ಬಿಕ್ಕಳಿಕೆ ಇವು ಸಾಮಾನ್ಯವಾಗಿ ಎಲ್ಲರಿಗೂ ಬರುತ್ತಾ ಇರುತ್ತೆ ಎನ್ನುವುದು ನಿಮಗೆ ತಿಳಿದಿರುವ ವಿಷಯ. ಇವು ಬಂದಾಗ ಯಾರೋ ನೆನಪಿಸಿಕೊಳ್ಳುತ್ತಾ ಇದ್ದಾರೆ ಅಥವಾ ಬೈಕೊಳುತ್ತಾ ಇದ್ದಾರೆ ಎಂದು ಅಂದುಕೊಳ್ಳುತ್ತೇವೆ ಆದರೆ ಬಿಕ್ಕಳಿಕೆ ಎನ್ನುವುದು ಯಾರೋ ನೆನಪಿಸಿಕೊಂಡರೆ ಅಥವಾ ಬೈಕೊಂಡರೆ ಬರುವುದು ಅಲ್ಲ ಅದಕ್ಕೆ ಒಂದು ಕಾರಣ ಇದೆ. ಇದನ್ನು ತಿಳಿಯುವ ಮುಂಚೆ ಒಂದು ಫ್ಯಾಕ್ಟ್ ಅನ್ನು ತಿಳಿಯೋಣ.ಈ ಒಂದು ರೋಚಕ ಕಥೆಯನ್ನು ಒಮ್ಮೆ ಓದಿ ನಿಮಗೆ ತಿಳಿಯುತ್ತದೆ. ಚಾರ್ಲ್ಸ್ ಓಸ್ವರ್ಗ್ ಎನ್ನುವ ವ್ಯಕ್ತಿಗೆ 1922 ರಿಂದ 1990 ರವರೆಗೆ ಅಂದರೆ 68 ವರ್ಷಗಳ ಕಾಲ ಬಿಕ್ಕಳಿಕೆ ಬರುತ್ತಾ ಇರುತ್ತೆ ಗಿನ್ನಿಸ್ ಬುಕ್ ರೆಕಾರ್ಡ್ ಪ್ರಕಾರ 68 ವರ್ಷಗಳ ಕಾಲ ಅವರಿಗೆ 48 ಕೋಟಿ ಬಿಕ್ಕಳಿಕೆ ಬಂದಿರುತ್ತೆ ಎಂದು ಹೇಳಿದ್ದಾರೆ ಕೊನೆಗೆ ಇವರಿಗೆ 1990 ರ ವರ್ಷದಲ್ಲಿ ಬಿಕ್ಕಳಿಕೆ ನಿಲ್ಲುತ್ತೆ ಆದರೆ ನಂತರ ವರ್ಷದಲ್ಲಿ ಅವರು ಸತ್ತು ಹೋಗುತ್ತಾರೆ ಬಿಕ್ಕಳಿಕೆ ಸಾಮಾನ್ಯವಾಗಿ ಎಲ್ಲರಿಗೂ ಎಲ್ಲ ವಯಸ್ಸಿನವರಿಗೂ ಬರುತ್ತೀರುತ್ತೆ.
