ಆರೋಗ್ಯ

ಐಸ್ ಕ್ರೀಮ್ ಸೇವನೆಯಿಂದ ಮೂಳೆಗಳು ಬಲವಾಗುವುದು ಗೋತ್ತೆ?.

Pinterest LinkedIn Tumblr

ಐಸ್‍ಕ್ರೀಮ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕೂಡ ಐಸ್ ಕ್ರೀಮ್ ಇಷ್ಟ ಪಡುವವರೇ ಹೆಚ್ಚು. ಐಸ್ ಕ್ರೀಮ್ ತಿನ್ನುವುದರಿಂದ ಆರೋಗ್ಯ ಕೆಡುತ್ತೆ ಅಂತ ಸಾಕಷ್ಟು ಜನ ಹೇಳುವವರು ಇದ್ದಾರೆ ಆದರೆ ಐಸ್ ಕ್ರೀಮ್ ತಿನ್ನುವುದರಿಂದ ಸಾಕಷ್ಟು ಲಾಭ ಕೂಡ ಇದೆ ಹಾಗಂತ ಸಿಕ್ಕ ಸಿಕ್ಕ ಕಡೆ ತಿನ್ನೋದು ಅಲ್ಲ ಮತ್ತೆ ಆರೋಗ್ಯ ಸಿಗುತ್ತೆ ಅಂತ ಹೆಚ್ಚು ಸಹ ತಿನ್ನೋದು ಅಲ್ಲ.

ಹಾಗಾದರೆ ನಮ್ಮ ಆರೋಗ್ಯಕ್ಕೆ ಏನೆಲ್ಲ ಲಾಭ ನಷ್ಟ ಇದೆ ಅನ್ನೋದನ್ನ ತಿಳಿದುಕೊಳ್ಳೋಣ ವಾಸ್ತವವಾಗಿ ಐಸ್ ಕ್ರೀಮ್ ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿ ಆಗಿದೆ. ಕ್ರೀಮ್ ಒಂದು ಡೈರಿ ಉತ್ಪನ್ನವಾದ್ದರಿಂದ ಇದರಲ್ಲಿ ಅನೇಕ ಪೋಷಕಾಂಶ ಗಳು ಇರುತ್ತವೆ. ಕ್ರೀಮ್ ನಲ್ಲಿಯೂ ಸಹ ಸಾಕಷ್ಟು ವಿಟಮಿನ್‍ಗಳಿದ್ದು ದೇಹವು ಆರೋಗ್ಯಕರ ವಾಗಿರುತ್ತದೆ ಇದರಲ್ಲಿರುವ ಸಾಕಷ್ಟು ವಿಟಮಿನ್‍ಗಳಿಂದ ಮೂಳೆಗಳು ಬಲಗೊಳ್ಳುತ್ತವೆ. ಈ ಉತ್ಪನ್ನಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಕಂಡು ಬರುತ್ತದೆ ಐಸ್ ಕ್ರೀಮ್ ಸೇವನೆಯಿಂದ ಮೂಳೆಗಳು ಬಲವಾಗಿರುತ್ತದೆ

ಬಳಲಿಕೆಯಿಂದ ರಕ್ಷಿಸಲು ಸಾಧ್ಯವಾಗುತ್ತದೆ. ಶೇ99% ನಷ್ಟು ಕ್ಯಾಲ್ಸಿಯಂ ಮೂಳೆಗಳಲ್ಲಿ ಕಂಡುಬರುತ್ತೆ ಹಾಗಾಗಿ ಹಾಲಿನ ಉತ್ಪನ್ನಗಳ ಸೇವನೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಸಮರ್ಥವಾಗಿರುತ್ತದೆ ಹಾಲಿನಲ್ಲಿ ತಯಾರಿಸಿ ಸೇವಿಸುವುದರಿಂದ ಆಸ್ಟಿಯೋ ಪೊರೊಸಿಸ್ ಅಂದರೆ ತೆಳುವಾದ ಮತ್ತು ದುರ್ಬಲಗೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ ಚರ್ಮಕ್ಕೆ ಪ್ರಯೋಜನಕಾರಿ.

