ಆರೋಗ್ಯ

ದೇಹದಲ್ಲಿನ ಸಮತೋಲಿತ ಆಹಾರಕ್ಕೆ ಇದು ಅತ್ಯಾವಶ್ಯಕ..?

Pinterest LinkedIn Tumblr

ಇಲ್ಲಿ ನಾವು ದೇಹದ ಅತಿಅವಶ್ಯಕವಾದ ನಮ್ಮ ಆಹಾರದ ಬಗ್ಗೆ ಚರ್ಚಿಸುತ್ತೇವೆ. ನಿಮ್ಮ ಆಹಾರದ ಬಹು ಮುಖ್ಯ ಅಂಶವೆಂದರೆ ಎಣ್ಣೆ. ನಾವು ತಿನ್ನುವ ಆಹಾರವು ದೇಹಕ್ಕೆ ಆರೋಗ್ಯಕರವಾಗಿರಬೇಕೆಂದರೆ ಅದು ಸಮತೋಲಿತ ಆಹಾರ ಆಗಿರಬೇಕು. ಯಾವುದೇ ಆಹಾರವು ಅತಿಯಾಗಿ ತಿನ್ನುವುದರಿಂದ ಅಥವಾ ತೀರಾ ಕಡಿಮೆ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಕಾರವಾಗಿದೆ. ಹಾಗೆಯೇ ನಾವು ತೆಗೆದುಕೊಳ್ಳುವ ಆಹಾರದಲ್ಲಿನ ಕೊಬ್ಬು ಸಹ ಸರಿಯಾದ ಪ್ರಮಾಣದಲ್ಲಿರಬೇಕು.

ಲಿಪಿಡ್ಸ್ ಎಂದರೇನು?
ಲಿಪಿಡ್ಗಳು, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು ಮತ್ತು ನ್ಯೂಕ್ಲಿಯಿಕ್ ಆಮ್ಲಗಳ ಜೊತೆಯಲ್ಲಿ, ಎಲ್ಲಾ ಜೀವಿಗಳಲ್ಲಿ ಕಂಡುಬರುವ ದೇಹಕ್ಕೆ ಅಗತ್ಯವಾದ ಜೈವಿಕ ಅಣುಗಳ ನಾಲ್ಕು ಪ್ರಮುಖ ವರ್ಗಗಳಲ್ಲಿ ಒಂದಾಗಿದೆ. ಆಹಾರದಲ್ಲಿ ಅವುಗಳ ಪ್ರಮಾಣಗಳು ಮತ್ತು ಗುಣಾಂಶಗಳು ಜೀವಕೋಶ, ಅಂಗಾಂಶ ಮತ್ತು ದೇಹ ಶರೀರಶಾಸ್ತ್ರದ ಮೇಲೆ ಪ್ರಭಾವ ಬೀರುತ್ತವೆ. ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ಗಳು ಲಿಪಿಡ್ಗಳಾಗಿವೆ. ಲಿಪಿಡ್ಗಳನ್ನು ದೇಹದಲ್ಲಿ ಸುಲಭವಾಗಿ ಜಮೆಯಾಗಿ ಅಗತ್ಯವಿದ್ದಾಗ ಶಕ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಇದು ಕೋಶಗಳ ರಚನೆಯ ಪ್ರಮುಖ ಘಟಕವಾಗಿದೆ.

ಲಿಪಿಡ್ಗಳಲ್ಲಿ ಕೊಬ್ಬಿನಾಮ್ಲಗಳು, ತಟಸ್ಥ ಕೊಬ್ಬುಗಳು, ಮೇಣ ಮತ್ತು ಸ್ಟೆರಾಯ್ಡ್ಗಳು ಆದ ಕಾರ್ಟಿಸೋನ್ ನಂತಹವು ಸೇರಿವೆ. ಸಂಯುಕ್ತ ಲಿಪಿಡ್ಗಳು (ಮತ್ತೊಂದು ಸಂಯುಕ್ತ ರಾಸಾಯನಿಕ ಸಂಯುಕ್ತದೊಂದಿಗೆ ಸಂಕೀರ್ಣಗೊಂಡ ಲಿಪಿಡ್ಗಳು) ಲಿಪೊಪ್ರೋಟೀನ್ಗಳು, ಗ್ಲೈಕೊಲಿಪಿಡ್ಗಳು ಮತ್ತು ಫಾಸ್ಫೋಲಿಪಿಡ್ಗಳನ್ನು ಒಳಗೊಂಡಿರುತ್ತವೆ.