ಈ ಬಿಕ್ಕಳಿಕೆ ಹೇಗೆ ಬರುತ್ತೆ ಎಂದು ತಿಳಿಯೋಣ ಸಾಮಾನ್ಯವಾಗಿ ನಾವು ಉಸಿರಾಡುವಾಗ ಶ್ವಾಸಕೋಶಗಳು ಉಬ್ಬುವುದು ತಗ್ಗಿಸುವುದು ಮಾಡುತ್ತಾ ಇರುತ್ತೆ ಆದರೆ ನಾವು ಉಸಿರಾಡುವಾಗ ಮತ್ತೊಂದು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಅದೇ ದೈಯೋಫ್ರ್ಮ್ ಎನ್ನುವ ಭಾಗ ಇದು ಶ್ವಾಸಕೋಶಗಳ ಕೆಳ ಭಾಗದಲ್ಲಿ ಇರುತ್ತೆ ಈ ದಿಯೋಫ್ರ್ಮ್ ಕೆಳಗಡೆ ಬಂದಾಗ ಶ್ವಾಸಕೋಶಗಳು ಉಬ್ಬುವುದರಿಂದ ಗಾಳಿ ಒಳಗೆ ಹೋಗುತ್ತೆ ಅದೇ ರೀತಿ ಈ ದಿಯೋಫ್ರ್ಮ್ ಮೇಲೆ ಬಂದಾಗ ಶ್ವಾಸಕೋಶಗಳು ತಗ್ಗಿ ಗಾಳಿ ಒಳಗೆ ಹೋಗುತ್ತೆ ಇದು ಹೀಗೆ ಇದ್ದರೆ ಒಂದೊಂದು ಸಾರಿ ನಾವು ತಿಂದರೆ ಅಥವಾ ನೀರು ಕುಡಿದರೆ ಅಥವಾ ಹೆಚ್ಚು ತಿಂದರೆ ಅಥವಾ ನಗುತ್ತಾ ತಿಂದರೆ ಈ ದಿಯೋಫ್ರ್ಮ್ ಕೆಳಗಡೆ ಇರುವ ಜೀರ್ಣಶಯ ಉಬ್ಬುತ್ತೆ ಇದರಿಂದ ದಿಯೋಫ್ರ್ಮ್ ಕೆಲ್ಸಕ್ಕೆ ತೊಂದರೆ ಆಗುತ್ತೆ ಆಗ ದಯೋಫ್ರ್ಮ್ ಗೆ ಒತ್ತಡ ಏರುತ್ತೆ ಅಂದರೆ ಜರ್ಕ್ ಓಡೆಯುತ್ತೆ. ಈ ರೀತಿಯಾಗಿ ನಮಗೆ ಬಿಕ್ಕಳಿಕೆ
ಅನ್ನುವುದು ಬರುತ್ತೆ ಆದರೆ ಹೀಗೆ ದಯೋಫ್ರ್ಮ್ ಜರ್ಕ್ ಕೊಟ್ಟಾಗ ಒಂದೇ ಬಾರಿ ಗಾಳಿ ಒಳಗೆ ಬರುತ್ತೆ ಆದರೆ ನಮ್ಮ ಕತ್ತಿನಲ್ಲಿ ಇರುವ ಓಕಲ್ ಕಾರ್ಡ್ಸ್ ಅನ್ನುವುದು ಈ ಗಾಳಿಯನ್ನು ತಗ್ಗಿಸಿ ಬಿಡುತ್ತೆ ಆಗ ನಮಗೆ ಬಿಕ್ಕಳಿಕೆ ಶಬ್ಧ ಬರುತ್ತೆ. ನೋಡಿದಿರಾ ಸ್ನೇಹಿತರೆ ನಮಗೆ ಬಿಕ್ಕಳಿಕೆ ಎನ್ನುವುದು ಹೇಗೆ ಬರುತ್ತದೆ ಎಂದು ವೈಜ್ಞಾನಿಕ ವಾಗಿ ತಿಳಿದು ಕೊಂಡಿರ ಅಲ್ವಾ. ನಾವು ಸುಮ್ಮನೆ ಯಾರೋ ನೆನೆದಾಗ ಅಥವಾ ಬೈದುಕೊಂಡರೆ ಮಾತ್ರ ಅದು ಬರುತ್ತದೆ ಎನ್ನುವುದು ತಪ್ಪು. ಈ ಮಾಹಿತಿ ನಿಮಗೆ ಇಷ್ಟವಾದರೆ ಖಂಡಿತ ನಿಮ್ಮ ಸ್ನೇಹಿತರಿಗೆ ಬಂಧು ಬಾಂಧವ ರಿಗೆ ಎಲ್ಲರಿಗೂ ತಿಳಿಯುವಂತೆ ಮಾಡಿ ಹಾಗೂ ಈ ಲೇಖನ ವನ್ನು ಶೇರ್ ಮಾಡಲು ಮಾತ್ರ ತಪ್ಪದೆ ಮರೆಯದಿರಿ.
Comments are closed.