ಆರೋಗ್ಯ

ಈ ಬೀಜದಲ್ಲಿ ಸಿಗುವುದು ಮಾನವನ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳು

Pinterest LinkedIn Tumblr

ಸೂರ್ಯಕಾಂತಿಯೆಂದರೆ ಕೇವಲ ನೋಡಲು ಮಾತ್ರ ಸುಂದರವಾಗಿರುತ್ತೆ, ಅದರ ಬೀಜದಿಂದ ಎಣ್ಣೆಯಷ್ಟೇ ತೆಗೆಯಬಹುದು ಎಂದೇ ಹಲವಾರು ತಿಳ್ಕೊಂಡಿರ್ತಾರೆ. ಆದರೆ ಸೂರ್ಯಕಾಂತಿಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಸೂರ್ಯಕಾಂತಿ ಬೀಜದಲ್ಲಿನ ಕೆಲ ಪೌಷ್ಟಿಕಾಂಶಗಳು ಮಾನವನ ದೇಹಕ್ಕೆ ಅಗತ್ಯವಾದ ಅಂಶಗಳನ್ನು ನೀಡುತ್ತವೆ.ಸೂರ್ಯಕಾಂತಿ ಬೀಜಗಳಿಂದ ಮಾನವನ ದೇಹದ ಮೇಲಾಗುವ ಪರಿಣಾಮ ತಿಳಿದುಕೊಳ್ಳಿ.

ಸೂರ್ಯಕಾಂತಿ ಬೀಜದ ಎಣ್ಣೆಯಲ್ಲಿ ‘ವಿಟಮಿನ್ ಇ’ ಅಂಶ ಹೆಚ್ಚಾಗಿರುವುದರಿಂದ ರೋಗ ಹರಡುವ ರೋಗಾಣುಗಳ ವಿರುದ್ಧ ಹೋರಾಡಿ ಜೀವ ಕೋಶಗಳಿಗೆ ಹಾನಿಯಾಗದಂತೆ ತಡೆಯುತ್ತದೆ.ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಹೊಸ ಜೀವಕೋಶಗಳ ಉತ್ಪತ್ತಿ ಯಲ್ಲಿ ಸಹಕಾರಿಯಾಗುತ್ತದೆ.

ಇದರಲ್ಲಿರುವ ಕೊಬ್ಬಿನ ಆಮ್ಲ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಈ ಮೂಲಕ ಹೃದಯ ಸಂಬಂಧಿ ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಹೊರಗಡೆ ಬೂದು ಬಣ್ಣದ್ದಾಗಿರುವ ಸೂರ್ಯಕಾಂತಿ ಬೀಜದ ಒಳಗಡೆ ಬೆಳ್ಳನೆಯ ತಿರುಳಿರುತ್ತದೆ. ಇದರಲ್ಲಿರುವ ಪೈಟೊಕೆಮಿಕಲ್‌ಎಂಬ ಅಂಶ ತೂಕ ಕಡಿಮೆ ಮಾಡಿಕೊಳ್ಳಲು ತುಂಬಾ ಸಹಕಾರಿಯಾಗಿದೆ.

ಇದರಲ್ಲಿರುವ ಕೊಬ್ಬಿನ ಆಮ್ಲ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಈ ಮೂಲಕ ಹೃದಯ ಸಂಬಂಧಿ ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಇದರಲ್ಲಿ ನಾರಿನಂಶವೂ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಸೂರ್ಯಕಾಂತಿ ಬೀಜದಲ್ಲಿ ಫಾಲೆಟ್‌ಎಂಬ ಅಂಶವೂ ಯಥೇಚ್ಛವಾಗಿದ್ದು, ಇದು ಮಹಿಳೆಯರಿಗೆ ಅತ್ಯಗತ್ಯವಾಗಿರುವ ಜೀವಸತ್ವವಾಗಿದೆ.

ಈ ಬೀಜ ಕೊಬ್ಬು, ವಿಟಮಿನ್‌ಇ, ಸೆಲೆನಿಯಂ ಮತ್ತು ಸತುಗಳ ಕಣಜ ಎಂದೇ ಹೇಳಬಹುದು. ಹೃದಯಾಘಾತ, ಕ್ಯಾನ್ಸರ್‌, ಸಂಧಿವಾತ ಮತ್ತು ಜೀವಕೋಶಗಳು ನಶಿಸುವಿಕೆ ಮುಂತಾದ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಇದು ತಗ್ಗಿಸುತ್ತದೆ.

ಸೂರ್ಯಕಾಂತಿಯ ಬೀಜಗಳಲ್ಲಿ ಇರುವ ಕಬ್ಬಿಣದಂಶವು ಆಮ್ಲಜನಕವನ್ನು ಹೆಚ್ಚಾಗಿ ಹೀರಿಕೊಂಡು ಸ್ನಾಯು ಮತ್ತು ಮಾಯಂಸ ಖಂಡ ಗಳಿಗೆ ಪೂರೈಸುತ್ತದೆ, ಇದರಿಂದ ಸ್ವಾಯುಗಳು ಬಲವಾಗುತ್ತವೆ. ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಸ್ನಾಯುಗಳಿಗೆ ಹೆಚ್ಚಿನ ಶಕ್ತಿ ಬರುತ್ತದೆ.ದ್ರಾಕ್ಷಿ ಗೋಡಂಬಿಯ ಜೊತೆ ಸೂರ್ಯಕಾಂತಿ ಬೀಜವನ್ನು ಸೇವಿಸುವುದು ತುಂಬಾ ಒಳ್ಳೆಯ ಅಭ್ಯಾಸವಾಗಿದೆ.

ಬೀಜದ ಪುಡಿಯನ್ನು ನಿಮ್ಮ ನಿತ್ಯದ ಸಲಾಡ್, ಜ್ಯೂಸ್, ಮೊಸರು ಮೊದಲಾದವುಗಳ ಮೇಲೆ ಸಿಂಪಡಿಸಿ ಸೇವಿಸಿದರೆ ಆ ಖಾದ್ಯಗಳ ರುಚಿಯೂ ಹೆಚ್ಚುವುದಲ್ಲದೆ, ಪೌಷ್ಟಿಕತೆಯೂ ಹೆಚ್ಚುತ್ತದೆ.

Comments are closed.