ಆರೋಗ್ಯ

ನಾವು ಊಟ ಮಾಡುವಾಗ ಮಾಡುವ ಈ ತಪ್ಪಿನಿಂದ ಅನೇಕ ಸಮಸ್ಯೆಗಳು ಕಟ್ಟಿಟ ಬುತ್ತಿ.

Pinterest LinkedIn Tumblr

ಹಸಿದಾಗ ಎಲ್ಲರೂ ಊಟ ಮಾಡುವುದು ಮಾಮೂಲಿಯಾಗಿದೆ, ಇನ್ನು ನಾವು ದಿನದಲ್ಲಿ ಎರಡು ಭಾರಿ ಊಟವನ್ನ ಮಾಡುತ್ತೇವೆ, ಊಟವನ್ನ ಮಾಡಿದರೆ ನಮ್ಮ ದೇಹ ಆರೋಗ್ಯವಾಗಿ ಇರುವುದಲ್ಲದೆ ನಮ್ಮ ದೇಹಕ್ಕೆ ಒಳ್ಳೆಯ ಶಕ್ತಿ ಸಿಗುತ್ತದೆ. ಹಸಿವೆಯಾದಾಗ ನಾವು ತುಂಬಾ ಗಡಿಬಿಡಿಯಲ್ಲಿ ಊಟವನ್ನ ಮಾಡುತ್ತೇವೆ ಆದರೆ ಸ್ನೇಹಿತರೆ ಈಗ ನಾವು ಹೇಳುವ ಈ ಸುದ್ದಿಯನ್ನ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರೆಂಟಿ. ಏನಪ್ಪಾ ಊಟ ಮಾಡುವುದರಲ್ಲಿ ಏನು ಶಾಕಿಂಗ್ ಸುದ್ದಿ ಇದೆ ಎಂದು ನಿಮಗೆ ಆಶ್ಚರ್ಯ ಆಗುತ್ತಿರಬಹುದು, ಹೌದು ಸ್ನೇಹಿತರೆ ನಾವು ಊಟ ಮಾಡುವಾಗ ಮಾಡುವ ಈ ತಪ್ಪಿನಿಂದ ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಮತ್ತು ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ.

ಹಾಗಾದರೆ ಊಟ ಮಾಡುವಾಗ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ನಾವು ಊಟವನ್ನ ಮಾಡುವಾಗ ನೀರನ್ನ ಪಕ್ಕದಲ್ಲೇ ಇಟ್ಟುಕೊಂಡು ಊಟವನ್ನ ಮಾಡುತ್ತೇವೆ ಮತ್ತು ಊಟವನ್ನ ಸೇವನೆ ಮಾಡುತ್ತಿರುವಾಗಲೇ ನೀರನ್ನ ಕೂಡ ಕುಡಿಯುತ್ತೇವೆ, ಸ್ನೇಹಿತರೆ ಊಟದ ಸಮಯದಲ್ಲಿ ನೀರನ್ನ ಕುಡಿಯುವುದು ಬಹಳ ತಪ್ಪಾಗಿದೆ. ನಿಮಗೆ ಊಟದ ಸಮಯದಲ್ಲಿ ನೀರನ್ನ ಕುಡಿಬೇಡಿ ಅಂತ ಯಾರಾದರೂ ಹೇಳುತ್ತಾರಾ ಮತ್ತು ಊಟದ ಮದ್ಯದಲ್ಲಿ ನೀರನ್ನ ಕುಡಿಯುವುದರಿಂದ ದೇಹಕ್ಕೆ ತೊಂದರೆ ಆಗುತ್ತದೆ ಅನ್ನುವುದು ಇನ್ನು ಹಲವು ಜನರಿಗೆ ತಿಳಿದಿಲ್ಲ.

