ಪರಂಗಿ ಹಣ್ಣು ಹಿತ್ತಲಲ್ಲಿ ಬೆಳೆಯುವ ಹಣ್ಣು. ಯಾವುದೇ ರೀತಿಯ ಆರೈಕೆ ಇಲ್ಲದೆ ಬೆಳೆಯುವ ಈ ಹಣ್ಣಿನ ಬಗ್ಗೆ ಸ್ವಲ್ಪ ಹೆಚ್ಚೇ ತಾತ್ಸಾರ.ಆದರೆ ಇದು ಪೋಷಕಾಂಶಗಳನ್ನು ಹೊಂದಿದ ಹಣ್ಣು. ಇದರಲ್ಲಿ ನಾರಿನಂಶ ಹೇರಳವಾಗಿದೆ. ಜೊತೆಗೆ ಕೆರೋಟಿನ್ , ವಿಟಮಿನ್ ಸಿ , ಖನಿಜ ಲವಣಗಳು ಹೇರಳವಾಗಿದೆ.ಅಷ್ಟೆ ಅಲ್ಲ ದೆ ವಿಟಮಿನ್ ಎ ಪೊಟಾಷಿಯಂ ಸಹ ಬಚ್ಚಿಟ್ಟು ಕೊಂಡಿದೆ. ಹಣ್ಣು ಹೃದಯದ ಆರೋಗ್ಯ ಕಾಪಾಡುತ್ತದೆ. ಬೀಜ ಹಾಗೂ ಎಳೆಗಳು ಚರ್ಮ ಸಂಬಂಧಿತ ಕಾಯಿಲೆಗಳು, ಹೊಟ್ಟೆಯ ಹುಳುವನ್ನು ಸಹ ದೂರ ಮಾಡುತ್ತದೆ. ಇದು ಮಲಬದ್ಧತೆಯನ್ನು ದೂರ ಮಾಡುತ್ತದೆ. ಚರ್ಮದ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಉಳ್ಳವರು ಇದರ ಪ್ಯಾಕ್ ಹಾಗೂ ಸೇವನೆ ಮಾಡುವತ್ತ ಗಮನ ಕೊಟ್ಟರೆ ಉತ್ತಮ ಫಲಿತಾಂಶ ಹೊಂದ ಬಹುದಾಗಿದೆ. ಆದರೆ ಅತಿಯಾದರೆ ಅಮೃತವೂ ವಿಷ .ಮಿತಿಯಲ್ಲಿ ಬಳಕೆ ಮಾಡಿ.
ಅತಿಯಾದ ತೂಕವನ್ನು ಹೊಂದಿರುವವರು ತಮ್ಮ ದೈನಂದಿನ ಆಹಾರದಲ್ಲಿ ಪಪ್ಪಾಯವನ್ನು ಸೇರಿಸುವುದು ಅತ್ಯವಶ್ಯಕ. ಕ್ಯಾಲೋರಿ ಕಡಿಮೆ ಇರುವ ಈ ಹಣ್ಣು ನಿಮ್ಮ ಕರುಳಿನ ಚಲನೆಯನ್ನು ತೆರವುಗೊಳಿಸಿ ತೂಕ ಇಳಿಕೆಯಾಗುವಂತೆ ಮಾಡುತ್ತದೆ.
ನಿಮ್ಮನ್ನು ರೋಗಿಯನ್ನಾಗಿ ಮಾಡುವ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ಪಪ್ಪಾಯ ಒದಗಿಸುತ್ತದೆ. ಪಪ್ಪಾಯದ ಒಂದು ತುಂಡು 200% ದಷ್ಟು ವಿಟಮಿನ್ ಸಿಯನ್ನು ಒಳಗೊಂಡಿರುತ್ತದೆ. ಇದು ನಿಮ್ಮ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.
ಪಪ್ಪಾಯದಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣವು ಮಧುಮೇಹಿಗಳಿಗೆ ತಿನ್ನಲು ಯೋಗ್ಯವಾಗಿದೆ. ಮಧುಮೇಹ ಇಲ್ಲದವರೂ ಕೂಡ ಅದರಿಂದ ರಕ್ಷಣೆ ಹೊಂದಲು ಇದನ್ನು ನಿಯಮಿತವಾಗಿ ಸೇವಿಸಬಹುದು.
