ಆರೋಗ್ಯ

ಈ ಬಾಳೆಹಣ್ಣು ತಿಂದು ಒಂದು ಹೊತ್ತಿನ ಊಟ ಮಾಡದೆ ಇದ್ದರು ಮನುಷ್ಯ ಆರೋಗ್ಯ ಉತ್ತಮವಾಗಿರುವುದು ಹೇಗೆ ಗೋತ್ತೆ?

Pinterest LinkedIn Tumblr

ಚುಕ್ಕಿ ಬಾಳೆಹಣ್ಣು ತಿನ್ನುವುದರಿಂದ ಎಷ್ಟೆಲ್ಲ ಲಾಭಗಳಿವೆ ನೋಡಿ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ದೇಹಕ್ಕೆ ಶಕ್ತಿ ನೀಡಲು ಹಾಗೇನೇ ನಮ್ಮ ದೇಹಕ್ಕೆ ಹಲವಾರು ಪೌಷ್ಟಿಕಾಂಶಗಳು ದೊರಕಲು ನಾವು ಹಲವಾರು ವಿಧಧ ಹಣ್ಣುಗಳನ್ನು ಸೇವಿಸುತ್ತೇವೆ ಒಂದೊಂದು ಹಣ್ಣು ಕೂಡ ಒಂದೊಂದು ವಿಧದ ಪೌಷ್ಟಿಕತೆಯನ್ನು ಹೊಂದಿದೆ ಅದರಲ್ಲಿ ಬಾಳೆಹಣ್ಣು ಕೂಡ ಒಂದು ಈ ಬಾಳೆಹಣ್ಣು ಎಲ್ಲ ಸಮಯದಲ್ಲೂ ಕೂಡ ನಮಗೆ ಸುಲಭವಾಗಿ ಸಿಗುವಂತಹ ಒಂದು ಹಣ್ಣಾಗಿದೆ ಇದರ ಪ್ರಯೋಜನ ತುಂಬಾ ಇದೆ ಬಾಳೆಹಣ್ಣು ತಿಂದು ಒಂದು ಹೊತ್ತಿನ ಊಟವನ್ನು ಸಹ ಮಾಡದೆ ಮನುಷ್ಯ ಬದುಕಬಹುದು ಅಷ್ಟೊಂದು ನಮ್ಮ ದೇಹಕ್ಕೆ ಬೇಕಾದಂತಹ ನಮ್ಮ ದೇಹಕ್ಕೆ ಅತ್ಯಗತ್ಯವಾದಂತಹ ಶಕ್ತಿ ಈ ಬಾಳೆ ಹಣ್ಣಿನಲ್ಲಿ ಇದೆ ಆದ್ದರಿಂದ ಬಾಳೆ ಹಣ್ಣು ನಮ್ಮ ದೇಹಕ್ಕೆ ತುಂಬಾ ಪ್ರಯೋಜನ ಕಾರಿಯಾದ ಒಂದು ಅದ್ಬುತ ಹಣ್ಣಾಗಿದೆ. ಬಾಳೆಹಣ್ಣು ಕಂಡರೆ ಎಲ್ಲರಿಗೂ ಇಷ್ಟ ಇದು ಬಡವರ ಹಣ್ಣು ಎಂದೇ ಪ್ರಸಿದ್ಧವಾಗಿದೆ ಎಲ್ಲ ಕಡೆ ಮಾರುಕಟ್ಟೆಯಲ್ಲಿ ಸುಲಭವಾಗಿ ಕಡಿಮೆ ಬೆಲೆಗೆ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು ಈ ಹಣ್ಣಿನಲ್ಲಿ ನೂರಾರು ಪ್ರಭೇದಗಳು ಇಲ್ಲ ಆದರೆ ಬೆರಳುದ್ದದ ಪುಟ್ಟ ಬಾಳೆಯಿಂದ ಆರಂಭಿಸಿ ಮಾರುದ್ಧದ ಚುಕ್ಕೆಯ ಬಾಳೆಯ ವರೆಗೂ ವೈವಿಧ್ಯಗಳಿವೆ.