ಕೊಬ್ಬು ಎಂದರೇನು?
ಕೊಬ್ಬುಗಳು ಎಂದರೆ ಲಿಪಿಡ್ಸ್ ಎಂದು ಕರೆಯಲಾಗುವ ನೀರಿನಲ್ಲಿ ಕರಗುವಂತಹ ಗುಂಪಿನ ಒಂದು ಸದಸ್ಯವಾಗಿದೆ. ನಿಮಗೆ ಮೇಲೆ ತಿಳಿಸಿರುವಂತೆ ಲಿಪಿಡ್ಗಳು ನಮ್ಮ ದೇಹದ ಜೀವಕೋಶಗಳ ಚಟುವಟಿಕೆಗೆ ಅತ್ಯಗತ್ಯ. ಆಹಾರಗಳಲ್ಲಿ ಮತ್ತು ನಿಮ್ಮ ದೇಹದಲ್ಲಿ ಕೊಬ್ಬು ಕೇವಲ ಕೊಬ್ಬಿನಾಮ್ಲಗಳುಳ್ಳ ಒಂದು ಸಂಗ್ರಹ ಘಟಕಗಳಾಗಿವೆ. ಕೊಬ್ಬಿನ ಪ್ರಕಾರವು ಕೊಬ್ಬಿನಾಮ್ಲಗಳ ನಿರ್ದಿಷ್ಟ ಸಂಯೋಜನೆಯನ್ನು ಅವಲಂಬಿಸಿದೆ. ಕೊಬ್ಬಿನಾಮ್ಲಗಳು ನಿಮ್ಮ ದೇಹದಲ್ಲಿ ಮೂರು ಮೂಲ ಉದ್ದೇಶಗಳನ್ನು ಹೊಂದಿವೆ:

ಶಕ್ತಿಯನ್ನು ನೀಡಲು
ಜೀವಕೋಶಗಳಿಗೆ ಪ್ರಾಥಮಿಕವಾಗಿ ಅಡಿಪಾಯ ಹಾಕಲು ಹಾರ್ಮೋನುಗಳಂತೆ ನಿಮ್ಮ ದೇಹದಲ್ಲಿ ವಿಶೇಷ ಕರ್ತವ್ಯಗಳನ್ನು ನಿರ್ವಹಿಸುವ ಇತರ ವಸ್ತುಗಳನ್ನು ಪರಿವರ್ತಿಸಬಹುದಾದ ಕಚ್ಛಾ ವಸ್ತುಗಳಾಗಿ ಕಾರ್ಯನಿರ್ವಹಿಸುವುದು.