ಪಪ್ಪಾಯದಲ್ಲಿರುವ ವಿಟಮಿನ್ ಎ ಕಣ್ಣುಗಳಿಗೆ ಅತ್ಯಂತ ಅಗತ್ಯ. ಕಣ್ಣು ಮಂಜಾಗುವುದು ಪೊರೆ ಬರುವುದು ಮೊದಲಾದ ಸಮಸ್ಯೆಗಳು ನಿಮ್ಮಿಂದ ದೂರಾಗುತ್ತವೆ.
ಇದೊಂದು ಆಘಾತಕಾರಿ ರೋಗವಾಗಿದ್ದು ಮಾನವನ ಆಯಸ್ಸನ್ನು ಕಡಿಮೆ ಮಾಡುತ್ತದೆ. ಪಪ್ಪಾಯದಲ್ಲಿರುವ ಆಂಟಿ ಇನ್‌ಫ್ಲಾಮೇಟರಿ ಅಂಶಗಳು ವಿಟಮಿನ್ ಸಿಯೊಂದಿಗೆ ಜೊತೆಗೂಡಿ ಸಂಧಿವಾತದ ಮೂಲವನ್ನು ಹೊರದೂಡುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಸಿಯುಳ್ಳ ಆಹಾರವನ್ನು ಸೇವಿಸುವವರು ಸಂಧಿವಾತದಿಂದ ಗುಣಮುಖರಾಗಿರುವುದು ಸಂಶೋಧನೆಗಳಿಂದ ತಿಳಿದು ಬಂದಿದೆ.
ನಿಮ್ಮ ಜೀರ್ಣಕ್ರಿಯೆಗೆ ತೊಡಕುಂಟುಮಾಡುವ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಖಂಡಿತ ಸಾಧ್ಯವಿಲ್ಲದ ಮಾತು. ಹೆಚ್ಚು ಎಣ್ಣೆಯಿಂದ ತಯಾರಿಸಲಾದ ಝಂಕ್ ಫುಡ್ ಮತ್ತು ಹೋಟೇಲಿನ ಊಟಕ್ಕೆ ನಾವಿಂದು ಬಲಿಪಶುಗಳಾಗುತ್ತಿದ್ದೇವೆ. ಪಪ್ಪಾಯವನ್ನು ದಿನವೂ ತಿನ್ನುವುದು ಝಂಕ್ ಫುಡ್‌ನಿಂದ ಉಂಟಾಗುವ ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಗಟ್ಟಿ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ.
ಮುಟ್ಟಿನ ನೋವು ಅನುಭವಿಸುವ ಹೆಂಗಳೆಯರು ತಿನ್ನಲೇಬೇಕಾದ ಹಣ್ಣಾಗಿದೆ ಪಪ್ಪಾಯ. ಇದರಲ್ಲಿರುವ ಪೆಪೇನ್ ಅಂಶ ನೋವನ್ನು ನಿವಾರಿಸಿ ಋತುಚಕ್ರವನ್ನು ನಿರಾಳಗೊಳಿಸುತ್ತದೆ.
ಯವ್ವೌನವನ್ನು ಪ್ರತಿಯೊಬ್ಬರೂ ಬಯಸುವುದು ಸಾಮಾನ್ಯ. ಆದರೆ ಇದನ್ನು ಹೇಳಿದಷ್ಟು ಸುಲಭವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಪಪ್ಪಾಯವನ್ನು ದಿನವೂ ತಿನ್ನುವುದು ನಿಮ್ಮ ವಯಸ್ಸನ್ನು 5 ವರ್ಷ ಕಡಿಮೆಯಾದಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ ಮತ್ತು ಬೇಟಾ ಕ್ಯಾರಟೀನ್ ರೇಡಿಕಲ್ ಹಾನಿಯಿಂದ ತ್ವಚೆಯನ್ನು ರಕ್ಷಿಸುತ್ತದೆ ಮತ್ತು ನೆರಿಗೆಗಳು ಹಾಗೂ ಇತರ ಮುಪ್ಪಿನ ಲಕ್ಷಣಗಳನ್ನು ತೊಡೆದುಹಾಕುತ್ತದೆ.
ಪಪ್ಪಾಯದಲ್ಲಿರುವ ಉತ್ಕರ್ಷಣ ನಿರೋಧಿ ಅಂಶ, ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಫ್ಲೇವಿನೋಯಿಡ್ಸ್ ಕರುಳಿನ ಕೋಶಗಳನ್ನು ಮುಕ್ತ ರೇಡಿಕಲ್ ಹಾನಿಯಿಂದ ತಪ್ಪಿಸುತ್ತವೆ. ಪಪ್ಪಾಯವು ಕರುಳಿನ ಮತ್ತು ಜನನೇಂದ್ರಿಯಾದ ಕ್ಯಾನ್ಸರ್ ಅನ್ನು ತಡೆಗಟ್ಟಿರುವ ನಿದರ್ಶನಗಳು ನಮ್ಮ ಕಣ್ಣಮುಂದಿದೆ.
