ಕ್ಯಾಲ್ಸಿಯಂ ಬರಿತ ಮಸಾಲಾ ರಾಗಿ ರೊಟ್ಟಿ ಹೀಗೆ ಮಾಡಿ. ರಾಗಿ ರೊಟ್ಟಿಯನ್ನು ಹಾಗೆ ಮಾಡಿಕೊಂಡು ತಿನ್ನುತ್ತೇವೆ ಸ್ನೇಹಿತರೆ ಆದರೆ ಪ್ರತಿದಿನ ಹೀಗೆ ಬರಿ ರಾಗಿ ರೊಟ್ಟಿ ತಿಂದು ಅದು ಬೇಜಾರು ಎನಿಸಿದಾಗ ಈಗ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುವಂತಹ ರುಚಿಕರವಾದ ರಾಗಿರೊಟ್ಟಿಯನ್ನು ಒಮ್ಮೆ ಮಾಡಿ ತಿಂದು ನೋಡಿ ಆಗ ಯಾವತ್ತಿಗೂ ನಿಮಗೆ ರಾಗಿ ರೊಟ್ಟಿ ಬೇಜಾರು ಆಗುವುದಿಲ್ಲ ಬದಲಾಗಿ ನೀವೇ ತುಂಬಾ ಇಷ್ಟ ಪಟ್ಟು ರಾಗಿ ರೊಟ್ಟಿ ತಿನ್ನುತ್ತಿರ. ಬನ್ನಿ ಹಾಗಾದರೆ ಈ ರುಚಿಕರವಾದ ರಾಗಿ ರೊಟ್ಟಿ ಮಾಡಲು ಬೇಕಾದ ಸಾಮಗ್ರಿಗಳು ಯಾವುವು ಎನ್ನುವುದನ್ನು ನೋಡೋಣ. ಎರಡು ಗಜ್ಜರಿ ಮೂಲಂಗಿ ಒಂದು ಕರಿಬೇವು ಒಂದು ಹಿಡಿ ಕೊತ್ತಂಬರಿ ಸೊಪ್ಪು ಒಂದು ಹಿಡಿ ತೆಗೆದುಕೊಳ್ಳಬೇಕು ಈಗ ಗಜ್ಜರಿಯನ್ನು ಚೆನ್ನಾಗಿ ತೊಳೆದು ಸಣ್ಣಗೆ ತುರಿದುಕೊಳ್ಳಬೇಕು ಹಾಗೇನೇ ಮೂಲಂಗಿಯನ್ನು ತೊಳೆದು ಸಿಪ್ಪೆ ತೆಗೆದು ಸಣ್ಣಗೆ ತುರಿದುಕೊಳ್ಳಬೇಕು ನಂತರ ಕರಿಬೇವು ಕೊತ್ತಂಬರಿ ಸೊಪ್ಪನ್ನು ಸಹ ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು ಹಾಗೇನೇ ಇದಕ್ಕೆ ಸಣ್ಣ ಗಾತ್ರದ ಎರಡು
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು ಹಾಗೇನೇ ಹಸಿಮೆಣಸಿನಕಾಯಿ 5 ತೆಗೆದುಕೊಂಡು ನಿಮ್ಮ ಖಾರಕ್ಕೆ ತಕ್ಕಂತೆ ತೆಗೆದುಕೊಳ್ಳಿ ಸಣ್ಣಗೆ ಪುಡಿಮಾಡಿಕೊಳ್ಳಿ ಅಥವಾ ಸಣ್ಣಗೆ ಹೆಚ್ಚಿಕೊಳ್ಳಿ ಜೊತೆಗೆ ಎರಡು ಚಮಚ ಜೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸಿ ಮಾಡಿ ಜೊತೆಗೆ ಮೆಣಸಿನಕಾಯಿ ಸೇರಿಸಿಕೊಂಡು ಮಿಕ್ಸಿ ಮಾಡಿ ಇದಕ್ಕೆ ಹಾಕಿಕೊಳ್ಳಿ ಇನ್ನು ಎರಡು ದೊಡ್ಡ ಚಮಚ ಕಡ್ಲೆಬೇಳೆ ತೆಗೆದುಕೊಂಡು ಅರ್ಧ ಗಂಟೆ ನೆನೆಸಿ ಈ ಮಸಾಲೆಗೆ ಹಾಕಿಕೊಳ್ಳಿ ಗಜ್ಜರಿ ಮೂಲಂಗಿ ಈರುಳ್ಳಿ ಕರಿಬೇವು ಕೊತ್ತಂಬರಿ ಸೊಪ್ಪು ಕಡಲೆಬೇಳೆ ಜೀರಿಗೆ ಹಸಿಮೆಣಸಿನಕಾಯಿ ಸ್ವಲ್ಪ ಉಪ್ಪು. