ಸಾಮಾನ್ಯವಾಗಿ ನೀವೆಲ್ಲ ಗಮನಿಸಿರಬಹುದು ಅದು ಏನೆಂದರೆ ಹಿಂದಿನ ಕಾಲದಲ್ಲಿ ಏನೇ ಒಂದು ಆರೋಗ್ಯದ ಸಮಸ್ಯೆ ಬಂದರು ಕೂಡ ಅವರು ಆಸ್ಪತ್ರೆಗೆ ಹೋಗುವುದಿಲ್ಲ ಅದರ ಬದಲು ಅವರ ಸುತ್ತ ಮುತ್ತ ಸಿಗುವ ನೈಸರ್ಗಿಕ ಸಸ್ಯಗಳನ್ನು ಬಳಸಿಕೊಂಡು ಅದರಿಂದ ಸಮಸ್ಯೆಗಳನ್ನು ಗುಣ ಪಡಿಸಿಕೊಳ್ಳುತ್ತಿದ್ದರು ಅಂದರೆ ಕೆಮ್ಮು ನೆಗಡಿ ಶೀತ ಈ ರೀತಿಯ ಸಮಸ್ಯೆಗಳಿಗೆ ತುಳಸಿ. ಪುದೀನಾ. ದೊಡ್ಡ ಪತ್ರೆ ಹೀಗೆ ಹಲವಾರು ರೀತಿಯ ಸಸ್ಯಗಳನ್ನು ಬಳಸುತ್ತಿದ್ದರು
ಹಾಗೆಯೇ ಮನುಷ್ಯನ ಚರ್ಮ ತುಂಬಾ ಸೂಕ್ಷ್ಮ ಒಂದು ಚಿಕ್ಕ ಕೀಟನು ಕಚ್ಚಿದರು ಕಜ್ಜಿ. ತುರಿಕೆಗಳು ಆಗುತ್ತವೆ ಕಜ್ಜಿ. ತುರಿಕೆಗಳು ಸಾಮಾನ್ಯವಾಗಿ ಆಗುವುದಕ್ಕೆ ಕಾರಣ ಹಲವಾರು ಇವೆ ಅವುಗಳು ತಮ್ಮ ವಾತಾವರಣ ಬದಲಾಗುವುದು. ನೀರಿನ ವ್ಯತ್ಯಾಸ. ಸೋಪುಗಳ ಬಳಕೆಯಲ್ಲಿ ಬದಲಾವಣೆ. ಕೀಟನುಗಳು ಕಚ್ಚಿದರು ಕೂಡ ಕಜ್ಜಿ. ತುರಿಕೆಗಳು ಆಗುತ್ತವೆ. ಆದರೆ ಹಲವರು ರೀತಿಯ ಔಷಧಿಗಳು ಸಿಗುತ್ತವೆ ಆದರೆ ಅವುಗಳಿಂದ ಮತ್ತೊಂದು ಇನ್ಫೆಕ್ಷನ್ ಅಗಬಹುದು ಜೊತೆಗೆ ಬೇಗ ಕೂಡ ಗುಣ ಆಗುವುದಿಲ್ಲ ಆದರೆ ಕಜ್ಜಿ. ತುರಿಕೆಯಂತಹ ಸಮಸ್ಯೆಯನ್ನು ತುಂಬಾ ಬೇಗ ಗುಣ ಮಾಡುವ ಹಾಗೂ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಗುಣ ಪಡಿಸಿಕೊಳ್ಳಬಹುದು ಅಂತಹ ಉತ್ತಮ ಆಯುರ್ವೇದದ ಔಷದಿ ಎಂದರೆ ಅದು ಒಂದು ಗಿಡ.
ಸಾಮಾನ್ಯವಾಗಿ ಎಲ್ಲರೂ ಈ ಗಿಡದ ಪರಿಚಯವನ್ನು ಹೊಂದಿರಬಹುದು ಅದರಲ್ಲೂ ಗ್ರಾಮೀಣ ಪ್ರದೇಶದ ಜನಕ್ಕೆ ಇದರ ಪರಿಚಯ ಇದ್ದೆ ಇರುತ್ತದೆ ಅದು ಯಾವ ಗಿಡ ಎಂದರೆ ಕುಪ್ಪಿ ಗಿಡ ಈ ಗಿಡವು ಹೊಲಗಳ ಗದ್ದೆಗಳ ಅಕ್ಕ ಪಕ್ಕದಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲಿ, ತೋಟಗಳಲ್ಲಿ ಕಳೆಯುವ ಮೂಲಿಕೆ ಸಸ್ಯವಿದು. ಈ ಗಿಡದ ಎಲೆಗಳು ತುಂಬಾ ಸರಳವಾಗಿರುತ್ತದೆ ಹಾಗೂ ಪರ್ಯಾಯವಾಗಿ ಜೋಡಣೆಗೊಂಡಿರುತ್ತದೆ ಹಾಗೂ ಈ ಗಿಡ ಎಲೆಗಳಿಗೆ ಉದ್ದನೆಯ ತೊಟ್ಟಿದೆ. ಎಲೆಗಳ ಅಂಚು ಗರಗಸದಂತೆ, ಹೂಗಳು ಏಕಲಿಂಗಿಗಳಾಗಿ ಚಿಕ್ಕ ಗಾತ್ರವನ್ನು ಹೊಂದಿರುತ್ತವೆ.