ದಿನ ಪೂರ್ತಿ ವಿಶ್ರಾಂತಿಯಿಲ್ಲದೆ ದುಡಿದು, ಮನೆಗೆ ಬಂದಾಕ್ಷಣ ಒಂದು ಪ್ಲೇಟ್ ಪಪ್ಪಾಯವನ್ನು ಹೊಟ್ಟೆಗೆ ಇಳಿಸುವುದು ಉತ್ತಮ ಉಪಾಯವಾಗಿದೆ. ವಿಟಮಿನ್ ಸಿ ಅಂಶ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಪಪ್ಪಾಯ ಜೀರ್ಣಕಾರಿ ಶಕ್ತಿಯನ್ನು ಪಡೆದಿದೆ, ಜೀರ್ಣಾಂಗದ ಅನೇಕ ತೊಂದರೆಗಳಿಗೆ ನಿವಾರಣೆ ನೀಡುತ್ತದೆ.
ಪಪ್ಪಾಯದಲ್ಲಿ ವಿಟಮಿನ್ ‘ಎ” ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇರುಳುಗಣ್ಣು ದೋಷ ನಿವಾರಣೆಗೆ ಸಹಕಾರಿ.
ಮೂಲವ್ಯಾಧಿಯಿಂದ ಬಳಲುವವರಿಗೆ ಇದು ಒಳ್ಳೆಯದು. ನರದ ದೌರ್ಬಲ್ಯ ಇರುವವರಿಗೆ, ಹೃದ್ರೋಗದಿಂದ ಬಳಲುವವರಿಗೆ ಇದು ಉತ್ತಮವಾಗಿದೆ.
ಬಾಣಂತಿಯರು ಪಪ್ಪಾಯ ಸೇವಿಸಿದರೆ ಅವರ ಎದೆಹಾಲು ವರ್ಧಿಸುವುದು. (ಗರ್ಭಿಣಿ ಸ್ತ್ರೀಯರು ಮೂರು ತಿಂಗಳ ವರೆಗೆ ಪಪ್ಪಾಯ ಸೇವಿಸಬಾರದು, ನಂತರ ಸೇವಿಸಬಹುದು.)
ಮಲಬದ್ಧತೆ ಇರುವವರು ಊಟದ ನಂತರ ಇದನ್ನು ಸೇವಿಸಬಹುದು.
ಮೊಡಮೆ ಮತ್ತು ಗುಳ್ಳೆಗಳಿಗೆ ಪಪ್ಪಾಯ ತಿರುಳನ್ನು ಲೇಪಿಸಬೇಕು.
ಕೂದಲಿನ ಆರೋಗ್ಯಕ್ಕೆ, ಹದಿನೈದು ದಿನಗಳಿಗೊಮ್ಮೆ, ಚೆನ್ನಾಗಿ ಹಣ್ಣಾಗಿರುವ ಪಪ್ಪಾಯ ಸಿಪ್ಪೆ, ತಿರುಳು, ಬೀಜ ಸಮೇತ ನುಣ್ಣಗೆ ಅರೆಯಬೇಕು. ಇದನ್ನು ತಲೆಗೆ ಲೇಪಿಸಿ ಅರ್ಧ ಗಂಟೆಯ ನಂತರ ತೊಳೆಯಬೇಕು. ಇದರಿಂದ ಕೂದಲು ಕಾಂತಿಯುಕ್ತವಾಗುತ್ತವೆ, ಆರೋಗ್ಯಕರವಾಗುತ್ತವೆ.
ಪಪ್ಪಾಯ ಹಣ್ಣಿನ ಸೇವನೆಯಿಂದ ಮಲಬದ್ಧತೆ ಹಾಗೂ ಉರಿಮೂತ್ರ ಗುಣವಾಗುತ್ತದೆ.