ಹಾಲಿನಿಂದ ತಯಾರಿಸಿದ ಉತ್ಪನ್ನಗಳು ರಕ್ತ ಮತ್ತು ಚರ್ಮದಂತಹ ದೇಹದ ವಿವಿಧ ಭಾಗಗಳಿಗೆ ಪ್ರಯೋಜನ ಕಾರಿಯಾಗಿದೆ ಅಂಗಾಂಶ ಮತ್ತು ಸ್ನಾಯುಗಳು ಬಲವಾಗುತ್ತದೆ. ಕೂದಲಿನ ಅಂದಕ್ಕೆ ಅಲ್ಲದೇ ದೇಹದ ಕೆಲವು ಭಾಗಗಳಿಗೂ ಸಹ ಪ್ರೋಟಿನ್ ಅಗತ್ಯ ಇದೆ ಐಸ್ ಕ್ರೀಮ್ ತಿನ್ನುವ ಮೂಲಕ ದೇಹವು ಪ್ರೋಟೀನ್ ಪಡೆದುಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಐಸ್ ಕ್ರೀಮ್ ನಲ್ಲಿ ವಿಟಮಿನ್ ಬಿ ಕಂಡುಬಂದಿದೆ. ಚರ್ಮ ಮೂಳೆಗಳು ಮತ್ತು ರೋಗನಿರೋಧಕಗಳ ದಕ್ಷತೆಯನ್ನು ಹೆಚ್ಚಿಸುತ್ತದೆ ಇದು. ಉತ್ತಮ ದೃಷ್ಟಿ ಯನ್ನು ಸಹ ನೀಡುತ್ತದೆ. ದೇಹದ ಸಮತೋಲನ ಚಯಾಪಚಯಕ್ಕೂ ಸಹಾಯಕವಾಗಿದೆ. ನಿಮಗೆ ಹಾಲು ಕುಡಿಯಲು ತೊಂದರೆ ಇದ್ದಲ್ಲಿ ನೀವು ಐಸ್‍ಕ್ರೀಮ್ ತಿನ್ನಬಹುದು. ಇದರಿಂದ ನೀವು ವಿಟಮಿನ್ ಕೊರತೆಯನ್ನು ಸರಿದೂಗಿಸಬಹುದು.

ಇದು ಐಸ್ ಕ್ರೀಮ್ ನ ಉಪಯೋಗವಾಗಿದೆ. ಇನ್ನು ಇದರಿಂದ ಉಂಟಾಗುವ ತೊಂದರೆಗಳನ್ನೂ ನೋಡೋಣ ಬನ್ನಿ ಕ್ರೀಮ್ ಸೇವನೆ ನಿಮ್ಮ ದೇಹಕ್ಕೆ ಪ್ರಯೋಜನ ಮಾತ್ರ ನೀಡುವುದಿಲ್ಲ ಇದು ನಿಮ್ಮ ದೇಹಕ್ಕೆ ಹಲವಾರು ರೀತಿಯ ತೊಂದರೆ ಉಂಟು ಮಾಡುತ್ತದೆ ಐಸ್‍ಕ್ರೀಮ್‍ನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ.

ಇದನ್ನು ನೀವು ಹೆಚ್ಚು ಸೇವಿಸಿದರೆ ಸ್ಥೂಲಕಾಯ ಅಪಾಯ ಕೂಡ ಉಂಟಾಗುತ್ತದೆ. ಇದಲ್ಲದೆ ಬೆಣ್ಣೆ ಮತ್ತು ಚಾಕೊಲೇಟ್ ನಿಂದ ಮಾಡಿದ ಐಸ್ ಕ್ರೀಮ್‍ನಲ್ಲಿ ಕ್ಯಾಲೋರಿ ಹೆಚ್ಚಾಗಿರುತ್ತದೆ. ಇದು ದೇಹಕ್ಕೆ ಹಾನಿಯಾಗುತ್ತದೆ ಹೆಚ್ಚು ಐಸ್ ಕ್ರೀಮ್ ಸೇವನೆ ತಲೆನೋವು ಹಾಗೂ ಪೂಡ್ ಪಾಯಿಸನ್ ನಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಅದನ್ನ ತಿನ್ನುವ ಮೊದಲು ಐಸ್ ಕ್ರೀಮ್ ನ ಗುಣಮಟ್ಟವನ್ನು ಪರೀಕ್ಷಿಸಿ ತಿನ್ನಿ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಯಾವುದನ್ನೇ ಆದರೂ ಹಿತವಾಗಿ ಮಿತವಾಗಿ ಬಳಸಿದರೆ ಮಾತ್ರ ಅದರ ಪ್ರಯೋಜನವನ್ನು ಪಡೆದು ಕೊಳ್ಳಬಹುದು.

Comments are closed.