ಯೂಸ್ ತಯಾರಿಸುವುದು ತುಂಬಾ ಸುಲಭ. ಒಂದು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದನ್ನು ತೊಳೆದು ಸಿಪ್ಪೆ ತೆಗೆದು ತುಂಡು ಮಾಡಿಕೊಂಡು ಸ್ವಲ್ಪ ನೀರಿನೊಂದಿಗೆ ಜ್ಯೂಸರ್ ಗೆ ಹಾಕಿ. ಸಾವಯವವಾಗಿ ಬೆಳೆದಿರುವಂತಹ ಆಲೂಗಡ್ಡೆಯ ಸಿಪ್ಪೆ ತೆಗೆಯದೆ ಜ್ಯೂಸ್ ತಯಾರಿಸಬಹುದು. ಆದರೆ ರಾಸಾಯನಿಕ ಬಳಸಿರುವ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಜ್ಯೂಸ್ ತೆಗೆಯಿರಿ. ಖಾಲಿ ಆಲೂಗಡ್ಡೆ ಜ್ಯೂಸ್ ಇಷ್ಟವಾಗದ ಇದ್ದರೆ ಕ್ಯಾರೆಟ್ ಅಥವಾ ಬೀಟ್ ರೂಟ್ ಜ್ಯೂಸ್ ನ್ನು ಇದಕ್ಕೆ ಮಿಶ್ರಣ ಮಾಡಿ. ರುಚಿ ಹೆಚ್ಚಿಸಲು ಶುಂಠಿ ರಸ ಹಾಕಿ. ಒಳ್ಳೆಯ ಫಲಿತಾಂಶ ಸಿಗಬೇಕಾದರೆ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮೊದಲು 200 ಮಿ.ಲೀ. ಸೇವಿಸಿ.
ಎಚ್ಚರಿಕೆ ಪ್ರತಿಯೊಂದು ಒಳ್ಳೆಯ ವಸ್ತು ಕೂಡ ಕೆಲವೊಂದು ದುರ್ಗುಣಗಳನ್ನು ಹೊಂದಿರುತ್ತದೆ. ಆಲೂಗಡ್ಡೆಯಲ್ಲಿ ಹೆಚ್ಚಿನ ಪೊಟಾಶಿಯಂ ಇದೆ. ಪೊಟಾಶಿಯಂ ಕಡಿಮೆ ಇರುವ ಆಹಾರ ಸೇವಿಸಬೇಕೆಂದು ವೈದ್ಯರು ಸೂಚಿಸಿದ್ದರೆ ಈ ಜ್ಯೂಸ್ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.
Comments are closed.