ಲೈಂಗಿಕ ಜೀವನ ಸುಖವಾಗಿರಬೇಕು ಎಂದು ಎಲ್ಲರೂ ಅಪೇಕ್ಷೆ ಪಡುತ್ತಾರೆ. ಆದರೆ ನೀವು ಮಾಡುವ ಇಂದಿನ ಎಡವಟ್ಟು ಮುಂದೆ ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದರೆ? ಹೌದು, ನೀವಿಂದು ಮಾಡುತ್ತಿರುವ ಸಣ್ಣ ತಪ್ಪು ನಿಮ್ಮ ದಾಂಪತ್ಯ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಲಿದೆ ಎಂದು ಎಚ್ಚರಿಸಿದೆ ಅಧ್ಯಯನ ತಂಡವೊಂದು.
ಲೈಂಗಿಕ ಕ್ರಿಯೆಯು ವಯೋಸಹಜ ಪ್ರಕ್ರಿಯೆ. ಎರಡು ದೇಹಗಳು ಪರಸ್ಪರ ಮನದಾಳದಿಂದ ಮಿಲನ ಹೊಂದುವುದು ನಿಸರ್ಗದ ನಿಯಮ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಗೆಜೆಟ್ಗಳದ್ದೇ ಕಹಾನಿ. ಮಕ್ಕಳಿಂದ ಹಿಡಿದು ಮುದುಕರರೆಗೂ ಮೊಬೈಲ್, ಟಿವಿಯೊಂದಿಗೆ ಸಮಯ ಕಳೆಯದವರಿಲ್ಲ. ಅದರಲ್ಲೂ ಯುವ ಜನಾಂಗಕ್ಕೆ ಮೊಬೈಲ್ ಎಂಬುದು ಗೀಳಾಗಿಬಿಟ್ಟಿದೆ. ನಿಮ್ಮ ಈ ಅಭ್ಯಾಸವೇ ಲೈಂಗಿಕ ಜೀವನಕ್ಕೆ ತೊಡಕುಂಟು ಮಾಡಲಿದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.
ಈ ಸಂಶೋಧನೆಯ ಪ್ರಕಾರ, ನೀವು 5 ಗಂಟೆಗಿಂತ ಹೆಚ್ಚು ಹೊತ್ತು ಟಿವಿ ಅಥವಾ ಮೊಬೈಲ್ನಲ್ಲಿ ಕಳೆದರೆ ನಿಮ್ಮ ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ. ಇಲ್ಲಿ ಮುಖ್ಯವಾಗಿ ನಿಮ್ಮ ದೇಹದ ವೀರ್ಯಾಣು ಸಂಖ್ಯೆ ಶೇ.35 ರಷ್ಟು ಕಡಿಮೆಯಾಗುತ್ತದೆ ಎಂದು ವೈದ್ಯಕೀಯ ಸಂಶೋಧಕರು ತಿಳಿಸಿದ್ದಾರೆ.
ಈಗಾಗಲೇ ಜಂಕ್ ಫುಡ್ ಸೇವನೆಯಿಂದ ಲೈಂಗಿಕ ಆಸಕ್ತಿ ಕುಂಠಿತವಾಗುತ್ತದೆ ಎಂಬುದನ್ನು ಪತ್ತೆಯಾಗಿದೆ. ಇದೀಗ ಮೊಬೈಲ್, ಟಿವಿ ಕೂಡ ಲೈಂಗಿಕತೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ದೃಢಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಸಮಸ್ಯೆಯು 18 ರಿಂದ 25 ವರ್ಷದವರಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ಇದರಿಂದ ಮುಂದೆ ಸಂತಾನನೋತ್ಪತಿಯ ಶಕ್ತಿ ಕುಂದಲಿದೆ ಎಂದು ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ.
ಇದರಿಂದ ವೈವಾಹಿಕ ಜೀವನ ಅಯೋಮಯವಾಗುವುದಲ್ಲದೆ, ದಂಪತಿಗಳ ನಡುವೆ ಕಲಹಕ್ಕೆ ದಾರಿ ಮಾಡಿಕೊಡಲಿದೆ. 18 ರಿಂದ 22 ವಯಸ್ಸಿನ ವಿದ್ಯಾರ್ಥಿಗಳ ಮೇಲೆ ನಡೆಸಲಾದ ಈ ಅಧ್ಯಯನದಲ್ಲಿ ವೀರ್ಯದ ಪ್ರಮಾಣ ಕುಂಠಿತವಾಗುತ್ತಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಇದರಿಂದ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದ ಸಾವು ಕೂಡ ಸಂಭವಿಸಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಹೀಗಾಗಿ ಲೈಂಗಿಕ ಜೀವನ ಸುಖಕರವಾಗಿರಲು ಈಗಲೇ ಸಾಧ್ಯವಾದಷ್ಟು ಅತಿಯಾದ ಟಿವಿ, ಮೊಬೈಲ್ ವೀಕ್ಷಣೆಯಿಂದ ದೂರವಿರಿ. ಹಾಗೆಯೇ ನಿಯಮಿತ ವ್ಯಾಯಾಮ ಮತ್ತು ಉತ್ತಮ ಜೀವನಶೈಲಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇದರಿಂದ ವಿರ್ಯಾಣು ಪ್ರಮಾಣ ವೃದ್ಧಿಸಿಕೊಳ್ಳಬಹುದು. ಹಾಗೆಯೇ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಕೊಳ್ಳಬಹುದು ಎಂದು ಸಂಶೋಧನಾ ತಂಡ ತಿಳಿಸಿದೆ.
Comments are closed.