ತುಂಬಾ ಜನರ ದೊಡ್ಡ ಸಮಸ್ಯೆ ಏನಾದರೆ ಅದೂ ಗೊರಕೆ ಎಂದು ಹೇಳಿದರೆ ತಪ್ಪಾಗಲ್ಲ, ಈಗಿನ ಕಾಲದಲ್ಲಿ ಗೊರಕೆ ಹೊಡೆಯದ ವ್ಯಕ್ತಿ ಯನ್ನ ಹುಡುಕುವುದು ಬಹಳ ಕಷ್ಟ, ಇಂದಿನ ಕಾಲದ ಜನರು ಅನುಸರಿಸುತ್ತಿರುವ ಕೆಲವು ಆಹಾರ ಪದ್ಧತಿಗಳೇ ಈ ಗೊರಕೆ ಸಮಸ್ಯೆಗೆ ಕಾರಣವಾಗಿದೆ. ಇನ್ನು ಈ ಸಮಸ್ಯೆಯನ್ನ ಹೇಳಿಕೊಳ್ಳಲು ಕೆಲವರಿಗೆ ತುಂಬಾ ನಾಚಿಕೆ ಆಗುತ್ತದೆ ಮತ್ತು ಗೊರಕೆಯನ್ನ ಕಡಿಮೆ ಮಾಡಲು ಜನರು ನಾನಾ ರೀತಿಯ ಪ್ರಯೋಗವನ್ನ ಮಾಡುತ್ತಿದ್ದಾರೆ ಈಗಿನ ಕಾಲದಲ್ಲಿ. ಇನ್ನು ಗೊರಕೆ ಹೊಡೆಯುವುದರ ಪರಿಣಾಮ ಪಕ್ಕದಲ್ಲಿ ಮಲಗಿದವರಿಗೆ ನಿದ್ರೆ ಇಲ್ಲದಂತಾಗುತ್ತದೆ, ನಿಮ್ಮ ಗೊರಕೆಯಿಂದ ನನಗೆ ನಿದ್ರೆ ಬರುತ್ತಿಲ್ಲ ಎಂದು ಅದೆಷ್ಟೋ ಗಂಡ ಹೆಂಡತಿಯರು ದಿನಾಲೂ ಜಗಳವಾಡುತ್ತಾರೆ ಮತ್ತು ಕೆಲವರು ಕೋರ್ಟ್ ಮೆಟ್ಟಿಲನ್ನ ಏರಿದ್ದಾರೆ ತಮ್ಮ ಗಂಡನ ಈ ಸಮಸ್ಯೆಯಿಂದ.
ಇನ್ನು ಗೊರಕೆ ಸಮಸ್ಯೆಯನ್ನ ಬಹಳ ಸುಲಭವಾಗಿ ಪರಿಹರಿಸಿಕೊಳ್ಳಬಹುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಗೊರಕೆ ಸಮಸ್ಯೆ ನಿಮಗೂ ಇದ್ದರೆ ಇಂದಿನಿಂದಲೇ ಇದನ್ನ ಅನುಸರಿಸುವುದು ಉತ್ತಮ. ಮಾನಸಿಕ ಒತ್ತಡ, ವಿಶ್ರಾಂತಿ ಇಲ್ಲದೆ ಇರುವುದು, ತಡವಾಗಿ ಆಹಾರವನ್ನ ಸೇವನೆ ಮಾಡುವುದು, ಆಹಾರ ಸೇವಿಸಿದ ತಕ್ಷಣ ನಿದ್ರೆಯನ್ನ ಮಾಡುವುದು, ತಡವಾಗಿ ಮಲಗುವುದು ಹೀಗೆ ಹಲವು ಕಾರಣಗಳಿಂದ ಮನುಷ್ಯನಲ್ಲಿ ಗೊರಕೆ ಬರುತ್ತದೆ ಎಂದು ಹೇಳುತ್ತಿದ್ದಾ ರೆ ವೈದ್ಯರು. ಗೊರಕೆಯನ್ನ ಹೇಗೆ ಸುಲಭವಾಗಿ ನಿಯಂತ್ರಣ ಮಾಡಬಹುದು ಅನ್ನುವುದನ್ನ ನೋಡೋಣ ಬನ್ನಿ.
