ಹಾಲಿನೊಂದಿಗೆ ತುಳಸಿ ಸೇವನೆ ಮಾಡಿದರೆ ಈ ರೋಗಗಳಿಗೆ ರಾಮಬಾಣ. ಮೊದಲಿನ ಜನರು ಅಂದರೆ ನಮ್ಮ ಪೂರ್ವಜರು ಅಂಗೈಯಲ್ಲಿ ಆರೋಗ್ಯ ಎನ್ನುವ ಮಾತನ್ನು ನಿಜ ಮಾಡಿದ್ದರು ಏಕೆಂದರೆ ಅವರು ತಮ್ಮ ಸುತ್ತ ಮುತ್ತಲು ಇರುವ ಸಸ್ಯದಲ್ಲಿರುವ ಔಷಧಿ ಗುಣಗಳನ್ನು ತಿಳಿದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು ಆದರೆ ಇಂದಿನ ದಿನದಲ್ಲಿ ಕಾಲ ಬದಲಾದಂತೆ ಜನರು ಸಹ ಬದಲಾಗಿದ್ದಾರೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ ಒಂದು ಸಣ್ಣ ಕೆಮ್ಮು ಶೀತ ಬಂದರು ಸಹ ಮಾತ್ರೆ ತೆಗೆದು ಕೊಳ್ಳುವಂತಹದ್ದು. ಮಾತ್ರೆ ತಕ್ಷಣ ಆರಾಮ ನೀಡುತ್ತದೆ ನಿಜ ಆದರೆ ಅದರಿಂದ ಸಾಕಷ್ಟು ಅಡ್ಡ ಪರಿಣಾಮಗಳೂ ಕೂಡ ಇವೆ ನಮ್ಮ ಪೂರ್ವಜರು ಆಯುರ್ವೇದ ಹಾಗೂ ಮನೆ ಮದ್ದುಗಳಿಂದ ರೋಗಗಳನ್ನು ಗುಣಪಡಿಸಿ ಕೊಳ್ಳುತ್ತಿದ್ದರು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುತ್ತಿರಲಿಲ್ಲ
ತುಳಸಿ ಗಿಡದ ಮಹತ್ವ ಎಲ್ಲರಿಗೂ ಗೊತ್ತು ನೆಗಡಿ ಜ್ವರ ಕೆಮ್ಮಿಗೆ ತುಳಸಿಯನ್ನು ಬಳಕೆ ಮಾಡುತ್ತಾರೆ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿರುವಂತಹ ಈ ತುಳಸಿಯನ್ನು ಹಾಲಿನೊಂದಿಗೆ ಖಾಲಿಹೊಟ್ಟೆಯಲ್ಲಿ ಕುಡಿಯುವುದು ಬಹಳ ಒಳ್ಳೆಯದು ಅನೇಕ ರೋಗಗಳಿಗೆ ಇದು ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುವ ಶಕ್ತಿ ಕೂಡ ಈ ತುಳಸಿ ಮತ್ತು ಹಾಲಿಗೆ ಇದೆ ಆಂಟಿಬಯೋಟಿಕ್ ಹಾಗೂ ಆಂಟಿಆಕ್ಸ್ಕಿಡೆಂಟ್ ಗುಣ ತುಳಸಿಯಲ್ಲಿದೆ ಹಾಲಿನಲ್ಲಿ ಪೋಷಕಾಂಶಗಳು ಇವೆ ಇದರಿಂದ ಪ್ರತಿರಕ್ಷಣಾ ಶಕ್ತಿ ಹೆಚ್ಚಾಗುತ್ತದೆ ನಮ್ಮ ದೇಹ ಕ್ಯಾನ್ಸರ್ ನಂತಹ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ. ಈಗಿನ ಕಾಲದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಕೀಳರಿಮೆಗೆ ಗುರಿಯಾಗುತ್ತಿದ್ದಾರೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ಕೂಡ ಹೋಗುತ್ತಾರೆ ನಿಮ್ಮಲ್ಲಿ ಅಥವಾ ನಿಮ್ಮ ಅಕ್ಕಪಕ್ಕದವರಲ್ಲಿ ಈ ಕೀಳರಿಮೆ ಕಾಣಿಸಿಕೊಂಡರೆ ಈ ಹಾಲಿನ ಜೊತೆ ತುಳಸಿಯನ್ನು ಹಾಕಿ ಕುಡಿಯಬೇಕು ಇದು ನರ ಮಂಡಲವನ್ನು ಸಮತೋಲನದಲ್ಲಿ ಇಡುತ್ತದೆ.
