ನಿಮ್ಮ ಮನೆಯಲ್ಲಿ ಯಾವಾಗಲೂ ಸಂಪಾದನೆ ಮಾಡಿದ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲ ಎಂದರೆ ಮಧ್ಯದಲ್ಲಿ ಯಾವಾಗಲೂ ಜಗಳ ನಡೆಯುತ್ತದೆ ಬರೀ ದುಡ್ಡು ಉಳಿಯುವುದಿಲ್ಲ ಬರೀ ಕಷ್ಟಗಳೇ ಎನ್ನುವವರು ಸಾಲದ ಸಮಸ್ಯೆಯಿಂದ ಮನೆಯಲ್ಲಿ ಕಷ್ಟಗಳು ಹೆಚ್ಚಾಗಿವೆ ಎನ್ನುವವರು ಮನೆಯಲ್ಲಿ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡುವುದು ಬಿಡಬೇಕು ಇಲ್ಲ ಅಂದರೆ ಮನೆಯಲ್ಲಿ ನಿತ್ಯ ದಾರಿದ್ರ್ಯ ಕಾಡುವುದು ಖಚಿತ.
ಎಲ್ಲಾ ರೀತಿಯ ಕಷ್ಟಗಳು ನಿಮ್ಮನ್ನು ಹುಡುಕಿ ಕೊಂಡು ಬರುವುದು ಗ್ಯಾರೆಂಟಿ ಏನಪ್ಪಾ ಅದು ತಪ್ಪುಗಳು ಎಂದರೆ ಅಡುಗೆ ಮನೆ ಎನ್ನುವುದು ಲಕ್ಷ್ಮಿ ದೇವಿಗೆ ಸಮ ಮನೆಯಲ್ಲಿ ಇರುವ ಪ್ರತಿಯೊಬ್ಬರ ಹೊಟ್ಟೆ ತುಂಬಿಸುವ ಒಂದು ಅಕ್ಷಯ ಪಾತ್ರೆ ಇದ್ದ ಹಾಗೆ ಅಂತಹ ಸಾಕ್ಷಾತ್ ಮಹಾ ಲಕ್ಷ್ಮಿ ದೇವಿ ಎಲ್ಲರೂ ಮಲಗಿದ ಮೇಲೆ ಮನೆಗೆ ಬರುತ್ತಾಳೆ ಬಂದು ಅಡುಗೆ ಮನೆ ನೋಡುತ್ತಾಳೆ ಎನ್ನುವುದು ನಮ್ಮ ನಂಬಿಕೆ. ಅಂತಹ ಅಡುಗೆ ಮನೆಯನ್ನು ನಾವು ಹೇಗೇಗೋ ಇಟ್ಟು ಕೊಂಡರೆ ಮನೆಗೆ ಶ್ರೇಯಸ್ಸು ಅಲ್ಲ ಬರೀ ಸಂಕಷ್ಟಗಳಿಗೆ ಕಾರಣ ಆಗುತ್ತದೆ
ಮನೆಗೆ ಗೃಹಿಣಿ ಲಕ್ಷ್ಮಿ ಯಂತೆ ಆಕೆ ಮನೆಯನ್ನು ನಿತ್ಯ ಶುದ್ದಿ ಮಾಡುವುದು ಸಹಜ ಆದರೆ ಇತ್ತೀಚಿಗೆ ಕೆಲವು ಮನೆಯಲ್ಲಿ ಗೃಹಿಣಿಯರು ಈ ತಪ್ಪುಗಳನ್ನು ಮಾಡುತ್ತಾ ಇರುತ್ತೀರಿ ಈ ತಪ್ಪುಗಳು ಯಾವುವು ಇವನ್ನು ಹೇಗೆ ಸರಿ ಪಡಿಸಿ ಕೊಳ್ಳಬೇಕು ಏನು ಮಾಡಿದರೆ ಹಣ ಕಾಸು ವೃದ್ಧಿ ಆಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ.