ಕೊಬ್ಬಿನಾಮ್ಲಗಳು ಎಂದರೆ ಏನು?
ಫಾಸ್ಫೋಲಿಪಿಡ್ಗಳು ಮತ್ತು ಗ್ಲೈಕೊಲಿಪಿಡ್ಗಳ ಅಂಶವಾಗಿ ಕೊಬ್ಬು ಮತ್ತು ಎಣ್ಣೆಗಳಲ್ಲಿ ಮತ್ತು ಜೀವಕೋಶದಲ್ಲಿ ಕಂಡುಬರುವ ಲಿಪಿಡ್-ಕಾರ್ಬಾಕ್ಸಿಲಿಕ್ ಆಮ್ಲದ ದೀರ್ಘ ಸರಪಣಿಗಳ ಅಣುಗಳಾಗಿವೆ. ಈ ರೀತಿಯ ಕೊಬ್ಬಿನಾಮ್ಲಗಳು ಪ್ರಾಣಿ ಮತ್ತು ತರಕಾರಿ ಕೊಬ್ಬು ಮತ್ತು ತೈಲಗಳಿಂದ ಸಿಗುತ್ತವೆ. ಕೊಬ್ಬಿನಾಮ್ಲಗಳು ದೇಹದ ಹೊರಗಡೆ ತನ್ನ ಪಾತ್ರಗಳನ್ನು ನಿರ್ವಹಿಸುತ್ತವೆ, ಅವುಗಳನ್ನು ಲೂಬ್ರಿಕಂಟ್ಗಳಾಗಿ, ಅಡುಗೆ ಮತ್ತು ಆಹಾರ ಇಂಜಿನಿಯರಿಂಗ್ ಹಾಗೂ ಸಾಬೂನುಗಳು, ಡಿಟರ್ಜೆಂಟ್ಗಳು ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕೊಬ್ಬಿನ ಆಮ್ಲಗಳು ನಮ್ಮ ದೇಹದಲ್ಲಿನ ಕೊಬ್ಬು ಮತ್ತು ಸೇವಿಸುವ ಆಹಾರದ ಅಡಿಪಾಯವಾಗಿದೆ. ಜೀರ್ಣಕ್ರಿಯೆಯ ಸಮಯದಲ್ಲಿ, ದೇಹದಲ್ಲಿರುವ ಕೊಬ್ಬು, ಕೊಬ್ಬಿನ ಆಮ್ಲಗಳಾಗಿ ಒಡೆದು ನಂತರ ರಕ್ತದಲ್ಲಿ ಸೇರ್ಪಡೆಯಾಗುತ್ತವೆ. ಕೊಬ್ಬಿನಾಮ್ಲ ಅಣುಗಳನ್ನು ಸಾಮಾನ್ಯವಾಗಿ ಮೂರು ಗುಂಪುಗಳಾಗಿ ಮಾಡಿ ಟ್ರೈಗ್ಲಿಸರೈಡ್ ಎಂದು ಕರೆಯುತ್ತಾರೆ. ಟ್ರೈಗ್ಲಿಸರೈಡ್ ಕೂಡ ನಾವು ತಿನ್ನುವ ಕಾರ್ಬೋಹೈಡ್ರೇಟ್ ಆಹಾರದಿಂದ ದೇಹದಲ್ಲೇ ತಯಾರಾಗುತ್ತದೆ.

ಕೊಬ್ಬಿನಾಮ್ಲಗಳು ಶಕ್ತಿಯ ಶೇಖರಣೆ ಸೇರಿದಂತೆ ದೇಹದಲ್ಲಿ ಅನೇಕ ಪ್ರಮುಖ ಕಾರ್ಯಗಳನ್ನು ಮಾಡುತ್ತದೆ. ಒಂದು ವೇಳೆ ಶಕ್ತಿಯ ಮುಖ್ಯ ಮೂಲವಾದ ಗ್ಲೂಕೋಸ್ ಲಭ್ಯವಿಲ್ಲದಿದ್ದರೆ, ದೇಹವು ಕೊಬ್ಬಿನಾಮ್ಲಗಳನ್ನು ಬಳಸಿಕೊಳ್ಳುತ್ತದೆ.

ಕೊಲೆಸ್ಟರಾಲ್ ಎಂದರೇನು?
ಕೊಲೆಸ್ಟ್ರಾಲ್ ಎಂಬುದು ಮೇಣದಂತಹ, ಕೊಬ್ಬಿನಂತಹ ವಸ್ತುವಾಗಿದ್ದು ಅದು ದೇಹದ ಎಲ್ಲಾ ಕೋಶಗಳಲ್ಲಿ ಕಂಡುಬರುತ್ತದೆ. ನಿಮ್ಮ ದೇಹಕ್ಕೆ ಕೊಲೆಸ್ಟರಾಲ್ ನ ಅಗತ್ಯವಿದ್ದು, ಅದು ಹಾರ್ಮೋನುಗಳಾದ ವಿಟಮಿನ್ ಡಿ, ಮತ್ತು ಆಹಾರ ಜೀರ್ಣವಾಗುವ ಪದಾರ್ಥಗಳನ್ನು ನೀಡುತ್ತದೆ. ನಿಮ್ಮ ದೇಹಕ್ಕೆ ಅಗತ್ಯವಿರುವ ಕೊಲೆಸ್ಟರಾಲ್ ದೇಹವೇ ಉತ್ಪಾದನೆಮಾಡುತ್ತದೆ. ಹಾಗಿದ್ದರೂ ಕೆಲವು ಪ್ರಮಾಣ ಕೊಲೆಸ್ಟರಾಲ್ ನಾವು ತಿನ್ನುವ ಆಹಾರದಲ್ಲಿಯೂ ಸಿಗುತ್ತದೆ. ಕೊಲೆಸ್ಟರಾಲ್ ನಿಮ್ಮ ರಕ್ತದ ಹರಿವಿನ ಜೊತೆಯಲ್ಲಿ ಚಿಕ್ಕ ಚಿಕ್ಕ ಚೀಲವನ್ನಾಗಿಸಿಕೊಂಡು (ಲಿಪೊಪ್ರೋಟೀನ್ಸ್) ಆಗಿ ಸಾಗುತ್ತದೆ. ಈ ಲಿಪೊಪ್ರೋಟೀನ್ಸ್ ಪ್ರೋಟೀನ್ ಚರ್ಮವುಳ್ಳ ಚಿಕ್ಕ ಕೊಬ್ಬಿನ ಚೀಲವಾಗಿದೆ.

