ಇಂದಿನ ನಮ್ಮ ಆಹಾರ ಶೈಲಿಯಿಂದಾಗಿ ಹಾಗೇನೇ ನಾವು ಬಳಸುವ ದಿನ ಬಳಕೆ ವಸ್ತುವಿನಿಂದ ಹಲವಾರು ರೀತಿಯ ಕಾಯಿಲೆಗಳು ಬರುತ್ತವೆ ಅದರಲ್ಲಿ ಈ ಹಲ್ಲುನೋವು ಸಮಸ್ಯೆಯು ಸಹ ಒಂದು ಇದು ನಾವು ಸಿಹಿ ಪಧಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಬರಬಹುದು ಅಥವಾ ನಾವು ಹಲ್ಲಿನ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳದೆ ಇರುವುದರಿಂದ ಕೂಡ ಬರಬಹುದು ಏಕೆಂದರೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು ಬೆಳಿಗ್ಗೆ ಎದ್ದ ತಕ್ಷಣ ಹಾಗೇನೇ ರಾತ್ರಿ ಊಟ ಆದಮೇಲೆ ಮತ್ತೆ ಹಲ್ಲು ಉಜ್ಜಿ ಚೆನ್ನಾಗಿ ಬಾಯಿ ತೊಳೆಯಬೇಕು ಇದರಿಂದ ಸಿಹಿ ಪಧಾರ್ಥ ಏನೇ ತಿಂದರೂ ಅದು ಹಲ್ಲಿನಲ್ಲಿ ಸಿಕ್ಕಿಕೊಳ್ಳುವುದಿಲ್ಲ ಇದರಿಂದ ಕೂಡ ನಾವು ಹಲ್ಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಇದರಿಂದ ಹಲ್ಲುನೋವು ಬರುವುದಿಲ್ಲ ಹಲ್ಲಿನ ಸಮಸ್ಯೆ ಎನ್ನುವುದು ಇವತ್ತಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಸಿಹಿಯನ್ನು ಜಾಸ್ತಿ ತಿನ್ನುವುದರಿಂದ ಹಲ್ಲಿನ ಸಮಸ್ಯೆ ಬಂದಿದೆ ಹಾಗಾದರೆ ಹಲ್ಲಿನ ಸಮಸ್ಯೆಯನ್ನು ನಿವಾರಿಸಲು ಮನೆಮದ್ದುಗಳು ಯಾವುವು ಎನ್ನುವುದನ್ನು ಈಗ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
1. ಈರುಳ್ಳಿ ಬೀಜವನ್ನು ಸುಡಬೇಕು ಹೀಗೆ ಸುಟ್ಟಾಗ ಅದರಿಂದ ಹೊಗೆ ಬರುತ್ತದೆ ಆ ಹೊಗೆಯನ್ನು ಹಲ್ಲು ನೋವಿರುವ ಜಾಗಕ್ಕೆ ಹೊಗೆ ಕೊಡುವುದರಿಂದ ನೋವು ಬೇಗನೆ ನಿವಾರಣೆಯಾಗುತ್ತದೆ.
2. ಇಂಗು ಈ ಇಂಗನ್ನು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಕುದಿಸಿದ ನಂತರ ನಾವು ಆ ನೀರನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಬಾಯಿ ಮುಕ್ಕಳಿಸಬೇಕು. ಹೀಗೆ ಬಾಯಿ ಮುಕ್ಕಳಿಸಿ ಉಗುಳಿದಾಗ ಹಲ್ಲಿನಲ್ಲಿ ಇರುವ ಹುಳು ಸತ್ತು ಹಲ್ಲು ನೋವು ನಿವಾರಣೆಯಾಗುತ್ತದೆ.
3. ಸಾಸುವೆ ಈ ಸಾಸುವೆ ಎಣ್ಣೆ ಜೊತೆ ಸೈಂದವ ಲವಣ ಸೇರಿಸಿ ಚೆನ್ನಾಗಿ ಕಲಸಿ ಪೇಸ್ಟ್ ಮಾಡಿಕೊಂಡು ನೋವು ಇರುವ ಹಲ್ಲಿನ ಮೇಲೆ ಇಡುವುದರಿಂದ ಹಲ್ಲಿನಲ್ಲಿ ಇರುವ ಹುಳುಕು ಕಡಿಮೆಯಾಗುತ್ತದೆ ಹಲ್ಲುನೋವು ನಿವಾರಣೆಯಾಗುತ್ತದೆ.
4. ಅಡುಗೆಗೆ ಬಳಸುವ ಲವಂಗವನ್ನು ಪುಡಿಮಾಡಿಕೊಂಡು ಇಟ್ಟುಕೊಳ್ಳಿ ನಿಮಗೆ ಹಲ್ಲುನೋವು ಬಂದಾಗ ನಿಮ್ಮ ಹಲ್ಲು ಎಲ್ಲಿ ನೋವಾಗಿರುತ್ತದೆಯೋ ಅಲ್ಲಿ ಲವಂಗದ ಪುಡಿಯನ್ನು ಹುಳುಕಾದ ಹಲ್ಲಿನ ಒಳಗಡೆ ತುಂಬಿದರೆ ಹಲ್ಲುಗಳ ಸಮಸ್ಯೆ ಕಾಲಕ್ರಮೆಣವಾಗಿ ಕಡಿಮೆ ಆಗುತ್ತ ಬರುತ್ತದೆ.
5. ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ಇದರ ಜೊತೆಗೆ ಸೈಂದವ ಲವನದಲ್ಲಿ ಬೆಳ್ಳುಳ್ಳಿ ಎಸಳನ್ನು ಅದ್ದಿ ಜಗಿಯುವುದರಿಂದ ಹಲ್ಲು ನೋವು ಕಡಿಮೆ ಆಗುತ್ತದೆ ಇದರಿಂದ ಯಾವುದೇ ವಿಧವಾದ ಹಲ್ಲುನೋವು ಇದ್ದರು ಕೂಡ ಅಥವಾ ಯಾವುದೇ ಬಗೆಯ ಹಲ್ಲಿನ ಸಮಸ್ಯೆ ಇದ್ದರು ಕೂಡ ಬೇಗನೆ ಗುಣವಾಗುತ್ತದೆ. ನಿಮ್ಗೆ ಹಲ್ಲು ನೋವು ಇದ್ದರೆ ನೀವು ಕೂಡ ಇಲ್ಲಿ ತಿಳಿಸಿದ ಮನೆಮದ್ದುಗಳಲ್ಲಿ ನಿಮಗೆ ಯಾವುದು ಇಷ್ಟ ಅದನ್ನು ಬಳಕೆ ಮಾಡಿ ನೋಡಿ ಹಲ್ಲು ನೋವು ಆದಷ್ಟು ಕಡಿಮೆ ಆಗುತ್ತದೆ.
Comments are closed.