ಸಾಮಾನ್ಯವಾಗಿ ಕಾಲು ಅಥವಾ ಮಾನವನ ದೇಹದ ಯಾವುದೇ ಭಾಗಕ್ಕೆ ಹೆಚ್ಚಗಲಿ ಉಳಕು ಕಂಡುಬಂದರೆ ಅದಕ್ಕೆ ಸೂಕ್ತ ಪರಿಹಾರ ಅಂದ್ರೆ ಅದು ಮನೆಯಲ್ಲಿ ಸಿಗು ಮನೆಮದ್ದುಗಳೇ ಉತ್ತಮ ಪರಿಹಾರ ಎಂದು ಹೇಳಬಹುದು. ಹಳೆಯ ಹುಣಿಸೆಯ ಹಣ್ಣು ಮತ್ತು ಬೆಲ್ಲದಿಂದ ಯಾವ ರೀತಿ ಉಳಕು ನಿವಾರಣೆ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.
ಬೆಲ್ಲವನ್ನು ಹಳೆಯ ಹುಣಸೆಹಣ್ಣಿನೊಂದಿಗೆ ಬಿಸಿ ಮಾಡಿ, ಉಳುಕಿದ ಜಾಗಕ್ಕೆ ಕಾವು ಕೊಟ್ಟರೆ ನೋವು ಕಡಿಮೆ ಆಗುವುದಲ್ಲದೆ ಬೇರ್ಪಟ್ಟ ಕೀಲುಗಳು ಸರಿಜಾಗದಲ್ಲಿ ಸೇರುವವು.
ಬೆಲ್ಲವನ್ನು ತುಪ್ಪಕ್ಕೆ ಹಾಕಿ ಬಿಸಿ ಮಾಡಿ, ಉಳಿಕಿರುವ ಜಾಗದಲ್ಲಿ ಲೇಪಿಸುವುದರಿಂದ ನೋವು ಕಡಿಮೆ ಆಗುವುದು.
ಉಳುಕಿರುವ ಹಾಗೂ ಊದಿರುವ ಜಾಗಕ್ಕೆ ಬಿಸಿ ನೀರಿನಿಂದ ಕಾವು ಕೊಡುವುದರಿಂದ ನೋವು ಕಡಿಮೆ ಆಗುವುದು. ಊತವೂ ಇಳಿಕೆಯಾಗುವುದು.
ಬಿಸಿ ಮಾಡಿದ ಹುಣಸೆ ಗೊಜ್ಜನ್ನು ಉಳುಕಿರುವ ಹಾಗೂ ಊತ ಇರುವ ಭಾಗದ ಮೇಲೆ ಲೇಪಿಸುವುದರಿಂದ ನೋವು ಕಡಿಮೆ ಆಗುವುದು.
ಉಳುಕಿದ ತಕ್ಷಣ ಹರಳೆಣ್ಣೆ ಹಾಕಿ ನಿಧಾನವಾಗಿ ಮಸಾಜ್ ಮಾಡಬೇಕು. ಬೆಳಗ್ಗೆ ಎದ್ದ ತಕ್ಷಣ ಕೂಡ ಎಣ್ಣೆ ಹಾಕಿ ಮಸಾಜ್ ಮಾಡಿದರೆ ನೋವು ಕಡಿಮೆಯಾಗುವುದು.
Comments are closed.