ನಾಲಿಗೆ ರುಚಿಗೆ ಹೆಚ್ಚು ಮಹತ್ವ ನೀಡುವ ವ್ಯಕ್ತಿ ನೀವಾಗಿದ್ದರೆ, ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ನೀವು ತುತ್ತಾಗಿರುತ್ತೀರಿ, ರುಚಿಯಾಗಿರುವ ಆಹಾರವೆಲ್ಲ ಶುದ್ಧವಾಗಿಯೂ ಆರೋಗ್ಯವಾಗಿಯೂ ಇರುತ್ತದೆ ಎಂಬ ಕಾತರಿ ಇಲ್ಲದ ಕಾರಣ, ಮನೆಯ ಊಟ ಬಿಟ್ಟು ಹೋಟೆಲ್ ಊಟ ನಿಮ್ಮ ಆರೋಗ್ಯವನ್ನು ಆಗಾಗ ಕೆಡಿಸುತ್ತದೆ, ಇನ್ನು ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ಮನೆ ಮದ್ದಿನ ಬಗ್ಗೆ ನಿಮಗೆ ತಿಳಿಸುತ್ತೇವೆ.
ಇನ್ನು ಫುಡ್ ಪಾಯಿಸನ್ ಬಂದರೆ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಇವುಗಳು ಸಾಮಾನ್ಯ, ಇವುಗಳಿ ಉತ್ತಮ ಪರಿಹಾರಗಲಿ ಇಂದು ತಿಳಿಸುತ್ತೇವೆ.
ಹೊಟ್ಟೆ ನೋವಿನ ಸಮಸ್ಯೆಗೆ ಹಿಂದಿನಿಂದಲೂ ಶುಂಟಿಯನ್ನ ಬಳಸುತ್ತ ಬಂದಿದ್ದಾರೆ, ಅರ್ಥ ಶುಂಠಿ ಹಾಗು ಜೇನುತುಪ್ಪವನ್ನು ನೀರಿನಲ್ಲಿ ಚೆನ್ನಾಗಿ ಕಾಯಿಸಿ ಹೊಟ್ಟೆ ನೋವು ತಕ್ಷಣಕ್ಕೆ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿಯಲ್ಲಿದೆ ಆ್ಯಂಟಿವೈರಲ್ ಗುಣ, ಈ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣ ದೇಹವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮವಾದದ್ದು ಎಂದು ಹೇಳಲಾಗಿದೆ, ಹಾಗು ಹಸಿ ಬೆಳ್ಳುಳ್ಳಿಯ ಎಸಳನ್ನು ನೀರಿನ ಜೊತೆ ಸೇವಿಸಿ, ಇದರಿಂದ ಹೊಟ್ಟೆ ಸಮಸ್ಯೆ ಮಾಯವಾಗುತ್ತದೆಯಂತೆ.
ನಿಂಬೆ ಹಣ್ಣಿನಲ್ಲೂ ಸಹ ಆ್ಯಂಟಿಆಕ್ಸಿಡೆಂಟ್ ಗುಣವಿದ್ದು, ದೇಹದ ಅರೋಗ್ಯ ಕಾಪಾಡುವಲ್ಲಿ ಉತ್ತಮ ಪಾತ್ರ್ ವಹಿಸುತ್ತದೆ, ಒಂದು ಲೋಟ ನೀರಿನಲ್ಲಿ ಅರ್ಧ ನಿಂಬೆ ಹೋಳಿನ ರಸ ಇಂಡಿ ಕುಡಿದರೆ ಹೊಟ್ಟೆ ತೊಳಸುವಿಕೆ ಕಡಿಮೆಯಾಗುತ್ತದೆ, ಅವಶ್ಯವಿದ್ದರೆ ಇದರಲ್ಲಿ ಜೇನು ತುಪ್ಪ ಸಹ ಬೆರಸಬಹುದು.
ಫುಡ್ ಪಾಯಿಸ್ನಿಂಗ್ ಸಮಸ್ಯೆಗೆ ಜೀರಿಗೆ ತಕ್ಷಣ ಪರಿಹಾರ ನೀಡುತ್ತದೆ. ಒಂದು ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ. ಇದಕ್ಕೆ ಕೊತ್ತಂಬರಿ ರಸ ಹಾಗು ಸ್ವಲ್ಪ ಉಪ್ಪು ಹಾಕಿ, ಅದರ ಜೊತೆ ಬೆರೆಸಿ ಸೇವಿಸಿ. ಇದರಿಂದ ದೇಹ ಸ್ವಚ್ಛವಾಗುತ್ತದೆ.
Comments are closed.