ಹೊಟ್ಟೆಯ ಹುಳಗಳನ್ನು ನಿಯಂತ್ರಿಸಲು 15 ಹನಿಯಷ್ಟು ಪಪ್ಪಾಯ ಗಿಡದ ಹಾಲನ್ನು 15ಹನಿ ಹರಳೆಣ್ಣೆಯ ಜತೆ ನಿಯಮಿತ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಪಪ್ಪಾಯದ ಹಣ್ಣು ಯಕೃತ್ ಮತ್ತು ಕರುಳಿನ ಆರೋಗ್ಯಕ್ಕೆ ಹಿತ. ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ.
ಬಾಯಿ ಹುಣ್ಣಿಗೆ ಪಪ್ಪಾಯ ಗಿಡದ ಹಾಲನ್ನು ಹುಣ್ಣಿಗೆ ಹಚ್ಚಿದರೆ ಕಡಿಮೆಯಾಗುತ್ತದೆ.
ಪಪ್ಪಾಯ ಫೇಶಿಯಲ್.
ಪಪ್ಪಾಯಿ ಹಣ್ಣನ್ನು ರುಬ್ಬಿ. ಆ ಪೇಸ್ಟನ್ನು ಮುಖಕ್ಕೆ ಲೇಪಿಸಿ. ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ, ಮುಖಕ್ಕೆ ಹೊಳಪು ಬರುತ್ತದೆ.
* ಪಪ್ಪಾಯ ತಿರುಳನ್ನು ಜೇನಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿ 15 ನಿಮಿಷದ ನಂತರ ಮುಖ ತೊಳೆದರೆ ಒರಟಾದ ಚರ್ಮ ಮದುವಾಗುತ್ತದೆ.
* ಮೊಸರು ಮತ್ತು ಪಪ್ಪಾಯ ಮಿಕ್ಸ್ ಮಾಡಿದ ಪೇಸ್ಟನ್ನು ಹೇರ್ ಪ್ಯಾಕ್ ಮಾಡಿ. ಅರ್ಧ ಗಂಟೆ ಬಳಿಕ ಕಡಲೆ ಹಿಟ್ಟು ಉಪಯೋಗಿಸಿ ತೊಳೆಯಿರಿ. ಹೊಟ್ಟು ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ.
* ಕಪ್ಪು ಚಹಾವನ್ನು ಸೋಸಿ, ಆರಿಸಿ. ಅದರಲ್ಲಿ ಪಪ್ಪಾಯ ಪೇಸ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಲೇಪಿಸಿ, ನಿಧಾನವಾಗಿ ಮಸಾಜ್ ಮಾಡಿದಲ್ಲಿ, ಮುಖದ ಜಿಡ್ಡು ನಿವಾರಣೆಯಾಗುವುದು.
* ಆಗಾಗ್ಗೆ ಪಪ್ಪಾಯಿ ಸಿಪ್ಪೆಯಿಂದ ಮುಖವನ್ನು ನಿಧಾನವಾಗಿ ಮಸಾಜ್ ಮಾಡಿದರೆ ಮುಖದ ಕಲೆಗಳು ನಿವಾರಣೆಯಾಗುವುದು.
* ಪಪ್ಪಾಯಿರಸಕ್ಕೆ ನಿಂಬೆ ರಸ ಹಾಗೂ ಜೇನು ಬೆರೆಸಿ ಲೇಪಿಸಿದರೆ ಮೊಡವೆಯೂ ಕಡಿಮೆಯಾಗುವುದು.
* ಪಪ್ಪಾಯಿಗೆ 1 ಚಮಚ ರವೆ, ತುಪ್ಪ ಹಾಕಿ ಪೇಸ್ಟ್ ಮಾಡಿ, ಮುಖಕ್ಕೆ ಸ್ಕ್ರಬ್ಬಿಂಗ್ ಮಾಡಿದರೆ ನಿರ್ಜೀವ ಚರ್ಮದ ಕಾಂತಿ ಹೆಚ್ಚುವುದು.
* ಪಪ್ಪಾಯಿ,ಹಸಿ ಹಾಲು, ಜೇನು ತುಪ್ಪ ಸೇರಿಸಿ ಪ್ಯಾಕ್ ಹಾಕಿಕೊಂಡರೆ ಮುಖದ ಅಂದ ಹೆಚ್ಚುವುದು.
* ಪಪ್ಪಾಯಿ ಬೀಜ ಹಾಗೂ ಸ್ವಲ್ಪ ಪಪ್ಪಾಯಿ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿ, ಅದಕ್ಕೆ ಒಂದು ಚಮಚ ಜೇನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿದರೆ ಹೊಳಪು ಮತ್ತಷ್ಟು ಹೆಚ್ಚುವುದು.
Comments are closed.