ಆರೋಗ್ಯ

ರಕ್ತದೊತ್ತಡ ನಿಯಂತ್ರಿಸಲು ಡ್ಯಾಶ್ ಡಯಟ್

Pinterest LinkedIn Tumblr

ಡ್ಯಾಶ್( ಡಿ ಎ ಎಸ್ ಎಚ್) ಎಂದರೆ ಆಂಗ್ಲದಲ್ಲಿ ಡಯಟರಿ ಅಪ್ರೋಚ್ ಟು ಸ್ಟಾಪ್ ಹೈಪರ್ಟೆನ್ಶನ್, ಸರಳವಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಆಹಾರ ವಿಧಾನ ಡ್ಯಾಶ್ ಡಯಟ್ ಜೀವನಪೂರ್ತಿ ಪಾಲಿಸಬೇಕಾದ ಆರೋಗ್ಯಕರ ಆಹಾರಕ್ರಮವಾಗಿದ್ದು ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ಆಹಾರದಲ್ಲಿ ಸೋಡಿಯಂ ಅಥವಾ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಇತರೆ ಪೌಷ್ಟಿಕಾಂಶಯುಕ್ತ ಪದಾರ್ಥಗಳಾದ ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇರಿಸಲು ಸಹಾಯ ಮಾಡಿ ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಈ ಡ್ಯಾಶ್ ಡಯಟ್ ಒಳಗೆ ಉಪ್ಪು, ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟರಾಲ್ ಪ್ರಮಾಣ ಕಡಿಮೆ ಇದೆ.

ಇದು ಹೆಚ್ಚು ತಾಜಾ ತರಕಾರಿ, ಹಣ್ಣುಗಳು ಮತ್ತು ಕೆನೆ ರಹಿತ ಹಾಲು ಮತ್ತು ಕೊಬ್ಬು ರಹಿತ ಹಾಲಿನ ಉತ್ಪನ್ನಗಳ ಸೇವನೆಯನ್ನು ಉತ್ತೇಜಿಸುತ್ತದೆ. ಇದು ಮಿತ ಪ್ರಮಾಣದ ಧಾನ್ಯಗಳು, ಮೀನು, ಕೋಳಿಮಾಂಸ ಮತ್ತು ಬೀಜಗಳನ್ನು ಒಳಗೊಂಡಿದೆ.
ಇದು ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪ್ರೋಟೀನ್ಗಳು ಮತ್ತು ನಾರಿನಂಶ ಸಮೃದ್ಧವುಳ್ಳ ಆಹಾರವಾಗಿವೆ.

ಆಹಾರ ಪದ್ದತಿಯ ನಿರ್ವಹಣೆ
ಕಡಿಮೆ ಕ್ಯಾಲೊರಿ, ಕಡಿಮೆ ಕೊಬ್ಬು, ಕಡಿಮೆ ಸೋಡಿಯಂ ಜೊತೆಗೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಇರಬೇಕು.
ಶಕ್ತಿ:ಬೊಜ್ಜು ಇರುವ ವ್ಯಕ್ತಿಗಳ ತೂಕವನ್ನು ಇಳಿಸಲು ಮತ್ತು ಸಾಮಾನ್ಯ ತೂಕವನ್ನು ಬೆಳೆಸಿಕೊಳ್ಳಲು ಕಡಿಮೆ ಕ್ಯಾಲೋರಿಗಳಿರುವ ಆಹಾರ ಕ್ರಮವನ್ನು ಪಾಲಿಸಲು ಹೇಳಲಾಗುತ್ತದೆ. ಒಂದು ಜಡ ಕೆಲಸಗಾರ 20 ಕಿಲೋ ಕ್ಯಾಲೋರಿ ಪ್ರತಿ ಕೆಜಿ ದೇಹದ ತೂಕವನ್ನು ಬೆಳೆಸಿಕೊಳ್ಳಬೇಕು ಮತ್ತು ಮಧ್ಯಮ ಸಕ್ರಿಯವಾಗಿರುವ ಕೆಲಸಗಾರನಿಗೆ 25 ಕಿಲೋ ಕ್ಯಾಲೋರಿ ಪ್ರತಿ ಕೆಜಿ ದೇಹದ ತೂಕವನ್ನು ಬೆಳೆಸಿಕೊಳ್ಳುವಂತೆ ಸೂಚಿಸಲಾಗುತ್ತದೆ.