ಒತ್ತಡವನ್ನು ಉಂಟು ಮಾಡುವ ಹಾರ್ಮೋನಗಳನ್ನು ನಿಯಂತ್ರಣ ಮಾಡುತ್ತದೆ ಜೊತೆಗೆ ಆಗಾಗ ಕಾಣಿಸಿಕೊಳ್ಳುವ ತಲೆನೋವನ್ನು ಸಹ ದೂರ ಮಾಡುತ್ತದೆ. ಆದ್ದರಿಂದ ಪ್ರತಿದಿನ ಖಾಲಿಹೊಟ್ಟೆಯಲ್ಲಿ ತುಳಸಿಯನ್ನು ಹಾಲಿನೊಂದಿಗೆ ಸೇವನೆ ಮಾಡುತ್ತ ಬರುವುದರಿಂದ ಅಸ್ತಮಾದಂತಹ ಕಾಯಿಲೆಗಳು ದೂರವಾಗುತ್ತವೆ.
ಮೂತ್ರ ಪಿಂಡದಲ್ಲಿ ಕಲ್ಲು ಬೆಳೆಯುತ್ತಿದ್ದರೆ ಖಾಲಿಹೊಟ್ಟೆಯಲ್ಲಿ ತುಳಸಿಯನ್ನು ಹಾಲಿನೊಂದಿಗೆ ಸೇವನೆ ಮಾಡಬೇಕು ಕೆಲವೇ ದಿನಗಳಲ್ಲಿ ಕಲ್ಲು ಕರಗಿ ಹೋಗುತ್ತದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಖಾಲಿಹೊಟ್ಟೆಯಲ್ಲಿ ಇದನ್ನು ಕುಡಿಯುತ್ತ ಬಂದರೆ ಕೆಲವೇ ಕೆಲವು ದಿನಗಳಲ್ಲಿ ಇದರಿಂದ ಒಳ್ಳೆಯ ಪರಿಣಾಮವನ್ನು ನಾವು ಕಾಣಬಹುದು.
ಈ ತುಳಸಿ ಎನ್ನುವುದು ನಮ್ಮ ಆರೋಗ್ಯಕ್ಕೆ ತುಂಬ ಉಪಯುಕ್ತವಾದ ಒಂದು ಮದ್ದಾಗಿದೆ ಪ್ರತಿದಿನ ತುಳಸಿ ಎಲೆಯನ್ನು ಎರಡು ಅಗಳು ಉಪ್ಪಿನೊಂದಿಗೆ ತಿನ್ನುವುದರಿಂದ ಕೆಮ್ಮು ನಿವಾರಣೆಯಾಗುವುದರ ಜೊತೆಗ ಕಫ ಎದೆಯಲ್ಲಿ ಗಟ್ಟಿಯಾಗಿ ಹಾಗೆ ಉಳಿಯದೆ ಕರಗಿ ನಿರಾಗುತ್ತದೆ ಜೊತೆಗೆ ಬಾಯಿಯಿಂದ ಬರುವ ದುರ್ವಾಸನೆಯನ್ನು ಅದು ಹೋಗಲಾಡಿಸುತ್ತದೆ. ಈ ತುಳಸಿಯನ್ನು ತಿನ್ನುವುದರಿಂದ ಚರ್ಮದ ಕಾಂತಿಯು ಸಹ ಹೆಚ್ಚುತ್ತದೆ. ನೋಡಿದಿರೆಲ್ಲ ಪ್ರಿಯ ಓದುಗರೇ ತುಳಸಿ ಮತ್ತು ಹಾಲಿನಿಂದ ಏನೆಲ್ಲ ಪ್ರಯೋಜನವಿದೆ ನಮ್ಮ ಆರೋಗ್ಯಕ್ಕೆ ಅಂತ ಹಾಗಾಗಿ ನೀವು ಸಹ ಇನ್ನುಮುಂದೆ ತುಳಸಿ ಮತ್ತು ಹಾಲನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
Comments are closed.