ಆರೋಗ್ಯ

ಹೆಣ್ಣುಮಕ್ಕಳು ರಾತ್ರಿ ಈ ಕೆಲಸ ಮಾಡಿ ನಿದ್ರೆ ಮಾಡೋದು ಬಹಳ ಒಳ್ಳೆಯದು ಯಾಕೆ ಗೋತ್ತೆ..?

Pinterest LinkedIn Tumblr

ರಾತ್ರಿ ಮಲಗುವಾಗ ನಿಮ್ಮ ಮುಖವನ್ನು ಸ್ವಚ್ಛ ಗೊಳಿಸುವುದಿಲ್ಲ ಅಂದರೆ ಏನೆಲ್ಲಾ ಸಮಸ್ಯೆಗಳು ಆಗುತ್ತದೆ ಎಂದು ಒಮ್ಮೆ ತಿಳಿಯಿರಿ. ನೀವು ರಾತ್ರಿ ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸುವುದಿಲ್ಲವೇ, ಸ್ವಚ್ಛ ಗೊಳಿಸುವುದರಿಂದ ಏನೆಲ್ಲಾ ಲಾಭಗಳು ದೊರೆಯುತ್ತದೆ ಗೊತ್ತೇನು. ಈ ಲೇಖನವನ್ನು ಓದಿನಿಮಗೆ ಗೊತ್ತಾಗುತ್ತೆ.