ಈ ಗಿಡದಲ್ಲಿ ಹಲವು ಔಷದಿಯ ಗುಣಗಳಿವೆ ಹಾಗಾದರೆ ಅವುಗಳು ಏನು ಎಂದು ತಿಳಿಯೋಣ ಬನ್ನಿ. ಕುಪ್ಪಿ ಗಿಡದ ಹಸಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅಡಿಗೆ ಉಪ್ಪು ಸೇರಿಸಿ ಅದನ್ನು ನುಣ್ಣಗೆ ಅರೆದುಕೊಳ್ಳಬೇಕು ಆ ಪೇಸ್ಟ್ ಅನ್ನು ಕಜ್ಜಿ. ತುರಿಕೆ ಆಗಿರುವ ಜಾಗಕ್ಕೆ ಹಚ್ಚಿಕೊಂಡರೆ ತುಂಬಾ ಬೇಗ ತುರಿಕೆ ಕಜ್ಜಿ ಸಮಸ್ಯೆ ದೂರ ಆಗುತ್ತದೆ. ಹಾಗೆಯೇ ಮಲಬದ್ಧತೆ ಸಮಸ್ಯೆ ಈ ಸಮಸ್ಯೆಗೆ ಕುಪ್ಪಿ ಗಿಡದ ಹಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಸ್ವಲ್ಪ ತೆಗೆದುಕೊಂಡು ಅದನ್ನು ಮಲದ್ವಾರದಲ್ಲಿ ಸೇರಿಸಬೇಕು ಹೀಗೆ ಮಾಡಿದರೆ ಮಲಬದ್ಧತೆ ಸಮಸ್ಯೆ ದೂರ ಆಗುತ್ತದೆ.
ಕುಪ್ಪಿ ಗಿಡದ ಹಸಿ ಎಲೆಗಳನ್ನು ತೆಗೆದುಕೊಂಡು ಅದರ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಅದನ್ನು ನೆಕ್ಕಬೇಕು ಇದನ್ನು ನೆಕ್ಕಿದಾಗ ಮೊದಮೊದಲು ವಾಂತಿ ಆಗಬಹುದು ಆದರೆ ತದನಂತರ ಈ ರಸವನ್ನು ಸೇವಿಸುವುದರಿಂದ ಕೆಮ್ಮು, ಕಫ, ದಮ್ಮು. ಶೀತ ಗುಣವಾಗುತ್ತದೆ. ಕುಪ್ಪಿ ಗಿಡದ ಎಲೆಗಳು. ಬೆಳ್ಳುಳ್ಳಿ. ಮೆಣಸು ಇವೆಲ್ಲವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ನುಣ್ಣಗೆ ಅರೆದು ಸ್ವಲ್ಪ ಭಾಗವನ್ನು ಹಾಲಿನಲ್ಲಿ ಕದಡಿ ಕುಡಿಯುವುದರಿಂದ ಹೊಟ್ಟೆ ನೋವಿನ ಸಮಸ್ಯೆ ದೂರ ಆಗುತ್ತದೆ. ಕುಪ್ಪಿ ಎಲೆಗಳ ರಸವನ್ನು ತೆಗೆದುಕೊಂಡು ಮೂಗಿನ ಎರಡೂ ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು ಇದರಿಂದ ಮೂರ್ಛೆ ಬೀಳುವ ಸಮಸ್ಯೆ ದೂರ ಆಗುತ್ತದೆ. ನೋಡಿದರಲ್ಲ ನಮ್ಮ ಸುತ್ತ ಮುತ್ತಲೇ ಸಿಗುವ ಕುಪ್ಪಿ ಗಿಡದಿಂದ ಎಷ್ಟೆಲ್ಲ ಪ್ರಯೋಜನ ಪಡೆಯಬಹುದು.
Comments are closed.