ಅಕಸ್ಮಾತ್ ಹಾಲು ಹೊಡೆದು ಹೋದರೆ ಚೆಲ್ಲಬೇಡಿ ಒಮ್ಮೆ ಹೀಗೆ ಬಳಸಿ ನೋಡಿ ಇದರಿಂದ ಹಲವಾರು ಪ್ರಯೋಜನಗಳು ಇವೆ. ಹಾಲು ಹೊಡೆದು ಹೋಗುವುದು ಸಾಮಾನ್ಯ ಸಂಗತಿ ಚಳಿಗಾಲ ಮಳೆಗಾಲ ಬೆಸಿಗೇಕಾಲ ಹೀಗೆ ಕಾಲ ಯಾವುದಾದರೂ ಒಂದಿಲ್ಲ ಒಂದು ಕಾರಣಕ್ಕೆ ಹಾಲು ಹೊಡೆಯುತ್ತಲೇ ಇರುತ್ತವೆ ಜನ ಹಾಲು ಹೊಡೆದು ಹೋಯಿತು ಅಂತ ಚೆಲ್ಲುತ್ತಾರೆ ಹೊಡೆದ ಹಾಲನ್ನು ಬಿಸಾಡಬೇಕಿಲ್ಲ ಈ ಹಾಲನ್ನು ಉಪಯುಕ್ತ ಆಗಿಸಿಕೊಳ್ಳಬಹುದು. ಕುದಿಸಿದ ಹಾಲು ಆಗಿರಲಿ ತಣ್ಣಗಿನ ಹಾಲು ಆಗಿರಲಿ ಹೊಡೆದ ಹಾಲು ಆಗಿರಲಿ ಎಲ್ಲದರಲ್ಲೂ ಬಹಳಷ್ಟು ಪೋಷಕಾಂಶ ಇರುತ್ತದೆ. ಇದು ಕೆಲವರಿಗೆ ತಿಳಿದಿಲ್ಲ ಹಾಗಾಗಿ ಹೊಡೆದ ಹಾಲನ್ನು ಅನೇಕರು ಚೆಲ್ಲಿ ಬಿಡುತ್ತಾರೆ ಆದರೆ ಹೊಡೆದ ಹಾಲನ್ನು ಹೊರ ಹಾಕುವ ಬದಲು ಅದನ್ನು ಏನೆಲ್ಲಾ ಪ್ರಯೋಜನಗಳು ಇವೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹೌದು ಹೊಡೆದ ಹಾಲಿನ ನೀರಿನಲ್ಲಿ ಪ್ರೋಟಿನ್ ಗಳ ಪ್ರಮಾಣವು ತುಂಬಾ ಹೆಚ್ಚಾಗಿ ಇದೆ ಈ ನೀರು ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ
ಈ ನೀರಿನಿಂದ ಸ್ನಾಯುವಿನ ಶಕ್ತಿಯೂ ಹೆಚ್ಚಾಗುತ್ತದೆ ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. ಇದು ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತದೆ ಹೌದು ಹೊಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಹಲವು ಸಂಶೋಧನೆಯಿಂದ ತಿಳಿದು ಬಂದಿದೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇದ್ದರೆ ಹೃದಯಾಘಾತ ಮತ್ತು ಸ್ಟ್ರೋಕ್ ಅಂತಹ ಕಾಯಿಲೆಯಿಂದ ದೂರ ಇರಬಹುದು. ಹಿಟ್ಟು ಮೃದುವಾಗಲು ಸಹಾಯಕ ಆಗುತ್ತದೆ. ನೀವು ಚಪಾತಿ ರೊಟ್ಟಿ ಹಿಟ್ಟನ್ನು ಕಲಸುವಾಗ ಈ ರೊಟ್ಟಿ ಹಿಟ್ಟನ್ನು ಬಳಸುವುದರಿಂದ ಅದು ಮೃದುವಾಗುವುದು ಅಲ್ಲದೆ ರುಚಿ ಕೂಡ ಹೆಚ್ಚಾಗುತ್ತದೆ. ಇದರೊಂದಿಗೆ ನೀವು ಸಾಕಷ್ಟು ಪ್ರೋಟಿನ್ ಗಳನ್ನು ಪಡೆಯುವಿರಿ. ಮುಖದ ಸೌಂದರ್ಯಕ್ಕೆ ಉಪಯುಕ್ತ ಆಗಿದೆ. ಹೊಡೆದ ಹಾಲಿನ ನೀರಿಗೆ ಕಡಲೆ ಹಿಟ್ಟು ಅರಿಶಿಣ ಮತ್ತು ಗಂಧದ ಪುಡಿ ಸೇರಿಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಒಂದು ಪಾತ್ರೆಗೆ ಹೊಡೆದು ಹಾಲನ್ನು ಹಾಕಿ ಅವಶ್ಯಕತೆಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿರಿ ನೀರು ಆರುವವರೆಗೆ ಅದನ್ನು ಬಿಸಿ ಮಾಡಿ ಕೊನೆಯಲ್ಲಿ ಉಳಿಯುವ ಕಣಕ ದಿಂದ ರಸಗುಲ್ಲ ಅಥವಾ ಬರ್ಫಿ ತಯಾರಿಸಿ.
ಹೊಡೆದ ಹಾಲನ್ನು ಚೆನ್ನಾಗಿ ಕುದಿಸಿ ನಂತರ ಸ್ವಚ್ಚವಾಗಿ ಇರುವ ಬಟ್ಟೆಯಲ್ಲಿ ಹೊಡೆದ ಹಾಲನ್ನು ಹಾಕಿ ಬಿಗಿಯಾಗಿ ಕಟ್ಟಿಡಿ ಕೆಲವು ಗಂಟೆಗಳಲ್ಲಿ ಪನ್ನೀರು ಸಿದ್ಧವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಹೆಣ್ಣಿಗಿಂತ ಇದು ತಾಜಾ ಹಾಗೂ ಮೃದುವಾಗಿ ಇರುತ್ತದೆ. ಹೊಡೆದ ಹಾಲನ್ನು ಮೊಸರು ಮಾಡಿ ತಿನ್ನಬಹುದು ಹೊಡೆದ ಹಾಲಿಗೆ ಸ್ವಲ್ಪ ಮೊಸರು ಹಾಕಿ ಇಟ್ಟರೆ ಮೊಸರಿನ ರುಚಿ ಹೆಚ್ಚಾಗುತ್ತದೆ ಸೂಪ್ ಮಾಡುತ್ತಾ ಇದ್ದರೆ ನೀರಿನ ಬದಲು ಹೊಡೆದ ಹಾಲಿನ ನೀರನ್ನು ಬಳಸಬಹುದು ಇದು ಸೂಪ್ ರುಚಿಯನ್ನು ಹೆಚ್ಚಿಸುತ್ತದೆ. ಹೀಗೆ ಹೊಡೆದ ಹಾಲಿನಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.
Comments are closed.