ನೀವು ದಿನವಿಡೀ ಮಂಚದ ಮೇಲೆ ಕುಳಿತು ಯಾವುದೇ ರೀತಿಯ ದೈಹಿಕ ಚಟುವಟಿಕೆಯಿಲ್ಲದೆ ಟಿವಿ ನೋಡುತ್ತಿದ್ದರೆ ನೀವು ಕೌಚ್ ಪೊಟಾಟೋ ಸಿಂಡ್ರೋಮ್ ಗೆ ಆಹುತಿಯಾಗುವವರಲ್ಲಿ ಒಬ್ಬರಾಗುವಿರಿ.
ಕೌಚ್ ಪೊಟಾಟೋ ಸಿಂಡ್ರೋಮ್ ಎಂದರೇನು?
ಸಾಮಾನ್ಯವಾಗಿ ಕೌಚ್ ಪದವನ್ನು ನಾವು ಮಂಚ ಅಥವಾ ಯಾವುದೇ ರೀತಿಯ ಆರಾಮದಾಯಕ ಕುರ್ಚಿಯಲ್ಲಿ ಕುಳಿತು ದಿನವಿಡೀ ಟಿವಿ ನೋಡುವುದರ ಜೊತೆಯಲ್ಲಿ ಚಿಪ್ಸ್ ಅಥವಾ ಬೇರೆ ರೀತಿಯ ಜಂಕ್ ಆಹಾರ ತಿನ್ನುವವರನ್ನು ಉದ್ದೇಶಿಸಿ ಹೇಳುತ್ತೇವೆ. ಇವರು ದಿನವಿಡೀ ಕುಳಿತು, ಅಲ್ಲೇ ಮಲಗಿ, ಎಣ್ಣೆಯುಕ್ತ ಜಿಡ್ಡಿನ ಪದಾರ್ಥಗಳನ್ನು ಮೆಲ್ಲುತ್ತಾ ಟಿವಿ ಪರದೆಯ ಮುಂದೆಯೇ ಆಸೀನರಾಗಿರುತ್ತಾರೆ. ಅವರು ಜಡ ಜೀವನಶೈಲಿಯನ್ನು ಹೊಂದಿದ್ದು, ಯಾವುದೇ ರೀತಿಯ ಕನಿಷ್ಠ ಚಟುವಟಿಕೆಯನ್ನು ಸಹ ಮಾಡುವುದಿಲ್ಲ. ಇದನ್ನು ಅವರು ತಿಳಿದುಕೊಂಡು, ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವವರೆಗೆ ಸಮಯ ಮೀರಿ ಅವರು ಕೌಚ್ ಪೊಟಾಟೋ ಸಿಂಡ್ರೋಮ್ ಎಂಬ ಕಾಯಿಲೆಗೆ ಒಳಗಾಗಿ ಬಿಟ್ಟಿರುತ್ತಾರೆ.
ವಿಕಿಪೀಡಿಯ ಪ್ರಕಾರ ಜಡ ಜೀವನಶೈಲಿಎಂದರೆ ಯಾವುದೇ ರೀತಿಯ ಚಟುವಟಿಕೆ ಅಥವಾ ದೈಹಿಕ ವ್ಯಾಯಾಮ ಇಲ್ಲದಿರುವುದು. ಇಂತಹವರನ್ನು ನಾವು ಸಾಮನ್ಯ ಆಡು ಭಾಷೆಯಲ್ಲಿ ಸೋಮಾರಿ ಅಥವಾ ಮಂಚದ ಆಲೂಗೆಡ್ಡೆ ಎಂದು ಕರೆಯುತ್ತೇವೆ. ಇದು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳ ನಾಗರಿಕರಲ್ಲಿ ಕಾಣಬಹುದಾಗಿದೆ. ಜಡ ಜೀವನಶೈಲಿ ಎಂದರೆ ದಿನವಿಡೀ ಒಂದೇ ಜಾಗದಲ್ಲಿ ಕುಳಿತುಕೊಂಡು, ಓದುವುದು, ಟಿವಿ ನೋಡುವುದು, ವಿಡಿಯೋ ಗೇಮ್ಸ್ ಆಡುವುದು, ಕಂಪ್ಯೂಟರ್ನಲ್ಲಿ ಕೆಲಸ ಮಾಡುವುದು ಹೀಗೆ ಯಾವುದೇ ಕೆಲಸ ದೈಹಿಕ ಚಟುವಟಿಕೆ ಇಲ್ಲದೆಯೇ ಮಾಡುವುದು. ಇವರುಗಳು ಪ್ರತಿದಿನವೂ ಭಾನುವಾರದಂತೆ ತಮ್ಮ ಜೀವನಶೈಲಿಯನ್ನು ಹೊಂದಿರುತ್ತಾರೆ.
ಕೆಲವು ಅಧ್ಯನಗಳ ಪ್ರಾಕಾರಕೋ Q10 ಕೊರತೆ ಈ ರೀತಿಯ ಜೀವನಶೈಲಿಗೆ ಕಾರಣವಾಗಿದೆ. ಹಾಗಾಗಿ ನಿಮ್ಮ ವೈದ್ಯರ ಬಳಿ ನಿಮ್ಮ ಸಮಸ್ಯೆಯ ಬಗ್ಗೆ ಮಾತಾಡಿರಿ.
ಮಹಿಳೆಯರು ಅಥವಾ ಗಂಡಸರು ಹೆಚ್ಚು ಹೊತ್ತು ಈ ರೀತಿ ಕಾಲ ಕಳೆಯುವುದರಿಂದಜೀವಿತಾವಧಿಯ ಮುನ್ನವೇ ಸಾವು ಬರುವುದು. ಸಾಮಾನ್ಯ ಜನರು ತಮ್ಮ ವ್ಯಾಯಾಮವಿಲ್ಲದ ಸಮಯದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಗಮನಕೊಡಬೇಕು. ತಮ್ಮ ದಿನನಿತ್ಯದ ಕುಳಿತುಕೊಳ್ಳುವ ಸಮಯವನ್ನು ಕಡಿಮೆ ಮಾಡಲು ಯಾವುದಾದರೂ ಚಲಿಸುವ, ದೈಹಿಕ ಚಟುವಟಿಕೆ ಇರುವ ಅಥವಾ ವ್ಯಾಯಾಮ ಮಾಡುವ ಕೆಲಸಗಳ ಕಡೆ ಒಲವು ತೋರಿಸಬೇಕು.
ಜಡ ಜೀವನಶೈಲಿಯಿಂದ ಮಾನಸಿಕ ಒತ್ತಡ, ಹೃದ್ರೋಗ ಸಮಸ್ಯೆಗಳು ಮತ್ತು ಇತರೆ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವು ನಿಮ್ಮ ಸಮಯವನ್ನು ಅತಿ ಹೆಚ್ಚು ದೈಹಿಕ ವ್ಯಾಯಾಮ ಅಥವಾ ಚಟುವಟಿಕೆಗಳಲ್ಲಿ ಕಳೆಯುವುದರಿಂದ ನೀವು ಈ ರೋಗವನ್ನು ತಡೆಗಟ್ಟಬಹುದು.
Comments are closed.