ಆರೋಗ್ಯ

ಮಜ್ಜಿಗೆಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ.

Pinterest LinkedIn Tumblr

ಆ್ಯಸಿಡಿಟಿ ಸಮಸ್ಯೆ ಆರಂಭವಾದೊಡನೆ ನಾಲ್ಕೈದು ತುಳಸಿ ಎಲೆಗಳನ್ನು ಸೇವಿಸಿ.
* ತುಳಸಿ ಎಲೆಯನ್ನು ಹಾಗೆಯೇ ತಿನ್ನುವುದಕ್ಕಾಗಲಿಲ್ಲವೆಂದರೆ ಸ್ವಲ್ಪ ನೀರಿಗೆ ಮೂರ‌್ನಾಲ್ಕು ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ಆರಿದ ಮೇಲೆ ಸೇವಿಸಿ. ಸಿಹಿ ಬೇಕೆನ್ನಿಸಿದರೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ. ಈ ಕಷಾಯವನ್ನು ಆಗಾಗ ಸ್ವಲ್ಪ ಸ್ವಲ್ಪ ಸೇವಿಸಿ. ಇದಕ್ಕೆ ಸಕ್ಕರೆ ಅಥವಾ ಹಾಲನ್ನು ಮಿಶ್ರಣಮಾಡಬೇಡಿ.
* ದಾಲ್ಚಿನ್ನಿಯು ಸಹ ಆ್ಯಸಿಡಿಟಿ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಂದು ಲೋಟ ನೀರಿಗೆ ಚಿಟಕಿಯಷ್ಟು ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ ದಿನವೂ ಮೂರ‌್ನಾಲ್ಕು ಬಾರಿ ಸೇವಿಸುವುದರಿಂದ ಆ್ಯಸಿಡಿಟಿ ಸಮಸ್ಯೆ ಪರಿಹಾರವಾಗುತ್ತದೆ.
* ಒಂದರಿಂದ ಎರಡು ಚಮಚ ಮೆಂತ್ಯಬೀಜವನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ನಂತೆ ಮಾಡಿಕೊಳ್ಳಿ. ಇದನ್ನು ಮಜ್ಜಿಗೆಯೊಂದಿಗೆ ಸೇರಿಸಿ ಸೇವಿಸಿ. ಕೇವಲ ಮಜ್ಜಿಗೆಯನ್ನೇ ದಿನವೂ ಆಗಾಗ ಸೇವಿಸುತ್ತಿರುವುದು ಸಹ ಆ್ಯಸಿಡಿಟಿ ಸಮಸ್ಯೆಗೆ ಒಳ್ಳೆಯದು.
* ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಅಥವಾ ಒಂದು ಚಮಚದಷ್ಟು ಕೊತ್ತಂಬರಿ ಸೊಪ್ಪಿನ ರಸವನ್ನು ಮಿಶ್ರಣಮಾಡಿ ಸೇವಿಸಿ.

Comments are closed.