ಆರೋಗ್ಯ

ಸ್ಮಾರ್ಟ್ ಫೋನ್ ಗಣಕಯಂತ್ರದಿಂದ ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳವ ಸುಲಭ ವಿಧಾನ.

Pinterest LinkedIn Tumblr

ಇಂದು ನಾವು ನಮ್ಮ ಪ್ರಕೃತಿ ದೇವತೆಯನ್ನು ನಮ್ಮ ಸಂತೋಷಕ್ಕಾಗಿ ನೋಡಿ ಆನಂದ ಪಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಕಣ್ಣುಗಳು ಈ ಕಣ್ಣುಗಳು ನಮಗೆ ನಮ್ಮ ಜೀವನದಲ್ಲಿ ತುಂಬಾ ಮುಖ್ಯ ನಮ್ಮ ಕಣ್ಣುಗಳಿಗೆ ನಾವು ಬೆಲೆ ಕಟ್ಟಲಾರೆವು ಅವು ನಮ್ಮ ಜೀವಿತಾ ಅವಧಿಯವರೆಗೂ ಇರಬೇಕು ಒಂದು ವೇಳೆ ನಮಗೆ ಕಣ್ಣುಗಳು ಇಲ್ಲ ಎಂದರೆ ನಾವು ಜೀವಿಸುವುದು ತುಂಬಾ ಕಷ್ಟವಾಗುತ್ತದೆ ಆದ್ದರಿಂದ ನಮ್ಮ ಜೀವನದ ಬಹು ಮುಖ್ಯ ಅಂಗ ಎಂದರೆ ಅವು ನಮ್ಮ ಕಣ್ಣುಗಳು ಅವುಗಳನ್ನು ಸುರಕ್ಷಿತವಾಗಿ ಕಾಪಾಡಿ ಕೊಳ್ಳಬೇಕು. ಕಣ್ಣಿಗೆ ಅಪಾಯ ತರುವ ವಸ್ತುಗಳು ಯಾವುವು ಕಣ್ಣಿನ ದೃಷ್ಟಿ ಸಾಮರ್ಥ್ಯವು ಇಲ್ಲದಂತೆ ಮಾಡುವ ಅಂಶಗಳೇನು ಎಂಬುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ.

ಎಲೆಕ್ಟ್ರಾನಿಕ್ಸ್ ಸಾಧನಗಳಿಂದ ಕಣ್ಣಿಗೆ ಅಪಾಯವಿದೆ ಸ್ಮಾರ್ಟ್ ಫೋನ್ ದೂರದರ್ಶನ ಟ್ಯಾಬ್ಲೆಟ್ ಗಣಕಯಂತ್ರ ಇವುಗಳನ್ನು ಬಳಸಿಯು ಹಂತ ಹಂತವಾಗಿ ಕಣ್ಣಿಗೆ ಎದುರಾಗುವ ಅಪಾಯ ಅಥವಾ ತೊಂದರೆಗಳಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ಈಗ ತಿಳಿಯೋಣ. ಬ್ಲೇಟೋ ವಿಶ್ವವಿದ್ಯಾನಿಲಯದಲ್ಲಿ ಈ ಬಗ್ಗೆ ಸಂಶೋಧನೆ ನಡೆಸುತ್ತಿರುವವರು ಹೀಗೆ ಹೇಳಿದ್ದಾರೆ ಮುಕ್ತವಾಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುವವರ ಕಣ್ಣುಗಳು ಕಾಲಾಂತರದಲ್ಲಿ ಅಂದರೆ ಸುಮಾರು 50 ವರ್ಷ ವಯಸ್ಸು ದಾಟುವುದರಲ್ಲಿ ತಮ್ಮ ಕಣ್ಣಿನಿಂದ ನೋಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾರಂತೆ. ಆಪ್ಟಿಕಲ್ ಕೆಮಿಸ್ಟ್ರಿ ಅಧ್ಯಯನ ಕಾರರು ನೀಡಿರುವ ಎಚ್ಚರಿಕೆ ಏನೆಂದರೆ ಸ್ಮಾರ್ಟ್ ಫೋನ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಚಿಮ್ಮುವ ಅಪಾಯಕಾರಿ ನೀಲಿ ಬೆಳಕು ಕಣ್ಣಿನ ರೆಟಿನಾದಿಂದ ಕೆಲವು ಮಾಲಿಕ್ಯೂಲ್ ಗಳನ್ನು ವರ್ಗಾವಣೆ ಮಾಡುತ್ತದೆ.

