ಆರೋಗ್ಯ

ಮುಖದ ಮೇಲಿನ ಮಚ್ಚೆ ಶಾಶ್ವತವಾಗಿ ತೆಗೆದುಹಾಕಲು ಈ ಸೊಪ್ಪಿನ ಪೇಸ್ಟ್ ಸಹಕಾರಿ

Pinterest LinkedIn Tumblr

ಮಚ್ಚೆ ತೆಗೆದುಹಾಕುವ ಸರಳ ವಿಧಾನವೆಂದರೆ ಕೊತ್ತಂಬರಿ ಸೊಪ್ಪಿನ ಪೇಸ್ಟನ್ನು ಮಚ್ಚೆ ಮೇಲೆ ಹಚ್ಚಿಕೊಳ್ಳುವುದು. ಈ ಔಷಧ ಸ್ವಲ್ಪ ಸಮಯ ತೆಗೆದುಕೊಂಡರೂ ಮಚ್ಚೆಯನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ.

ಹೂಕೋಸಿನ ಜ್ಯೂಸ್‌ ಕೂಡ ಮಚ್ಚೆಯನ್ನು ತೆಗೆದುಹಾಕುವುದು. ಹೂಕೋಸಿನ ಜ್ಯೂಸ್‌ ತಯಾರಿಸಿ ಪ್ರತಿ ದಿನ ಮಚ್ಚೆ ಮೇಲೆ ಹಚ್ಚಿಕೊಳ್ಳಬೇಕು. ಈ ರೀತಿ ಮಾಡುತ್ತಿದ್ದರೆ ಮಚ್ಚೆ ಅದಾಗಿಯೇ ಕಿತ್ತು ಬರುವುದು.

ಬೆಳ್ಳುಳ್ಳಿಯ ಪೇಸ್ಟ್‌ ಮಾಡಿಕೊಂಡು ಮಲಗುವ ಮೊದಲು ಮಚ್ಚೆಯ ಮೇಲೆ ಹಚ್ಚಿಕೊಂಡು, ಅದು ಉದುರಿ ಹೋಗದಂತೆ ಬ್ಯಾಂಡೇಜ ಕಟ್ಟಬೇಕು. ಮರುದಿನ ತೆಗೆಯಬೆಕು. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಮಚ್ಚೆಯು ಶಾಶ್ವತವಾಗಿ ಅಳಿದು ಹೋಗುವುದು.

ಹರಳೆಣ್ಣೆಯ ಮಸಾಜ ಮಾಡುವ ಮೂಲಕ ಕೂಡ ಮಚ್ಚೆಯನ್ನು ತೆಗೆಯಬಹುದು.

ಆ್ಯಪಲ್‌ ಸಿಡಾರ್‌ ಅಥವಾ ವಿನೇಗರ್‌ ಅನ್ನು ಮಚ್ಚೆಯ ಮೇಲೆ ಹಚ್ಚಿಕೊಂಡು 5-10 ನಿಮಿಷ ಕಾಲ ಹಾಗೆಯೇ ಬಿಡಬೇಕು. ಆನಂತರ ಬಿಸಿ ನೀರಿನಿಂದ ತೊಳೆಯಬೇಕು. ಬಳಿಕ ಮುಖವನ್ನು ಒಣಗಲು ಬಿಡಬೇಕು. ಮಚ್ಚೆಯನ್ನು ಶಾಶ್ವತವಾಗಿ ಅಳಿಸಲು ದಿನದಲ್ಲಿ ಎರಡು ಸಲ ಈ ರೀತಿ ಮಾಡಬೇಕು.

ಅಗಸೆ ಬೀಜದ ಎಣ್ಣೆಗೆ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ಇದನ್ನು ಮಚ್ಚೆ ಮೇಲೆ ಹಚ್ಚಿಕೊಂಡು 5 ನಿಮಿಷ ಕಾಲ ನಿಧಾನವಾಗಿ ಮಸಾಜ್‌ ಮಾಡಬೇಕು. ಆನಂತರ ಬಿಸಿ ನೀರಿನಿಂದ ತೊಳೆಯಬೇಕು. ಜೇನುತುಪ್ಪವನ್ನು ಪ್ರತಿದಿನ ಮಚ್ಚೆ ಮೇಲೆ ಹಚ್ಚಿಕೊಂಡರೂ ಅದಾಗಿಯೇ ಮಾಯವಾಗುವುದು.

Comments are closed.