ಈಗಿನ ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ದಿನಚರಿಯನ್ನು ಅನುಸರಿಸಿ ನಮ್ಮ ದೇಹವನ್ನು ಹೊಕ್ಕಿ, ನಮಗೆ ಆಹಾರ ವಿಚಾರಗಳನ್ನು ಬದಲಾಯಿಸುವಂತೆ ಕಾಟ ಕೊಡುವ ಕಾಯಿಲೆಯೇ ಮಧುಮೇಹ. ಈ ಕಾಯಿಲೆಯಲ್ಲಿ ಎರಡು ಬಗೆಗಳಿವೆ. ಒಂದು ವಿಧ ದೇಹದಲ್ಲಿನ ಇನ್ಸುಲಿನ್ ಪ್ರಮಾಣ ಕಡಿಮೆ ಉತ್ಪತ್ತಿಯಾಗುವುದರಿಂದ ಹಾಗೂ ಮತ್ತೊಂದು ವಿಧ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾದರೂ ದೇಹದಲ್ಲಿನ ಜೀವಕೋಶಗಳು ಇದನ್ನು ಉಪಯೋಗಿಸಿಕೊಳ್ಳುವುದರಲ್ಲಿ ವಿಫಲವಾಗುವುದುರಿಂದ.
ಈ ಇನ್ಸುಲಿನ್ ಎಂಬುವುದು ಒಂದು ಹಾರ್ಮೋನ್ ಈ ರಾಸಾಯನಿಕವು ದೇಹದಲ್ಲಿನ ಸಕ್ಕರೆ ಅಂಶವನ್ನು ಜೀರ್ಣ ಮಾಡುವಲ್ಲಿ ನೆರವಾಗಿ ಶಕ್ತಿಯನ್ನು ಉತ್ಪಾದನೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಈ ಕಾಯಿಲೆಯ ಕಾರಣಗಳೆಂದರೆ ಇನ್ಸುಲಿನ್ ಉತ್ಪತ್ತಿ ಪ್ರಮಾಣದಲ್ಲಿ ಏರುಪೇರಾಗುವುದು, ಇನ್ಸುಲಿನ್ ಬಳಕೆಯಲ್ಲಿ ಏರುಪೇರಾಗುವುದು ಅತಿಯಾಗಿ ನಿದ್ರಿಸುವುದು ಚಟುವಟಿಕೆಯಿಂದ ಇರದೇ ಇರುವುದು ಅತಿಯಾದ ಎಣ್ಣೆಯ ಸಿಹಿಯ ಸ್ಥೌಲ್ಯಕ್ಕೆ ದಾರಿಯಾಗುವ ಆಹಾರವನ್ನು ಸೇವಿಸುವುದು, ಕೆಲವೊಮ್ಮೆ ಅನುವಂಶೀಯವಾಗಿ ಹರಡುವ ಅವಕಾಶವಿರುತ್ತದೆ.
ಇದರ ಲಕ್ಷಣಗಳೆಂದರೆ ಸ್ಥೌಲ್ಯ ಗಾತ್ರ ಹೆಚ್ಚಾಗುವುದು ಅತಿ ಮೂತ್ರ ವಿಸರ್ಜನೆ ಮೂತ್ರವಿಸರ್ಜನೆಯಲ್ಲಿ ಸಕ್ಕರೆ ಅಂಶ ಹೆಚ್ಚಿರುವುದು ಸಣ್ಣ ಪುಟ್ಟ ಗಾಯಗಳು ಬೇಗ ವಾಸಿಯಾಗದೇ ಇರುವುದು ಅತಿಯಾಗಿ ಕೈಕಾಲು ಜೋಗು ಹಿಡಿಯುವುದು ಕೆಲವೊಮ್ಮೆ ಸಾಧಾರಣವಾಗಿ ತೂಕ ಕಡಿಮೆಯಾಗುವುದು ಹೇಗೆ ಅನೇಕ ಅಂಶಗಳನ್ನು ಒಳಗೊಂಡಿದೆ. ಇದಕ್ಕೆ ಪರಿಹಾರವೆಂದರೆ ಜೀವನಪೂರ್ತಿ ಕೃತಕವಾಗಿ ಇನ್ಸುಲಿನ್ ಇಂಜಕ್ಷನ್ ನನ್ನು ತೆಗೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಮಧುಮೇಹ ಇಲ್ಲದೆ ಇದ್ದರು ಸಹ ನೀವು ವರ್ಷಕ್ಕೆ ಒಮ್ಮೆ ಆದರು ಚೆಕ್ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು.
ಈಗಾಗಲೇ ಮಧುಮೇಹ ಕಡಿಮೆ ಆಗಲು ಸಾಕಷ್ಟು ಮಾತ್ರೆ ಮತ್ತು ಮನೆ ಮದ್ದು ಉಪಯೋಗ ಮಾಡುತ್ತಾ ಇದ್ದರು ಒಮ್ಮೆ ಹತೋಟಿಗೆ ಬರೋದಿಲ್ಲ ಇದಕ್ಕೆ ಮುಖ್ಯ ಕಾರಣ ನಿಮ್ಮ ಜೀವನ ಶೈಲಿ ಎಂದರೆ ತಪ್ಪಾಗುವುದಿಲ್ಲ. ಮಧುಮೇಹ ಕಡಿಮೆ ಆಗಲು ಒಂದಿಷ್ಟು ಪಥ್ಯ ಮತ್ತು ವ್ಯಾಯಾಮ ಜೊತೆಗೆ ಒಂದಿಷ್ಟು ಧ್ಯಾನ ಹೆಚ್ಚಿನ ರೀತಿಯಲ್ಲಿ ಅವಶ್ಯಕತೆ ಇದೆ ಇದನ್ನು ನೀವು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ನಿಮ್ಮ ಜೀವನದಲ್ಲಿ ಪವಾಡದ ರೀತಿಯಲ್ಲಿ ಸಕ್ಕರೆ ಖಾಯಿಲೆ ಹತೋಟಿಗೆ ಬರುತ್ತದೆ ಆದರೆ ಅದನ್ನು ನೀವು ಸರಿಯಾದ ಸೂಕ್ತ ವೈದ್ಯರಿಂದ ನೆರವು ಪಡೆದುಕೊಂಡು ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳುವುದು ಅತೀ ಮುಖ್ಯವಾಗಿರುತ್ತದೆ.
Comments are closed.