ಆರೋಗ್ಯ

ನಪುಂಸಕತ್ವ ಉಂಟಾಗಲು ಇದು ಕೂಡ ಕಾರಣವಾಗಬಹುದೇ..?

Pinterest LinkedIn Tumblr

ನಪುಂಸಕತ್ವ ಇಂದು ಸಾಮಾನ್ಯವಾದ ತೊಂದರೆಯಾಗಿದೆ. ಹೆಚ್ಚಿನ ಪುರುಷರು ತಮ್ಮ ಕೊರತೆಯನ್ನು ಪರಿಗಣಿಸದೇ ಸಂತಾನಹೀನತೆಗೆ ತಮ್ಮ ಪತ್ನಿಯರನ್ನೇ ದೂಷಿಸುತ್ತಾರೆ. ವಾಸ್ತವವಾಗಿ ಇಂದಿನ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಅಪಾಯಕರ ಮಟ್ಟಕ್ಕೆ ಕುಸಿದಿರುವುದು ವೈದ್ಯಕೀಯ ಸಮೀಕ್ಷೆಯಿಂದ ಕಂಡುಬಂದ ಸತ್ಯವಾಗಿದೆ.

ಇದಕ್ಕೆ ಮಾನಸಿಕ ಒತ್ತಡ ಪ್ರಮುಖವಾದ ಕಾರಣವಾಗಿದೆ. ಅಲ್ಲದೇ ಬದಲಾದ ಜೀವನಶೈಲಿ, ಆಹಾರಕ್ರಮ, ಗಾಳಿಯಲ್ಲಿರುವ ವಿಷಕಣಗಳು, ಖನಿಜಗಳಿಲ್ಲದ ನೀರನ್ನು ಕುಡಿಯುವುದು ಮೊದಲಾದ ಹಲವು ಕಾರಣಗಳಿವೆ. ಇವೆಲ್ಲವೂ ಒಟ್ಟಾರೆ ಆರೋಗ್ಯವನ್ನೇ ಕಸಿದಿರುವುದು ಸುಳ್ಳಲ್ಲ.

ಯಾವಾಗ ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಸಾಧ್ಯವಿಲ್ಲದಾಯಿತೋ ಆಗಲೇ ವೀರ್ಯಾಣುಗಳ ಸಂಖ್ಯೆಯೂ ಅಗತ್ಯಕ್ಕಿಂತ ಕಡಿಮೆಯಾಗಿ ಹೋಗಿಗೆ. ಆದ್ದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಮತ್ತು ಒಟ್ಟಾರೆ ಆರೋಗ್ಯ ವೃದ್ದಿಸಿಕೊಳ್ಳಲು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಕೊಂಚ ಮೈ ಬಗ್ಗಿಸುವುದು ಅಗತ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ…

ವೀರ್ಯನಾಶ
ಒಂದು ಸಂಶೋಧನೆಯ ಪ್ರಕಾರ ವೀರ್ಯವನ್ನು ಸ್ಖಲಿಸಿಕೊಳ್ಳುವ ಮೂಲಕ ವೃಷಣಗಳಲ್ಲಿ ಅಗತ್ಯಪ್ರಮಾಣದಲ್ಲಿ ವೀರ್ಯ ಸಂಗ್ರಹವಾಗದೇ ಇರುವ ಕಾರಣ ವೀರ್ಯಾಣುಗಳ ಸಂಖ್ಯೆಯಲ್ಲಿ ಕಡಿಮೆಯಾಗಬಹುದು. ಈ ತೊಂದರೆ ಇದ್ದವರು ತಮ್ಮ ಹಿಂದಿನ ಅಭ್ಯಾಸಗಳನ್ನು ಬದಲಿಸಿ ಹೆಚ್ಚಿನ ದಿನಗಳವರೆಗೆ ಯಾವುದೇ ಸ್ಖಲನವಿಲ್ಲದೇ ವೀರ್ಯವನ್ನು ಹೆಚ್ಚು ಸಾಂದ್ರೀಕರಿಸಬೇಕು. ಹಾಗೂ ಹೀಗೆ ಸಾಂದ್ರೀಕರಿಸಿದ ವೀರ್ಯವನ್ನು ತಮ್ಮ ಜೀವನಸಂಗಾತಿಯ ಅತಿಹೆಚ್ಚಿನ ಫಲತೆಯ ದಿನಗಳಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು.

ಧೂಮಪಾನ ಮತ್ತು ಮದ್ಯಮಾನ
ಇವೆರಡರ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮಗಳಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಆದರೆ ಇವುಗಳು ವೀರ್ಯಾಣುಗಳ ಸಂಖ್ಯೆ ಮತ್ತು ಸಾಮರ್ಥ್ಯವನ್ನೂ ಕುಗ್ಗಿಸಬಹುದು. ಅಲ್ಲದೇ ಎಷ್ಟೋ ಸಂದರ್ಭಗಳಲ್ಲಿ ವಿಕೃತ ಮತ್ತು ಕಡಿಮೆ ತೂಕದ ಮಕ್ಕಳು ಹುಟ್ಟುವ ಸಾಧ್ಯತೆಯೂ ಇದೆ. ಆದ್ದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಬೇಕಾದರೆ ಮದ್ಯಪಾನ ಧೂಮಪಾನದ ಬಗ್ಗೆ ಚಿಂತಿಸದೇ ಇರುವುದೇ ಮೇಲು.