ಹೌದು ಸ್ನೇಹಿತರೆ ಊಟದ ಮದ್ಯ ನಾವು ನೀರನ್ನ ಸೇವನೆ ಮಾಡಿದರೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯು ಅತೀ ವೇಗವಾಗುತ್ತದೆ ಮತ್ತು ದೇಹದಲ್ಲಿ ಇನ್ಸುಲಿನ್ ಮಟ್ಟ ಏರುತ್ತದೆ ಎಂದು ಹಲವು ಸಂಶೋದನೆಗಳು ತಿಳಿಸಿದೆ. ನಾವು ತಿಂದ ಆಹಾರ ಜೀರ್ಣವಾಗಲು ಸುಮಾರು ಎರಡು ಗಂಟೆಯಾದರೂ ಸಮಯ ಬೇಕು ಮತ್ತು ನಾವು ಸೇವನೆ ಮಾಡಿದ ಆಹಾರವು ಅನ್ನನಾಳದ ಮೂಲಕ ಜೀರ್ಣಕ್ರಿಯೆಗೆ ಹೋಗುತ್ತದೆ ಮತ್ತು ನಾವು ಮದ್ಯೆ ಮದ್ಯೆ ನೀರನ್ನ ಸೇವನೆ ಮಾಡಿದರೆ ನಾವು ತಿಂದ ಆಹಾರಗಳು ಸರಿಯಾಗಿ ಜೀರ್ಣ ಆಗುವುದಿಲ್ಲ ಮತ್ತು ಘನ ಮತ್ತು ದ್ರವ ಎರಡು ಒಟ್ಟಾಗುತ್ತದೆ ಎಂದು ಹಲವು ಸಂಶೋಧಕರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಊಟದ ಸಮಯದಲ್ಲಿ ನೀರನ್ನ ಸೇವನೆ ಮಾಡುವುದರಿಂದ ನಾವು ತಿಂದ ಆಹಾರದ ಜೀರ್ಣಕ್ರಿಯೆಗೆ ಬೇಕಾದ ಅಗತ್ಯವಾದ ಕಿಣ್ವಗಳು ದುರ್ಬಲವಾಗುತ್ತದೆ ಮತ್ತು ಇದರಿಂದ ಎದೆಯುರಿ ಮತ್ತು ಆಮ್ಲಿಯತೆ ಕಾಣಿಸಿಕುತ್ತದೆ. ಊಟದ ಸಮಯದಲ್ಲಿ ನೀರನ್ನ ಸೇವನೆ ಮಾಡಿದರೆ ನಮ್ಮ ದೇಹದಲ್ಲೂ ಗ್ಲುಕೋಸ್ ಪ್ರಮಾಣ ಜಾತಿ ಆಗುತ್ತದೆ ಮತ್ತು ಇನ್ಸುಲಿನ್ ಪ್ರಮಾಣ ಕೂಡ ಜಾಸ್ತಿ ಆಗುತ್ತದೆ. ಊಟದ ನಂತರ ನೀರು ಕುಡಿಯುವುದು ಅಥವಾ ಊಟದ ಮೊದಲು ನೀರನ್ನ ಕುಡಿಯುವುದು ಒಳ್ಳೆಯದು ಎಂದು ಅನೇಕ ಸಂಶೋದನೆಗಳು ತಿಳಿಸಿದೆ, ನಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗಬೇಕು ಅಂದರೆ ನಾವು ಊಟಕ್ಕೂ ಅರ್ಧ ಘಂಟೆ ಮೊದಲೇ ನೀರನ್ನ ಕುಡಿಯುವುದು ಒಳ್ಳೆಯದು. ಊಟವಾದ ಅರ್ಧ ಘಂಟೆಯ ನಂತರ ನೀರನ್ನ ಕುಡಿದರೆ ನಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗುವುದಲ್ಲದೆ ನಮ್ಮ ದೇಹಕ್ಕೆ ಯಾವುದೇ ಅಪಾಯ ಇಲ್ಲ ಎಂದು ಹೇಳುತ್ತಿದ್ದಾರೆ ವೈದ್ಯರು.

Comments are closed.