ನಮ್ಮ ದೇಹಕ್ಕೆ ಅಗತ್ಯವಾದ ಆಹಾರ ಪಧಾರ್ಥಗಳಲ್ಲಿ ಹಾಲು ಮತ್ತು ಖರ್ಜುರ ಪ್ರಮುಖವಾಗಿದೆ ಖರ್ಜುರದಲ್ಲಿ ಕಬ್ಬಿಣಾಂಶವಿರುತ್ತದೆ ಹಾಲಿನಲ್ಲಿ ಬೇರೆಲ್ಲ ಪೋಷಕಾಂಶಗಳು ಇದ್ದರು ಸಹ ಕಬ್ಬಿಣದ ಕೊರತೆ ಇರುವ ಕಾರಣ ಖರ್ಜುರದ ಜೊತೆ ಬೆರಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಪರಿಪೂರ್ಣ ಆಹಾರವಾಗುತ್ತದೆ ಈ ಆಹಾರದ ಸೇವನೆಯಿಂದ ನಮ್ಮ ದೇಹಕ್ಕೆ ಹಲವಾರು ರೋಗಗಳು ಬರದಂತೆ ತಡೆಯುತ್ತದೆ ಈ ಹಾಲು ಮತ್ತು ಖರ್ಜುರವನ್ನು ಒಟ್ಟಿಗೆ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಖರ್ಜುರದಲ್ಲಿ ಮೊನೊಕ್ಲಾನಲ್ ಎಂಬ ವಿಧಧ ಸಕ್ಕರೆ ಇರುತ್ತದೆ ಈ ಸಕ್ಕರೆಗೆ ನಮ್ಮ ರಕ್ತದಲ್ಲಿ ಬೆರೆಯಲು ಜೀರ್ಣಗೊಳ್ಳುವ ಅಗತ್ಯವಿಲ್ಲದ ಕಾರಣ ಇದನ್ನು ಸೇವಿಸಿದ ತಕ್ಷಣ ರಕ್ತಕ್ಕೆ ಲಭಿಸುತ್ತದೆ ಮತ್ತು ಅತಿ ಬೇಗ ಮೆದುಳು ಮತ್ತು ದೇಹದ ವಿವಿಧ ಸ್ನಾಯುಗಳಿಗೆ ಇದು ತಲುಪುತ್ತದೆ. ಅಲ್ಲದೆ ಖರ್ಜುರದಲ್ಲಿರುವ ಬೆಪ್ಟಿನ್ ರಕ್ತದಲ್ಲಿರುವ ಕೆಟ್ಟ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ದೇಹದಲ್ಲಿ ಶಕ್ತಿ ಮತ್ತು ಇತರ ಚಟುವಟಿಕೆಗಳು ಹೆಚ್ಚಾಗುತ್ತವೆ
ಉದಾಹರಣೆಗೆ ಹೇಳಬೇಕೆಂದರೆ ರಕ್ತನಾಳಗಳು ಯಕೃತ್ ನರವ್ಯವಸ್ಥೆ ಕರುಳುಗಳು ಇತ್ಯಾದಿಗಳ ಕ್ಷಮತೆ ಹೆಚ್ಚಾಗುತ್ತದೆ ಈ ಆಹಾರದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಗಂಧಕ ಪೊಟ್ಯಾಶಿಯಂ ಸತು ಮೆಗ್ನೇಶಿಯಂ ವಿಟಮಿನ್ ಎ ಡಿ ಮತ್ತು ವಿಟಮಿನ್ ಸಿ ನಮ್ಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸಲು ಇದು ನೆರವಾಗುತ್ತದೆ. ಖರ್ಜುರದಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುತ್ತದೆ. ಈ ಮೂಲಕ ಕರುಳುಗಳಲ್ಲಿ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸಲು ನೆರವಾಗುತ್ತದೆ ಜೀರ್ಣಕ್ರಿಯೆ ಮತ್ತು ವಿಸರ್ಜನಾಕ್ರಿಯೆ ಸುಲಭವಾಗಿ ನಡೆಯುತ್ತದೆ ಈ ಆಹಾರದ ಸೇವನೆಯಿಂದ ಮೂಳೆಗಳು ದೃಢವಾಗುತ್ತವೆ ಬಿರುಕು ಬಿಡುವುದರಿಂದ ರಕ್ಷಣೆ ನೀಡುತ್ತದೆ ದೇಹದ ಜೀವಕೋಶಗಳ ಆರೋಗ್ಯಕರ ಬೆಳವಣಿಗೆಗೆ ಇದು ನೆರವಾಗುತ್ತದೆ ಖರ್ಜುರ ಬೆರೆತ ಹಾಲಿನಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟಗಳು ಅಧಿಕ ಪ್ರಮಾಣದ ಮೆಗ್ನೇಸಿಯಂ ಗಂಧಕ ಕ್ಯಾಲ್ಸಿಯಂ ಇರುತ್ತದೆ ಇವು ದೇಹಕ್ಕೆ ಎದುರಾಗುವ ಹಲವು ಬಗೆಯ ಕ್ಯಾನ್ಸರ್ ಗಳಿಂದ ನಮಗೆ ರಕ್ಷಣೆ ನೀಡುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ವಿಶೇಷವಾಗಿ ಯಕೃತಗೆ ವಿಷಕಾರಿ ವಸ್ತುಗಳಿಂದ ರಕ್ಷಣೆ ನೀಡುತ್ತದೆ. ರಕ್ತ ಹೀನತೆಯನ್ನು ಕಡಿಮೆ ಮಾಡುತ್ತದೆ ನರವ್ಯವಸ್ಥೆಯ ತೊಂದರೆಗಳನ್ನು ಇದು ನಿವಾರಿಸುತ್ತದೆ.
ಹಾಲುಣಿಸುವ ತಾಯಂದಿರಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುತ್ತದೆ ಖರ್ಜುರದಲ್ಲಿರುವ ತಿಯೋಲೈನ್ ಮತ್ತು ಗ್ಲೆಸಿರಿನ್ ಈ ಕಾರ್ಯದಲ್ಲಿ ನೆರವಾಗುತ್ತದೆ ಹಾಗೇನೇ ನರಗಳ ಒಳಭಾಗದಲ್ಲಿ ಜಿಡ್ಡು ಕಟ್ಟಿಕೊಳ್ಳುವ ಸಾದ್ಯತೆಯನ್ನು ಕಡಿಮೆಮಾಡುತ್ತದೆ ಈ ಮೂಲಕ ಹಲವಾರು ಹೃದಯ ಸಂಬಂಧಿ ತೊಂದರೆಗಳಿಂದ ನಮ್ಮನ್ನು ಕಾಪಾಡುತ್ತದೆ ಖರ್ಜುರದಲ್ಲಿರುವ ಹಲವಾರು ಪೋಷಕಾಂಶಗಳು ರಕ್ತದಲ್ಲಿನ ವಿವಿಧ ಕೊಬ್ಬನ್ನು ಹೆಚ್ಚಿಸುವ ಮತ್ತು ತಗ್ಗಿಸುವ ಗುಣಗಳನ್ನು ಹೊಂದಿರುತ್ತದೆ ಒಟ್ಟಾರೆ ಕೆಲವೊಂದು ಬೇಡವಾದ ಕೊಬ್ಬನ್ನು ನಿಯಂತ್ರಣದಲ್ಲಿ ಇಡುತ್ತದೆ ಹಾಗೇನೇ ಜೀರ್ಣಗೊಂಡ ಆಹಾರ ಸುಲಭವಾಗಿ ಕರಳುಗಳ ಒಳಭಾಗದಲ್ಲಿ ಚಲಿಸುವ ಮತ್ತು ಅಗತ್ಯಕ್ಕೆ ತಕ್ಕಂತೆ ಕರಳುಗಳು ಹಿಗ್ಗಲು ಮಲಬದ್ಧತೆಯನ್ನು ನಿವಾರಿಸಲು ಇದೊಂದು ಅತ್ಯುತ್ತಮ ಆಹಾರವಾಗಿದೆ ಅಲ್ಲದೆ ಇದರಿಂದ ಮಧುಮೇಹದ ಸಮಸ್ಯೆ ಕಡಿಮೆಯಾಗುತ್ತದೆ. ಈ ಖರ್ಜುರದ ಸಿಪ್ಪೆಯಲ್ಲಿ ಹಲವಾರು ವೈರಸಗಳು ಬ್ಯಾಕ್ಟೀರಿಯಾ ಕ್ಯಾನ್ಸರ್ ಮತ್ತು ಶಿಲಿಂದ್ರಗಳಿಗೆ ಪ್ರತಿರೋಧವನ್ನು ಒಡ್ಡುವ ಗುಣವಿರುತ್ತದೆ. ಅಲ್ಲದೆ ಹಾಲಿನಲ್ಲಿರುವ ಪ್ರೊಟೀನ್ ಗಳಿಗೆ ಸ್ನಾಯುಗಳನ್ನು ಬಲಪಡಿಸುವ ಗುಣವಿರುತ್ತದೆ
ಹಾಲಿನಲ್ಲಿರುವ ವಿಟಮಿನ್ ಎ ಬಿ ಕಣ್ಣಿನಲ್ಲಿರುವ ಆದ್ರತೆ ಮತ್ತು ಕಣ್ಣಿನ ಪ್ರಮಾಣವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ ಈ ಮೂಲಕ ಕಣ್ಣುಗಳು ಒಣಗುವುದನ್ನು ತಪ್ಪಿಸಿ ಕಣ್ಣುಗಳ ಕಾಳಜಿಗೆ ಇದು ಉತ್ತಮವಾಗಿದೆ ಅಲ್ಲದೆ ಇದು ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ ಉರಿಯುತವನ್ನು ತಗ್ಗಿಸಿ ಮನಸ್ಸಿನಲ್ಲಿ ನಿರಾಳವನ್ನು ಉಂಟುಮಾಡುತ್ತದೆ ಇನ್ನು ಇದರಿಂದ ದೇಹಕ್ಕೆ ಅಗತ್ಯವಿರುವ ಎಲ್ಲ ಬಗೆಯ ಪೋಷಕಾಂಶಗಳನ್ನು ಒದಗಿಸಿ ಬೆಳವಣಿಗೆಯ ರಸದೂತಗಳನ್ನು ಪ್ರಚೋಧಿಸುತ್ತದೆ ಅಷ್ಟೇ ಅಲ್ಲದೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ಖರ್ಜುರದಲ್ಲಿರುವ ಸಕ್ಕರೆ ಅಂಶ ದೇಹಕ್ಕೆ ಹೀರಿಕೊಳ್ಳಲು ಸಾಧ್ಯವಾಗುತ್ತದೆ ಇದರ ಮೂಲಕ ಮೂಳೆ ಮತ್ತು ಹಲ್ಲುಗಳು ಬಲವಾಗುತ್ತದೆ ವೃದ್ಧರಲ್ಲಿ ನರವ್ಯವಸ್ಥೆ ಮತ್ತು ಶ್ರವಣ ಸಾಮರ್ಥ್ಯವನ್ನು ಇದು ಉತ್ತಮಗೊಳಿಸುತ್ತದೆ ನಾವು 7 ಖರ್ಜುರಗಳನ್ನು ತೆಗೆದುಕೊಂಡು ನೀರಿನಲ್ಲಿ ಚನ್ನಾಗಿ ತೊಳೆದು ಬಳಿಕ ಇದರಲ್ಲಿರುವ ಬೀಜವನ್ನು ತೆಗೆದು ಚಿಕ್ಕ ಚಿಕ್ಕ ತುಂಡುಮಾಡಿಕೊಂಡು ನಂತರ ಈ ತುಂಡುಗಳನ್ನು ಮುಕ್ಸಿ ಜಾರಿನಲ್ಲಿ ಹಾಕಿ ಅದಕ್ಕೆ ಒಂದು ಲೋಟ ಹಾಲನ್ನು ಹಾಕಿ ಮಿಕ್ಸಿ ಮಾಡಿ ನಂತರ ಈ ಹಾಲನ್ನು ಚನ್ನಾಗಿ ಮಿಶ್ರಣ ಮಾಡಿ ಕುಡಿಯಬೇಕು ಇದು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
Comments are closed.