ಊಟ ಮಾಡಿದ ನಂತರ ಉಳಿಯುವ ಪಾತ್ರೆಗಳನ್ನು ತೊಳೆಯದೇ ಹಾಗೆ ಮಲಗುವಿರಿ ಬೆಳಗ್ಗೆ ತೊಳೆದರೆ ಆಯಿತು ಎನ್ನುವವರು ಮೊದಲು ಈ ಅಭ್ಯಾಸವನ್ನು ಬಿಡಬೇಕು ತಪ್ಪದೆ ಊಟವಾದ ನಂತರ ಸ್ವಲ್ಪ ಸಮಯ ತೆಗೆದುಕೊಳ್ಳಿ ಸ್ವಲ್ಪ ಸಮಯ ತೆಗೆದುಕೊಂಡು ಊಟ ಆದಮೇಲೆ ಪಾತ್ರೆಗಳನ್ನು ರಾತ್ರಿಯೇ ತೊಳೆದು ಇಡಬೇಕು ಇನ್ನೂ ಮಾಡಿದ ಅಡುಗೆಯನ್ನು ಸಂಪೂರ್ಣ ಕಾಲಿ ಮಾಡಬೇಡಿ ಸಂಪೂರ್ಣವಾಗಿ ಕಾಲಿ ಮಾಡದೆ ಒಂದು ತುತ್ತು ರಾತ್ರಿ ಸಮಯ ಹಾಗೆ ಪಾತ್ರೆಯಲ್ಲಿ ಇಡಬೇಕು. ಇಲ್ಲ ಅಂದರೆ ಒಂದು ತಟ್ಟೆಯಲ್ಲಿ ಎತ್ತಿಟ್ಟಬಿಡಿ ಏಕೆಂದರೆ ಮನೆಯಲ್ಲಿ ರಾತ್ರಿ ದೇವತೆಗಳ ಸಂಚಾರ ಇರುತ್ತದೆ ಮನೆಯಲ್ಲಿ ಅವರು ಬಂದಾಗ ಯಾವುದೇ ರೀತಿಯ ಅಡುಗೆ ಪದಾರ್ಥಗಳು ಅಡುಗೆ ಮಾಡಿಲ್ಲ ಎಂದರೆ ದೇವತೆಗಳಿಗೆ ಬೇಜಾರು ಆಗುತ್ತದೆ ಇದರಿಂದ ಮನೆಯಲ್ಲಿ ಸಂಪತ್ತಿಗೆ ವೃದ್ಧಿ ಆಗಲು ಸ್ವಲ್ಪ ಅಡೆ ತಡೆ ಉಂಟಾಗುತ್ತದೆ
ಹೀಗೆ ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಎಂಜಲು ಪಾತ್ರೆ ಇಡದೆ ಅಡುಗೆ ಮನೆಯಲ್ಲಿ ರಾತ್ರಿ ಸ್ವಚ್ಛ ಮಾಡದೆ ಹಾಗೆ ಮಲಗಬೇಡಿ ದಯವಿಟ್ಟು ಪಾತ್ರೆಗಳನ್ನು ಆದಷ್ಟು ರಾತ್ರಿ ಹೊತ್ತು ತೊಳೆದು ಬೆಳಗ್ಗೆ ನೀವು ಶುದ್ಧವಾಗಿ ಸ್ನಾನ ಮಾಡಿ ಅಡುಗೆ ಮಾಡಿ ನೋಡಿ ಅಡುಗೆ ಮನೆಯಲ್ಲಿ ಅಧ್ಬುತ ನಡೆಯುವುದು ಖಚಿತ ಮನೆಯಲ್ಲಿ ಹೇಗೆ ಚಮತ್ಕಾರ ನಡೆಯುತ್ತದೆ ಎನ್ನುವುದನ್ನು ನೀವೇ ನೋಡುವಿರಿ ತಪ್ಪದೆ ಈ ಕೆಲಸ ಮಾಡಿರಿ.
Comments are closed.