ಈ ಚುಕ್ಕೆ ಬಾಳೆಹಣ್ಣು ಸೇವಿಸುವುದರಿಂದ ಏನು ಪ್ರಯೋಜನ ಇದೆ ಎಂಬುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಮೊದಲನೆಯದು ವೇಗವಾಗಿ ಈ ಬಾಳೆಹಣ್ಣು ಜೀರ್ಣವಾಗುತ್ತದೆ ಮಲಬದ್ಧತೆ ಖಿನ್ನತೆ ಮತ್ತು ಎದೆ ಉರಿಯನ್ನು ಕಡಿಮೆ ಮಾಡುತ್ತದೆ. ಕಬ್ಬಿಣಾಂಶ ಹೆಚ್ಚಾಗಿ ಇರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಎರಡನೆಯದು ಬಾಳೆಹಣ್ಣಿನಲ್ಲಿ ಸೋಡಿಯಮ್ ಅಂಶ ಹೆಚ್ಚಾಗಿ ಇರುವುದರಿಂದ ದೇಹದಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡುವಂತಹ ಶಕ್ತಿ ಇದಕ್ಕೆ ಇದೆ. ಇನ್ನು ಮೂರನೆಯದು ಚುಕ್ಕೆ ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆಯನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು ಏಕೆಂದರೆ ಇದರಲ್ಲಿ ಇರುವಂತಹ ನಾರಿನಂಶ ಮಲಬದ್ಧತೆ ಆಗದಂತೆ ನೋಡಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ. ನಾಲ್ಕನೆಯದು ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನಿಮಗೆ ಉರಿತ ಕಂಡು ಬಂದರೆ ಕೇವಲ ಈ ಒಂದು ಚುಕ್ಕೆ ಬಾಳೆಹಣ್ಣನ್ನು ತಿನ್ನುವುದರಿಂದ ಅವುಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಇನ್ನು ಐದನೆಯದು ನಿಮ್ಮ ಹೊಟ್ಟೆಯು ಹುಣ್ಣುಗಳಿಂದ ಬಳಲುತ್ತಿದ್ದರೆ ಚುಕ್ಕೆ ಬಾಳೆ ಹಣ್ಣು ತಿನ್ನಬೇಕು ಇದರಿಂದ ನಾಶಕಾರಿ ಆಮ್ಲಗಳು ಮತ್ತು ಕಿರಿಕಿರಿ ತಪ್ಪುತ್ತದೆ. ಇನ್ನು ಕೊನೆಯದಾಗಿ ಈ ಚುಕ್ಕೆ ಬಾಳೆ ಹಣ್ಣಿನಲ್ಲಿ ಡಿ ಎನ್ ಎಫ್ ಅಂಶವಿದ್ದು ಇದು ಕ್ಯಾನ್ಸರ್ ವಿರುದ್ಧ ಹೋರಾಟ ಮಾಡುತ್ತದೆ. ಆದ್ದರಿಂದ ಪ್ರತಿದಿನ ರಾತ್ರಿ ಊಟದ ನಂತರ ಒಂದು ಚುಕ್ಕೆ ಬಾಳೆ ಹಣ್ಣು ಸೇವಿಸುವುದರಿಂದ ನಿಮಗೆ ಜೀರ್ಣಕ್ರಿಯೆಯ ಯಾವುದೇ ತೊಂದರೆ ಕಂಡು ಬರುವುದಿಲ್ಲ ಬದಲಾಗಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹೆಚ್ಚು ಶೀತ ಸ್ವಭಾವ ಹೊಂದಿರೋ ಜನ ಮದ್ಯಾನ್ಹ ಊಟದ ನಂತರ ಸಹ ಚುಕ್ಕೆ ಬಾಳೆ ಹಣ್ಣು ಸೇವನೆ ಮಾಡಿ ನಿಮ್ಮ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಡಬಹುದು.

Comments are closed.