ಎಣ್ಣೆ ಎಂದರೇನು?
ಎಣ್ಣೆ ಎಂದರೆ ಸಾಮಾನ್ಯ ತಾಪಮಾನದಲ್ಲಿ ದ್ರವ ರೂಪದ ಕೊಬ್ಬು. ಉದಾ- ಅಡುಗೆಗೆ ಬಳಸುವ ಎಣ್ಣೆ. ಹಲವು ಗಿಡಗಳು ಮತ್ತು ಮೀನಿನಿಂದ ಸಹ ಎಣ್ಣೆಯನ್ನು ನಾವು ಪಡೆಯಬಹುದು. ಎಣ್ಣೆಯಲ್ಲಿ ಮೋನೊಸ್ಯಾಚುರೇಟೆಡ್ ಮತ್ತು ಪಾಲಿಅನ್ಸ್ಯಾಚುರೇಟೆಡ್ ಕೊಬ್ಬುಗಳು ಇವೆ. ಎಣ್ಣೆಯು ಆಹಾರದಲ್ಲದಿದ್ದರೂ, ಅದು ಉಪಯುಕ್ತ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.
ಹಲವು ರೀತಿಯ ಎಣ್ಣೆಯಲ್ಲಿ ಒಳ್ಳೆಯ ಅಂದರೆ ಆರೋಗ್ಯಕರ ಕೊಬ್ಬುಗಳಾದ ಮೊನೊಅನ್ಸ್ಯಾಚುರೇಟೆಡ್ ಕೊಬ್ಬು ಅಥವಾ ಪಾಲಿಅನ್ಸ್ಯಾಚುರೇಟೆಡ್ ಕೊಬ್ಬುಗಳು ಹೆಚ್ಚಿದ್ದು ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ಕಡಿಮೆಯಾಗಿರುತ್ತದೆ. ಅದೇ ಗಿಡ ಮೂಲಗಳಿಂದ ಸಿಗುವ ಕೊಬ್ಬುಗಳಲ್ಲಿ ಯಾವುದೇ ರೀತಿಯ ಕೊಲೆಸ್ಟರಾಲ್ ಇರುವುದಿಲ್ಲ, ಏಕೆಂದರೆ ಗಿಡಗಳಲ್ಲಿ ಯಾವುದೇ ರೀತಿಯ ಕೊಲೆಸ್ಟರಾಲ್ ಇರುವುದಿಲ್ಲ. ಆದರೂ ಕೆಲವು ಎಣ್ಣೆಗಳಾದ ತೆಂಗಿನಕಾಯಿ ಎಣ್ಣೆ, ಪಾಮ್ ಎಣ್ಣೆ, ಮತ್ತು ಪಾಮ್ ಕರ್ನಲ್ ಎಣ್ಣೆಯಲ್ಲಿ ಹೆಚ್ಚು ಸ್ಯಾಚುರೇಟೆಡ್ ಕೊಬ್ಬುಗಳಿದ್ದು ಅದನ್ನು ಕೆಟ್ಟಕೊಬ್ಬು ಎಂದು ಪರಿಗಣಿಸಲಾಗುತ್ತದೆ.

ಮೇಲೆ ತಿಳಿಸಿದ ವರ್ಗೀಕರಣವನ್ನು ಆಧರಿಸಿ, ಉತ್ತಮ ಕೊಬ್ಬುಗಳು ಮತ್ತು ಕೆಟ್ಟ ಕೊಬ್ಬುಗಳು, ಉತ್ತಮ ಕೊಬ್ಬಿನಾಮ್ಲಗಳು ಮತ್ತು ಕೆಟ್ಟ ಕೊಬ್ಬಿನಾಮ್ಲಗಳು ಹೀಗೆ ವಿಂಗಡಿಸಲಾಗಿದೆ.

Comments are closed.