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇದಕ್ಕೆ ಒಂದು ಬಟ್ಟಲು ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ನೀರನ್ನು ಹಾಕದೆ ಮಿಶ್ರಣ ಮಾಡಿ ನಂತರ ಬಿಸಿನೀರನ್ನು ಹಾಕಿ ಚೆನ್ನಾಗಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರೊಟ್ಟಿ ತಟ್ಟುವ ಹದಕ್ಕೆ ಕಲಸಿಕೊಂಡು ಮುದ್ದೆ ಮಾಡಿಕೊಳ್ಳಿ ಒಂದೇ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ ನಂತರ ನಿಮಗೆ ಯಾವ ಅಳತೆ ಬೇಕೋ ಅಷ್ಟು ಅಳತೆಯಲ್ಲಿ ರೊಟ್ಟಿ ತಟ್ಟಿಕೊಳ್ಳಿ
ನಂತರ ರೊಟ್ಟಿ ಹಂಚನ್ನು ಚೆನ್ನಾಗಿ ತೊಳೆದು ಬಿಸಿ ಮಾಡಿಕೊಳ್ಳಿ ನಂತರ ಕಾದ ಹಂಚಿಗೆ ಮಾಡಿದ ರೊಟ್ಟಿಯನ್ನು ಹಾಕಿ ಎಣ್ಣೆ ಹಚ್ಚುವ ಅಗತ್ಯ ಇಲ್ಲ ಬೇಕಿದ್ರೆ ನೀರನ್ನು ಹಚ್ಚಿ ಎರಡು ಕಡೆ ಬೇಯಿಸಿಕೊಳ್ಳಿ ಇದು ತುಂಬಾನೇ ರುಚಿಕರವಾದ ಮತ್ತು ಆರೋಗ್ಯಕರವಾದ ರಾಗಿ ರೊಟ್ಟಿ ಇದನ್ನು ಹಾಗೇನೇ ತಿನ್ನಬಹುದು ಅಥವಾ ಪಲ್ಯ ಚಟ್ನಿ ಜೊತೆಗೂ ಸಹ ತಿನ್ನಬಹುದು ಮಕ್ಕಳು ರಾಗಿರೊಟ್ಟಿ ತಿನ್ನಲ್ಲ ರಾಗಿ ಮುದ್ದೆ ತಿನ್ನಲ್ಲ ಆದರೆ ಇತರ ಮಸಾಲ ರಾಗಿರೊಟ್ಟಿ ಮಾಡಿಕೊಡಿ ಖಂಡಿತ ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ ರಾಗಿಯಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ಇರುತ್ತದೆ ಸ್ನೇಹಿತರೆ ನಮ್ಮ ಮೂಳೆ ಗಟ್ಟಿಯಾಗಿರಲು ಕ್ಯಾಲ್ಸಿಯಂ ಬೇಕು ಮಕ್ಕಳಿಗೆ ಪ್ರತಿದಿನ ರಾಗಿಮುದ್ದೆ ತಿನಿಸುವುದನ್ನು ಅಭ್ಯಾಸ ಮಾಡಿಸಿ ವಾರಕ್ಕೆ ಮೂರರಿಂದ ನಾಲ್ಕು ಬಾರಿ ರಾಗಿರೊಟ್ಟಿ ಮಾಡಿಕೊಡಿ ನೀವು ಸಹ ರಾಗಿರೊಟ್ಟಿ ತಿನ್ನಿ ದೊಡ್ಡವರಿಗೂ ಸಹ ರಾಗಿರೊಟ್ಟಿ ತುಂಬಾನೇ ಒಳ್ಳೆಯದು ತುಂಬಾ ಆರೋಗ್ಯಕರವಾದ ಆಹಾರವಿದು ನೀವು ಸಹ ಮನೆಯಲ್ಲಿ ಮಾಡಿನೋಡಿ.
Comments are closed.