ಇದರ ಪರಿಣಾಮವಾಗಿ ಅಲ್ಲಿ ಜೀವಕೋಶಗಳು ಸಾಯುತ್ತವೆ ಆಮೇಲೆ ಕುರುಡುತನ ಮತ್ತು ಕಣ್ಣಿನ ಇತರೆ ಸಮಸ್ಯೆಗಳು ಉದ್ಭವಿಸುತ್ತವೆ. ಇಂತಹ ಅಪಾಯಗಳಿಂದ ತಪ್ಪಿಸಿಕೊಂಡು ನೇತ್ರದೃಷ್ಟಿ ಸಾಮರ್ಥ್ಯವನ್ನು ಸಹಜವಾಗಿ ಇಟ್ಟುಕೊಳ್ಳಲು ಕೆಲವು ದಾರಿಗಳಿವೆ ಅದೇನು ಎಂದರೆ ನಿಮ್ಮ ಸ್ಮಾರ್ಟ್ ಪೋನನಲ್ಲಿ ಬ್ಲ್ಯೂ ಲೈಟ್ ಫಿಲ್ಟರ್ ಎಂಬ ಆಯ್ಕೆಯನ್ನು ತೆರೆಯಿರಿ ಈ ಆಯ್ಕೆಯೂ ನಿಮ್ಮ ಫೋನ್ ಸೆಟ್ಟಿಂಗ್ಸ್ ನ ಡಿಸ್ಪ್ಲೇ ಯಲ್ಲಿ ಇರುತ್ತದೆ ಹಾಗೂ ಒಳ್ಳೆ ಸ್ಕ್ರೀನ್ ಪ್ರೋಟಕ್ಟರ್ ನ್ನು ಬಳಸಿ ಒಂದು ಪಕ್ಷ ನಿಮ್ಮ ಫೋನಿನಲ್ಲಿ ಈ ಸೆಟ್ಟಿಂಗ್ಸ್ ಇಲ್ಲದೆಯು ಇರಬಹುದು ಆಗ ಬೇರೆ ಒಂದು ವಿಧಾನವನ್ನು ಅನುಸರಿಸಿ ಅದು ಏನೆಂದರೆ ಹಗಲು ರಾತ್ರಿಗಳಲ್ಲಿ ಡಿಸ್ಪ್ಲೇ ಬೆಳಕಿನ ಮಟ್ಟವನ್ನು ನಿಯಂತ್ರಣದಲ್ಲಿ ಇಡಿ ಇದಕ್ಕೆ ಹೊಂದಿಕೆಯಾಗುವಂತಹ ಟ್ರಿಲೈಟ್ ನಂತಹ ಅಪ್ ಗಳು ಗೂಗಲ್ ಪ್ಲೇಸ್ಟೋರನಲ್ಲಿ ಹಲವಾರು ಲಭ್ಯವಿವೆ ನಿಮಗೆ ಬೇಕಾದುದನ್ನು ದೌಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣುಗಳನ್ನು ನೀವು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಜೊತೆಗೆ ಕಣ್ಣಿಗೆ ಬೇರೆ ಯಾವುದೇ ವಿಧವಾದ ತೊಂದರೆ ಆಗದಂತೆ ಕಾಪಾಡಿಕೊಳ್ಳಬಹುದು

Comments are closed.