ವ್ಯಾಯಾಮ
ವೀರ್ಯಾಣುಗಳ ಸಂಖ್ಯೆಗೂ ನಿತ್ಯದ ವ್ಯಾಯಾಮಕ್ಕೂ ನೇರವಾದ ಸಂಬಂಧವಿದೆ. ಆದ್ದರಿಂದ ಎಷ್ಟೇ ನೆವಗಳಿದ್ದರೂ ನಿತ್ಯವೂ ನಿಮಗೆ ಸೂಕ್ತವಾದ ಸಮಯವನ್ನು ಆರಿಸಿ ಕೊಂಚವಾದರೂ ವ್ಯಾಯಾಮವನ್ನು ಮಾಡುವುದು ಅಗತ್ಯ.

ಅತಿ ಬಿಸಿ ಇರುವ ಸ್ಥಳಗಳಲ್ಲಿರುವುದು
ಬಿಸಿ ಹಾಗೂ ಸೆಖೆ ವೀರ್ಯಾಣುಗಳ ಸಂಖ್ಯೆಯನ್ನು ಆಘಾತಕಾರಿ ಮಟ್ಟಕ್ಕೆ ಇಳಿಸಬಹುದು. ಬಿಗಿಯಾದ ಒಳ ಉಡುಪು, ಬಿಸಿಯಾದ ನೀರಿನ ಸ್ನಾನ, ಬಿಸಿ ಇರುವ ಸ್ಥಳಗಳಲ್ಲಿ ಕೆಲಸ ಮೊದಲಾದವುಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತವೆ. ದಿನವಿಡೀ ಬೈಕ್ ಚಲಾಯಿಸುವುದು ಅಥವಾ ಫ್ಯಾಶನ್ ಎಂದು ದಿನವಿಡೀ ಬಿಗಿಯಾದ ಜೀನ್ಸ್ ಧರಿಸುವುದೂ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ.

ಮದ್ಯಪಾನ
ಮದ್ಯಪಾನದ ವ್ಯಸನಿಗಳಲ್ಲಿ ಟೆಸ್ಟೋಸ್ಟೆರೋನ್ ಪ್ರಮಾಣ ವಿಪರೀತವಾಗಿ ಕಡಿಮೆಯಾಗುತ್ತದೆ. ಅಲ್ಲದೇ ಮಹಿಳೆಯರಲ್ಲಿ ಈಸ್ಟ್ರೋಜೆನ್ ಪ್ರಮಣವನ್ನು ಹೆಚ್ಚಿಸುತ್ತದೆ. ಇದರಿಂದಲೂ ವೀರ್ಯಾಣುಗಳ ಸಂಖ್ಯೆ ಅಪಾರವಾಗಿ ಕಡಿಮೆಯಾಗುತ್ತದೆ.

ನೀರು ಕುಡಿಯದಿರುವುದು
ಕೆಲವರು ಮೂತ್ರಕ್ಕೆ ಅವಸರವಾಗುತ್ತದೆ ಎಂಬ ಕಾರಣ ಒಡ್ಡಿ ನೀರನ್ನೇ ಕುಡಿಯುವುದಿಲ್ಲ. ಇದು ಅಪಾಯಕಾರಿಯಾಗಿದ್ದು ಹಲವು ಆರೋಗ್ಯದ ತೊಂದರೆಗಳ ಸಹಿತ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟವನ್ನೂ ಕುಂದಿಸುತ್ತದೆ. ಆದ್ದರಿಂದ ದಿನವಿಡೀ ಸತತವಾಗಿ ನೀರು, ಹಣ್ಣಿನ ರಸಗಳನ್ನು ಸೇವಿಸುತ್ತಾ ಇರಬೇಕು.

ವಿಷಕಾರಿ ವಸ್ತುಗಳು
ಇಂದಿನ ಆಹಾರಗಳು ಸಿದ್ಧ ರೂಪದಲ್ಲಿ ಸಿಗಬೇಕಾದರೆ ಕೆಲವು ಸಂರಕ್ಷಕಗಳನ್ನು ಸೇರಿಸಿರುತ್ತಾರೆ. ಕೆಲವೆಡೆ ರುಚಿ ಹೆಚ್ಚಿಸಲು ಅಜಿನೋ ಮೋಟೋ ಮೊದಲಾದವುಗಳನ್ನು ಬೆರೆಸುತ್ತಾರೆ. ಇವು ವಿಷಕಾರಿಯಾಗಿದ್ದು ವೀರ್ಯಾಣುಗಳ ಸಂಖ್ಯೆಯನ್ನು ಗಾಬರಿಪಡಿಸುವಷ್ಟು ಕುಂದಿಸುತ್ತವೆ. ಆದ್ದರಿಂದ ಸಿದ್ಧ ಆಹಾರಗಳನ್ನು ಬಯಸದೇ ನೈಸರ್ಗಿಕ ಮತ್ತು ಮನೆಯ ಆಹಾರದತ್ತ ಒಲವು ತೋರುವ ಮೂಲಕ ಈ ಸ್ಥಿತಿಗೆ ಬಾರದಂತೆ ನೋಡಿಕೊಳ್ಳಬಹುದು.

Comments are closed.