ಮಗು ಹುಟ್ಟುವವರೆಗೆ ತಮ್ಮ ಆರೋಗ್ಯದ ಬಗ್ಗೆ ಮಹಿಳೆಯರು ಹೆಚ್ಚಿನ ಗಮನ ಹರಿಸುತ್ತಾರೆ. ಇದಕ್ಕೆ ಕಾರಣ ತಾವು ಆರೋಗ್ಯವಾಗಿದ್ದರೆ ಮಕ್ಕಳು ಸಹ ಆರೋಗ್ಯದಿಂದ ಇರುತ್ತಾರೆ ಎಂದು. ಮಗು ಹುಟ್ಟಿದ ನಂತರ ಮಗುವಿನ ಬಗ್ಗೆ ಎಷ್ಟು ಗಮನ ಹರಿಸಿದರೂ ಸಾಲುವುದಿಲ್ಲ. ಮುಖ್ಯವಾಗಿ ಮಕ್ಕಳ ನಿದ್ರೆಯ ಬಗ್ಗೆ ಗಮನ ಹರಿಸಬೇಕು.
ಮಗು ತಾಯಿಯ ಗರ್ಭದಲ್ಲಿ ಇದ್ದು ಅದು ಅಲ್ಲಿ ತನ್ನದೇ ಆದ ನರೂಟಿನ್ ಅನುಸರಿಸುತ್ತದೆ. ಅದೇ ಒಂದು ಬಾರಿ ಹೊರ ಬಂದ ಮೇಲೆ ಎಲ್ಲವೂ ಬದಲಾಗುವ ಕಾರಣ ಮಕ್ಕಳು ಸರಿಯಾಗಿ ನಿದ್ರೆ ಮಾಡೋದಿಲ್ಲ. ಸುಮಾರು ಒಂದು ವರ್ಷದವರೆಗೆ ಈ ಸಮಸ್ಯೆ ಇರುತ್ತದೆ. ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ನೀವು ಈ ವಿಧಾನ ಅನುಸರಿಸಿ.
ನಿದ್ರೆ ಮಾಡಲು ಸರಿಯಾದ ಟೈಮ್ ಟೇಬಲ್ ಹಾಕಿಕೊಂಡು ಅದರಂತೆ ಮಲಗಿಸಿ. ಇಲ್ಲವಾದರೆ ಮಕ್ಕಳ ನಿದ್ರಾ ಕ್ರಮ ತಪ್ಪುತ್ತದೆ. ಹಾಗೂ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ.
ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಹಗುರವಾದ ಪೈಜಾಮ್ ಅಥವಾ ಇತರ ಡ್ರೆಸ್ ಧರಿಸಿದರೆ ಚೆನ್ನಾಗಿ ನಿದ್ರೆ ಮಾಡಿ.
ಮಲಗುವ ಕೋಣೆಯು ಶಾಂತ ಮತ್ತು ಕತ್ತಲಿನಿಂದ ಇರಬೇಕು. ಇದರಿಂದ ದೇಹದ ಉಷ್ಣಾಂಶವು ಕಡಿಮೆಯಾಗಿ ವಿಶ್ರಾಂತಿಗೆ ನೆರವಾಗುತ್ತದೆ.
ಮಕ್ಕಳಿಗೆ ಸಣ್ಣ ಪುಟ್ಟ ವ್ಯಾಯಾಮ ಮಾಡಿಸಿ. ಇದರಿಂದ ಮಕ್ಕಳ ದೇಹ ನಿರಾಳವಾಗಿ ಬೇಗನೆ ನಿದ್ರೆ ಬರುತ್ತದೆ..
ಮಕ್ಕಳನ್ನು ಮಲಗಿಸಲು ಲಯವಾದ ಹಾಡನ್ನು ಹಾಕಿ, ಇಲ್ಲವೇ ಲಾಲಿ ಹಾಡು ಹೇಳಿ.
ಮಗು ಮಲಗದೆ ಇದ್ದರೆ ತಾಯಿಯ ಎದೆಯ ಬಳಿ ಮಗುವನ್ನು ಅಪ್ಪಿ ಹಿಡಿಯಿರಿ. ತಾಯಿಯ ಹೃದಯ ಬಡಿತಕ್ಕೆ ಮಗು ನಿದ್ದೆ ಹೋಗುತ್ತದೆ.
ನೀರಿನ ಹನಿಯ ಟಪ್ ಟಪ್ ಎಂದು ಬೀಳುವ ಸದ್ದಿಗೂ ಮಗು ಮಲಗುತ್ತದೆ ಎಂದು ಹೇಳಲಾಗುತ್ತದೆ.
Comments are closed.