ಬ್ಯುಸಿಆದ ಈ ಜೀವನದಲ್ಲಿ ನಾವೆಲ್ಲರೂ ನಮ್ಮ ಚರ್ಮದ ಆರೈಕೆ ಬಗ್ಗೆ ಬಹಳ ಕಡಿಮೆ ಗಮನವನ್ನು ಕೊಡುತ್ತಿದ್ದೇವೆ ಸೌಂದರ್ಯ ವರ್ಧಕಗಳು ಉಪಯೋಗಿಸಿ ನಿಮ್ಮ ಮುಖವನ್ನು ಕಾಂತಿಯುತವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಿದರೆ ಆದ್ದರಿಂದ ಪ್ರಯೋಜನವೇನು ಇರುವುದಿಲ್ಲ ಮುಖ್ಯವಾಗಿ ನಿಮ್ಮ ಮುಖವನ್ನು ಸರಿಯಾದ ರೀತಿಯಲ್ಲಿ ಶುದ್ಧವಾಗಿ ಇಟ್ಟುಕೊಳ್ಳುವುದರಿಂದ ಅದು ಆರೋಗ್ಯವಾಗಿ ಮತ್ತು ಕಾಂತಿಯುಕ್ತವಾಗಿ ಕಾಣುವಂತೆ ಮಾಡುತ್ತದೆ. ನೀವು ಅಲಂಕಾರವನ್ನು ಮಾಡಿಕೊಂಡ ದಿನದಂದು ಸುಸ್ತಾಗಿ ಮನೆಗೆ ಸೇರಿದರೆ ಮಲಗುವ ಮುನ್ನ ಕೇವಲ 15 ನಿಮಿಷಗಳ ಕಾಲ ಚರ್ಮದ ಕಡೆ ಗಮನ ಹರಿಸಬೇಕು ಅದು ನಿಮ್ಮ ಚರ್ಮದ ಮೇಲೆ ಅಧ್ಬುತಗಳನ್ನು ಮಾಡುತ್ತೆ ಮನೆಗೆ ತಡ ಆಯಿತೆಂದು ಅಥವಾ ಬೇರೆ ಯಾವುದೇ ಕಾರಣದಿಂದ ನಿಮ್ಮ ಮೇಕಪ್ ತೆಗೆಯದೆ ಹಾಗೆ ಮಲಗಿದರೆ ಮುಂದಿನ ದಿನಗಳಲ್ಲಿ ತೀವ್ರವಾದ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಪ್ರತಿ ದಿನ ನೀವು ಮಲಗುವ ಮುನ್ನ ಮುಖವನ್ನು ಸ್ವಚ್ಛ ಗೊಳಿಸುವುದರಿಂದ ನಿಮ್ಮ ತ್ವಜೆಯು ಆರೋಗ್ಯವಾಗಿ ಇರುತ್ತೆ ಪ್ರತಿ ದಿನ ಮಲಗುವ ಮುನ್ನ ಮುಖವನ್ನು ಸ್ವಚ್ಛ ಮಾಡುವುದರಿಂದ ಚರ್ಮದ ಕಲ್ಮಶವನ್ನು ತೊಳೆದುಹಕಬಹುದು ಇದರಿಂದ ನಿಮ್ಮ ಚರ್ಮಕ್ಕೆ ಉಸಿರಾಡಲು ಸಹಾಯ ಆಗುತ್ತದೆ ಮುಖವನ್ನು ತೊಳೆದು ಕೊಳ್ಳುವಾಗ ನಿಧಾನವಾಗಿ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಿ ಇದರಿಂದ ರಕ್ತ ಸಂಚಾರ ಹೆಚ್ಚಾಗಿ ಮುಖದ ಹೊಳಪು ಹೆಚ್ಚಿಸುತ್ತದೆ ಮುಖವನ್ನು ಸ್ವಚ್ಛಗೊಳಿಸುವುದುರಿಂದ ಮೊಡವೆ ಮತ್ತು ಕಲೆಗಳಿಂದ ದೂರವಿರಬಹುದು ಮುಖವನ್ನು ಸ್ವಚ್ಛ ಗೊಳಿಸುವುದರಿಂದ ನೀವು ದಣಿದಿದ್ದರೂ ಸಹಾ ಮುಖವೂ ಸುಸ್ತಾದಂತೆ ಕಾಣುವುದಿಲ್ಲ. ನಮಗೆಲ್ಲ ಗೊತ್ತಿರುವ ಹಾಗೆ ಸೋಪ್ ರಾಸಾಯನಿಕ ಪದಾರ್ಥಗಳಿಂದ ಮಾಡಿರುತ್ತಾರೆ ಇದನ್ನು ಉಪಯೋಗಿಸುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮ ಚರ್ಮವನ್ನು ಆಳವಾಗಿ ಸ್ವಚ್ಛ ಮಾಡಿ ಅದಕ್ಕೆ ಪೋಷಣೆಯನ್ನು ನೀಡುವ ಬದಲು ಸೋಪಿನ ಬಳಕೆಯಿಂದ ನಿಮಗೆ ಒಳ ಚರ್ಮ ಉಂಟಾಗುತ್ತದೆ ನೈಸರ್ಗಿಕ ಪದಾರ್ಥಗಳಾದ ಕಡಲೆ ಹಿಟ್ಟು ಮುಂತಾದವು ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಉಪಯೋಗಿಸಬಹುದು. ನಿಮ್ಮ ಮುಖಕ್ಕೆ ಸೋಪನ್ನೇ ನೀವು ಉಪಯೋಗಿಸಬೇಕು ಎಂದರೆ ನೀವು ಚರ್ಮ ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು ಅವರು ನಿಮಗೆ ಕಡಿಮೆ ರಾಸಾಯನಿಕ ಇರುವ ಸೋಪನ್ನು ನೀಡುತ್ತಾರೆ. ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಹಲವಾರು ಪ್ರಯೋಜನಗಳಿವೆ. ಉಗುರು ಬೆಚ್ಚಗಿನ ನೀರು ನಿಮ್ಮ ಮುಖದಲ್ಲಿ ಬೆಳಗಿನಿಂದ ಸಂಗ್ರಹವಾಗಿರುವ ಧೂಳು ಕೊಳೆ ಹಾಗೂ ಇತರ ವಿಷಕಾರಿ ಅಂಶಗಳನ್ನು ಆಳವಾಗಿ ತೆಗೆಯುವುದರಲ್ಲಿ ಸಹಾಯಕಾರಿ ಆಗಿದೆ ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆದು ನಂತರ ಮುಖವನ್ನು ನೀವು ಸರಿಯಾಗಿ ಒಣಗಿಸಬೇಕು ಈ ಹಂತವು ಕೂಡಾ ಬಹಳ ಮುಖ್ಯವಾಗಿ ಇರುತ್ತದೆ ಏಕೆಂದರೆ ಇಲ್ಲಿ ನೀವು ತಪ್ಪು ಮಾಡಿದರೆ ನಿಮ್ಮ ಮುಖ ಹಾಳಾಗುವ ಸಾಧ್ಯತೆಗಳು ಹೆಚ್ಚು ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ ಕಾಂತಿಯುತವಾಗಿ ಕಾಣಲು ಮಾಡಲು ಇದು ಕೊನೆಯ ಹಂತವಾಗಿದೆ.

Comments are closed.