ಆರೋಗ್ಯ

ತಲೆಹೊಟ್ಟಿಗೆ ಆಧುನಿಕ ಜೀವನ ಶೈಲಿ ಅಥಾವ ಕಲುಷಿತ ವಾತಾವರಣ, ಕಾರಣವೇ…ತಿಳಿಯಿರಿ.!

Pinterest LinkedIn Tumblr

ತಲೆಹೊಟ್ಟು ಪ್ರತಿಯೊಬ್ಬರನ್ನು ಕಾಡುತ್ತಿರುವ ಸಮಸ್ಯೆಯಾಗಿ ಬಿಟ್ಟಿದೆ. ಆಧುನಿಕ ಜೀವನ ಶೈಲಿ ಮತ್ತು ಕಲುಷಿತ ವಾತಾವರಣವೇ ಇದಕ್ಕೆ ಮೂಲ ಕಾರಣವೆನ್ನಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ತಲೆಹೊಟ್ಟು ಸಮಸ್ಯೆ ಇದೆ.

*ಲಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಆಮ್ಲೀಯ ಗುಣವು ತಲೆಹೊಟ್ಟನ್ನು ದೂರವಿಡುತ್ತದೆ. ಲಿಂಬೆಯ ರಸವನ್ನು ತೆಗೆದು ತಲೆಗೆ ಹಚ್ಚಬಹುದು ಅಥವಾ ನೇರವಾಗಿ ನಿಂಬೆಯನ್ನು ತಲೆಗೆ ಉಜ್ಜಬಹುದು.

*ಕೂದಲನ್ನು ಸರಿಯಾಗಿ ಒಣಗಿಸಿ ಮತ್ತು ಸ್ವಲ್ಪ ಅಡುಗೆ ಸೋಡಾವನ್ನು ಕೂದಲಿಗೆ ಸಿಂಪಡಿಸಿಕೊಂಡು ಮಸಾಜ್ ಮಾಡಿಕೊಳ್ಳಿ. ಶಾಂಪೂವಿನಿಂದ ತೊಳೆಯಿರಿ. ಅಡುಗೆ ಸೋಡಾವು ಫಂಗಿಗಳು ಅತಿಯಾಗಿ ಪ್ರತಿಕ್ರಿಯಿಸುವುದನ್ನು ತಡೆಯುತ್ತದೆ. ಇದರಿಂದ ತಲೆಬುರುಡೆಯು ಸ್ವಚ್ಛವಾಗಿರುತ್ತದೆ.

*ಮಾಗಿದ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಒಂದು ಚಮಚ ಮೊಸರು ಮತ್ತು ನಾಲ್ಕು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ೨೦ ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.

*ಸಾಲಿಸ್ಯಲಿಕ್ ಆಮ್ಲವು ಹೊಂದಿರುವಂತಹ ಶಾಂಪೂವನ್ನು ಮಕ್ಕಳ ಕೂದಲಿಗೆ ವಾರದಲ್ಲಿ ಎರಡು ಸಲ ಬಳಸಿ. ಇದು ತಲೆಹೊಟ್ಟನ್ನು ನಿವಾರಿಸುತ್ತದೆ. ಆದರೆ ವೈದ್ಯರನ್ನು ಭೇಟಿಯಾಗಿ ಮಗುವಿಗೆ ಯಾವ ರೀತಿಯ ಶಾಂಪೂ ಬಳಕೆ ಮಾಡಬಹುದು ಎಂದು ತಿಳಿದುಕೊಂಡರೆ ಒಳ್ಳೆಯದು.

Comments are closed.