ಸರಿಯಾದ ನಿದ್ದೆ ಇಲ್ಲ ಅಂದರೆ ಏನಾಗುತ್ತದೆ ಎಂದು ಗೊತ್ತಾದರೆ ನೀವು ಖಂಡಿತ ಶಾಕ್ ಆಗುತ್ತಿರ. ನಿದ್ದೆ ಸರಿಯಾಗಿ ಆಗಿಲ್ಲ ಅಂದರೆ ಕಣ್ಣಿಗೂ ಅಥವಾ ಮೆದುಳಿಗೆ ಅಲ್ಲ ದೇಹದ ಎಲ್ಲಾ ಅಂಗಗಳಿಗೂ ತೊಂದರೆ ಆಗುತ್ತೆ. ನಿದ್ದೆ ಏಕೆ ನಮಗೆ ಅಷ್ಟು ಮುಖ್ಯ ಅಂತ ಈ ಲೇಖನದಲ್ಲಿ ತಿಳಿಯೋಣ. ನಿದ್ದೆ ಸರಿಯಾಗಿ ಆಗಿಲ್ಲ ಅಂದರೆ ಮೊದಲು ತೊಂದರೆ ಆಗುವುದು ನಮ್ಮ ಮೆದುಳಿಗೆ ನಮ್ಮ ಮೆದುಳಿನಲ್ಲಿ ಪ್ರತಿ ದಿನ ಟಾಕ್ಸಿಕ್ ಪ್ರೋಟಿನ್ ಬಿಡುಗಡೆ ಆಗುತ್ತೆ. ಇವೆನದರೂ ಹೆಚ್ಚು ಹೊತ್ತು ನಮ್ಮ ಮೆದುಳಿನಲ್ಲಿ ಇದ್ದರೆ ನಮ್ಮ ಜ್ಞಾಪಕ ಶಕ್ತಿ ನಿಧಾನವಾಗಿ ಕಡಿಮೆ ಆಗುತ್ತೆ. ನಂತರ ಹೆಚ್ಚಿನ ತೊಂದರೆಗೆ ಒಳಗಾಗುವುದು ನಮ್ಮ ಹೃದಯ. ಹುಟ್ಟಿದಾಗಿನಿಂದ ಸಾಯುವ ವರೆಗೂ ಕೆಲ್ಸ ಮಾಡುವ ಅಂಗ ನಮ್ಮ ಹೃದಯ ನಾವು ನಿದ್ರೆ ಮಾಡುವ ಸಮಯದಲ್ಲಿ ಈ ಹೃದಯಕ್ಕೆ ವಿಶ್ರಾಂತಿ ಸಿಗುತ್ತೆ ಬ್ಲಡ್ ಪ್ರೆಶರ್ ಕಡಿಮೆ ಆಗುತ್ತೆ ನಮ್ಮ ಹೃದಯಕ್ಕೆ ವಿಶ್ರಾಂತಿ ಸಿಗುವುದು ನಾವು ನಿದ್ರೆ ಹೋಗುವಾಗ ಮಾತ್ರ.
ನಾವು ಒಂದು ದಿನ ನಿದ್ದೆ ಮಾಡಿಲ್ಲ ಅಂದರೆ ನಮ್ಮ ಮುಖ ಹೇಗೆ ಇರುತ್ತೆ ಅಂತ ನಮಗೆ ಚೆನ್ನಾಗಿ ಗೊತ್ತು, ಕಾರಣ ಏನು ಅಂದರೆ ನಿದ್ದೆ ಇಲ್ಲದ ಸಮಯದಲ್ಲಿ ಡ್ರಸ್ ಹಾರ್ಮೋನ್ ಗಳು ಹೆಚ್ಚಾಗಿ ಬಿಡುಗಡೆ ಆಗುತ್ತೆ ಇವು ನಮ್ಮ ಚರ್ಮವನ್ನು ಹೆಚ್ಚು ಲೂಸ್ ಆಗುವಂತೆ ಮಾಡುತ್ತೆ ಇದರಿಂದ ಮುಖದ ಮೇಲೆ ಮತ್ತು ಕಣ್ಣಿನ ಕೆಳ ಭಾಗದಲ್ಲಿ ಚರ್ಮ ಕಪ್ಪಾಗಿ ಕಾಣುತ್ತೆ ಸಾಧಾರಣ ಸಮಯಕ್ಕಿಂತ ನಾವು ನಿದ್ರೆ ಹೋಗುವ ಸಮಯದಲ್ಲಿ ನಮ್ಮ ಮುಖಕ್ಕೆ ರಕ್ತ ಕಣಗಳ ಚಲಾವಣೆ ತುಂಬಾ ಚೆನ್ನಾಗಿ ಇರುತ್ತೆ ಮುಖ ಕಾಂತಿಯುಕ್ತವಾಗಿ ಇರುತ್ತೆ ನಿದ್ದೆ ಮಾಡದೆ ಹೋದರೆ ಕಣ್ಣಿನ ಸುತ್ತ ಕಪ್ಪು ಮಚ್ಚೆಗಳು ಬರುತ್ತೆ ಮುಖ ಕಪ್ಪಾಗಿ ಕಾಣುತ್ತೆ.
ಅದೇ ರೀತಿ ನಿದ್ರೆ ಕಮ್ಮಿ ಆಗುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿ ಆಗುವುದು ಹಾರ್ಮೋನ್ ಬಿಡುಗಡೆ ಇಮ್ ಬ್ಯಾಲೆನ್ಸ್ ಆಗುವುದು ಫಿಸಿಕಲ್ ಆಗಿ ಮೆಂಟಲ್ ಆಗಿ ಮತ್ತು ಎಮೋರ್ಷನಲ್ ಆಗಿ ಎಫೆಕ್ಟ್ ಆಗುತ್ತೆ ಮುಖ್ಯವಾಗಿ ಕೆಲಸದ ಶಿಫ್ಟ್ ಗಳ ಬದಲಾವಣೆ ಇಂದ ಜಾಸ್ತಿ ತೊಂದರೆ ಆಗುತ್ತೆ. 24 ಗಂಟೆಗಳ ಒಳಗೆ ನಾವು ನಿದ್ರೆ ಹೋಗಲಿಲ್ಲ ಅಂದರೆ ನಮ್ಮ ಮೆದುಳು ನಮಗೆ ತಿಳಿಯದ ಹಾಗೆ ಚಿಕ್ಕ ಚಿಕ್ಕ ಮೈಕ್ರೋ ಸ್ಲೀಪ್ ಗಾಳನ್ನು ತೆಗೆದುಕೊಳ್ಳುತ್ತದೆ ಇದು ಸಾಮಾನ್ಯವಾಗಿ ಒಂದು ಸೆಕೆಂಡ್ ಇಂದ 30 ಸೆಕೆಂಡ್ ವರೆಗೂ ತೆಗೆದು ಕೊಳ್ಳುತ್ತದೆ ಅಪಘಾತಗಳು ಜಾಸ್ತಿ ಆಗುವುದಕ್ಕೆ ಇದೆ ಕಾರಣ ನಿಮಗೆ ಗೊತ್ತಾ ಡ್ರಿಂಕ್ಸ್ ಮಾಡಿ ಆಗುವ ಅಪಘಾತಗಳು ಗಿಂತ ಹೆಚ್ಚು ಅಪಘಾತಗಳು ನಿದ್ರೆ ಇಲ್ಲದೆ ಆಗುತ್ತಿವೆ.
Comments are closed.