ಪ್ರೋಟೀನ್:ಸರಿಯಾದ ಪೌಷ್ಠಿಕಾಂಶವನ್ನು ಒಂದು ದಿನಕ್ಕೆ 60 ಗ್ರಾಂ ಪ್ರೋಟೀನ್ ಅವಶ್ಯಕವಾಗಿದೆ.
ಕೊಬ್ಬುಗಳು:ಒಂದು ದಿನಕ್ಕೆ 20 ಗ್ರಾಮ್ನಷ್ಟು ಕೊಬ್ಬನ್ನು ಅಂದರೆ ಅಡುಗೆ ಎಣ್ಣೆಯನ್ನು ಬಳಸಬಹುದು.
ಕಾರ್ಬೋಹೈಡ್ರೇಟ್ಗಳು: ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ಸಹಾಯಕವಾಗಿವೆ.
ಸೋಡಿಯಂ: ಉಪ್ಪಿನ ಬಗ್ಗೆ ಡ್ಯಾಶ್ ಡಯಟ್ ನಲ್ಲಿ ಹೆಚ್ಚಾಗಿ ತಿಳಿಯಲು ಡ್ಯಾಶ್ ಡಯಟ್ ಈ ರೀತಿಯಾಗಿದೆ

ಸಂಪೂರ್ಣ ಧಾನ್ಯಗಳು(ದಿನದಲ್ಲಿ 6 ರಿಂದ 8 ಭಾಗ)
ತರಕಾರಿಗಳು(ದಿನದಲ್ಲಿ 4 ರಿಂದ 5 ಭಾಗ)
ಕೊಬ್ಬು ರಹಿತ ಅಥವಾ ಕೆನೆರಹಿತ ಹಾಲು ಮತ್ತು ಹಾಲಿನ ಉತ್ಪನ್ನಗಳು (ದಿನಕ್ಕೆ 2 ರಿಂದ 3 ಭಾಗ)
ತೆಳು ಮಾಂಸ, ಚಿಕನ್ ಮತ್ತು ಮೀನು (ದಿನಕ್ಕೆ 6 ಭಾಗ ಅಥವಾ ಅದಕ್ಕಿಂತ ಕಡಿಮೆ )
ಬೀಜಗಳು, ಒಣ ಹಣ್ಣುಗಳು ಮತ್ತು ಕಾಳುಗಳು (ವಾರಕ್ಕೆ 4 ರಿಂದ 5 ಭಾಗ)
ಕೊಬ್ಬು ಮತ್ತು ಎಣ್ಣೆ (ದಿನಕ್ಕೆ 2 ರಿಂದ 3 ಭಾಗದಷ್ಟು)
ಸಿಹಿತಿಂಡಿಗಳು ಅದು ಕಡಿಮೆ ಕೊಬ್ಬುಳ್ಳ (ವಾರಕ್ಕೆ 5 ಭಾಗ ಅಥವಾ ಅದಕ್ಕಿಂತ ಕಡಿಮೆ )
ಸೋಡಿಯಂ (ದಿನಕ್ಕೆ 2,300 ಮಿಲಿ ಗ್ರಾಂ ಕ್ಕಿಂತ ಹೆಚ್ಚಿರಬಾರದು)

ಡ್ಯಾಶ್ ಡಯಟ್ ಸಲಹೆಗಳು
ಅಡುಗೆಯಲ್ಲಿ ಹಾಕುವ ಉಪ್ಪನ್ನು ಕಡಿಮೆ ಮಾಡಿ, ಬದಲಿಗೆ ರುಚಿಯಾಗಿ ಅಡುಗೆ ಮಾಡಿ
ನಿಮ್ಮ ತಟ್ಟೆಯನ್ನು ವಿವಿಧ ತರಕಾರಿಗಳಿಂದ ಅಲಂಕರಿಸಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದಲ್ಲಿ ಇದು ಜೊತೆಯಲ್ಲಿ ತಿನ್ನಬೇಕು.
ನಿಮ್ಮ ಊಟದ ಜೊತೆಗೆ ಒಂದು ಭಾಗದಷ್ಟು ಹಣ್ಣುಗಳನ್ನು ಸೇರಿಸಿ ಇಲ್ಲವೇ ಒಣ ಹಣ್ಣುಗಳನ್ನು ಸಹ ತಿಂಡಿಗಳಂತೆ ತಿನ್ನುವುದನ್ನು ಅಭ್ಯಸಿಸಿಕೊಳ್ಳಿ. ಆದರೆ ಅದರಲ್ಲಿ ಸಕ್ಕರೆ ಇರದಂತೆ ನೋಡಿಕೊಳ್ಳಿ.
ಕಡಿಮೆ ಕೊಬ್ಬಿರುವ ಅಥವಾ ಕೆನೆರಹಿತ ಹಾಲಿನ ಉತ್ಪನ್ನಗಳನ್ನು ಮಾತು ಕೆಂಪು ಮಾಂಸವನ್ನು ಸಾಧ್ಯವಾದಷ್ಟು 6 ಔನ್ಸಗಳಿಗೆ ಮಿತಗೊಳಿಸಿರಿ. ಸಸ್ಯಾಹಾರಿ ಸೇವನೆಯನ್ನು ಹೆಚ್ಚು ಮಾಡಿ.

Comments are closed.