ಮೊದಲನೆಯದಾಗಿ ಸ್ನೇಹಿತರೆ ಏಲಕ್ಕಿಯನ್ನ ಪುಡಿ ಮಾಡಿಕೊಂಡು ಮಲಗುವ ಮುನ್ನ ಕಡಿಮೆ ಬಿಸಿ ಇರುವ ಒಂದು ಲೋಟ ನೀರಿನಲ್ಲಿ ಒಂದು ಚಮಚ ಏಲಕ್ಕಿ ಪುಡಿಯನ್ನ ಬೆರೆಸಿ ದಿನಾಲೂ ಇದನ್ನ ಕುಡಿದು ಮಲಗಿದರೆ ಗೊರಕೆ ಸಮಸ್ಯೆ ದೂರವಾಗುತ್ತದೆ. ಎರಡನೆಯದಾಗಿ ಒಂದು ಚಮಚ ಜೇನು ತುಪ್ಪ ಮತ್ತು ಚಮಚ ಓಲಿವ್ ಎಣ್ಣೆಯನ್ನ ಮಿಶ್ರಣ ಮಾಡಿ ಕುಡಿದರೆ ಗೊರಕೆ ಇಲ್ಲದೆ ಹಾಯಾಗಿ ನಿದ್ರೆಯನ್ನ ಮಾಡಬಹುದಾಗಿದೆ. ಇನ್ನು ಮೂರನೆಯದಾಗಿ ಗೊರಕೆ ಸಮಸ್ಯೆ ಇರುವವರು ರಾತ್ರಿ ಸಮಯದಲ್ಲಿ ಮಲಗುವ ಮುಖವನ್ನ ಮೇಲಕ್ಕೆ ಮಾಡಿ ಮಲಗುವ ಬದಲು ಬಲಗಡೆ ಅಥವಾ ಎಡಗಡೆ ತಿರುಗಿ ಮಲಗಿದರೆ ಗೊರಕೆ ಬರುವುದು ಕಡಿಮೆ ಮತ್ತು ಸ್ವಲ್ಪ ಎತ್ತರದ ಬಿಂಬನ್ನ ಬಳಸುವುದರಿಂದ ಕೂಡ ಗೊರಕೆ ಸಮಸ್ಯೆಯನ್ನ ಪರಿಹರಿಸಿಕೊಳ್ಳಬಹುದಾಗಿದೆ. ಇನ್ನು ನಾಲ್ಕನೆಯದಾಗಿ ಮಲಗುವ ಮುನ್ನ ಸ್ವಲ್ಪ ಹಸಿ ಅವಲಕ್ಕಿಯನ್ನ ಬಾಯಲ್ಲಿ ಇಟ್ಟುಕೊಂಡು ಮಲಗಿದರೆ ಗೊರಕೆ ಬರುವುದಿಲ್ಲ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಇನ್ನು ಮಲಗುವ ಮುನ್ನ ಕಾಫಿ ಅಥವಾ ಟೀ ಕುಡಿದು ಮಲಗಿದರೆ ಗೊರಕೆ ಸಮಸ್ಯೆಯನ್ನ ತಡೆಗಟ್ಟಬಹುದು, ಆದರೆ ರಾತ್ರಿ ಮಲಗುವ ಸಮಯದಲ್ಲಿ ಕಾಫಿ ಅಥವಾ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಆದ್ದರಿಂದ ಈ ನಿಯಮವನ್ನ ಅನುಸರಿಸುವುದು ಬೇಡ ಅನ್ನುವುದು ನಮ್ಮ ಅಭಿಪ್ರಾಯ. ಸ್ನೇಹಿತರೆ ನಾವು ಹೇಳಿರುವ ಈ ನಾಲ್ಕು ವಿಧಾನಗಳಲ್ಲಿ ಸಾದ್ಯವಾದರೆ ಒಂದು ವಿಧಾನವನ್ನ ಪಾಲನೆ ಮಾಡಿ ನಿಮ್ಮ ಗೊರಕೆ ಸಮಸ್ಯೆಯನ್ನ ನಿವಾರಣೆ ಮಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನ ನಿಮ್ಮ ಗೊರಕೆ ಹೊಡೆಯುವ ಗೆಳೆಯ ಗೆಳೆತಿಯರಿಗೆ ಮತ್ತು ಸಂಬಂಧಿಕರಿಗೆ ತಲುಪಿಸಿ
Comments are closed.