ಪ್ರತಿಯೊಬ್ಬರಿಗೂ ಆರೋಗ್ಯವೇ ಮಹಾಬಾಗ್ಯ, ಆದರೆ ಈಗ ಬದಲಾಗುತ್ತಿರುವ ಜನರ ಜೀವನ ಶೈಲಿಯಿಂದ ಜನರ ಆರೋಗ್ಯ ಹದಗೆ ಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಜನರು ಮಿತಿಯಿಲ್ಲದೆ ಆಹಾರವನ್ನ ಸೇವನೆ ಮಾಡುತ್ತಿರುವುದರಿಂದ ಅವರ ದೇಹದಲ್ಲಿ ತುಂಬಾ ಏರುಪೇರಾಗುತ್ತಿದೆ ಈಗಿನ ಕಾಲದಲ್ಲಿ. ಇನ್ನು ಈಗಿನ ಜನರು ಆಹಾರವನ್ನ ಇತಿಮಿತಿಲ್ಲದೆ ಸೇವನೆ ಮಾಡುತ್ತಾರೆ ಮತ್ತು ಇದರ ಪರಿಣಾಮ ಅವರಿಗೆ ಹೊಟ್ಟೆ ಬರುತ್ತದೆ, ಇನ್ನು ರಾತ್ರಿ ಯಾರು ಮಲಗುವ ಮೂರೂ ಗಂಟೆ ಮುಂಚೆ ಊಟವನ್ನ ಮಾಡುತ್ತಾರೋ ಅವರಲ್ಲಿ ಹೊಟ್ಟೆ ಉಬ್ಬುವಿಕೆಯ ಸಮಸ್ಯೆ ಕಂಡುಬರುವುದು ಸ್ವಲ್ಪ ಕಡಿಮೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಒಂದು ಭಾರಿ ಜನರಿಗೆ ಹೊಟ್ಟೆ ಬಂದರೆ ಅದನ್ನ ಕರಗಿಸುವುದು ಬಹಳ ಕಷ್ಟ, ಇನ್ನು ಜನರು ತಮ್ಮ ಹೊಟ್ಟೆ ಕರಗಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನವನ್ನ ಮಾಡುತ್ತಾರೆ ಆದರೆ ಅವರಿಂದ ಅದೂ ಸಾಧ್ಯವಾಗುವುದಿಲ್ಲ.
ಇನ್ನು ಕೊಬ್ಬಿನ ಅಂಶ ಹೆಚ್ಚಾಗಿ ಇರುವ ಆಹಾರವನ್ನ ಸೇವನೆ ಮಾಡುವವರಲ್ಲಿ ಈ ಸಮಸ್ಯೆ ಜಾಸ್ತಿಯಾಗಿ ಇರುತ್ತದೆ, ಇನ್ನು ನಾವು ಸೇವಿಸುವ ಆಹಾರ ಮತ್ತು ನಾವು ಮಾಡುವ ವ್ಯಾಯಾಮದಿಂದ ನಮ್ಮ ಹೊಟ್ಟೆಯ ಉಬ್ಬುವಿಕೆಯನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದು. ಸ್ನೇಹಿತರೆ ನಾವು ಹೇಳುವ ಈ ಚಿಕ್ಕ ಕೆಲಸವನ್ನ ಮಾಡಿದರೆ ನೀವು ಪ್ರತಿನಿತ್ಯ ನಿಮ್ಮ ಹೊಟ್ಟೆಯನ್ನ ಸ್ವಲ್ಪ ಸ್ವಲ್ಪ ಕಡಿಮೆ ಮಾಡಬಹುದು, ಹಾಗಾದರೆ ಏನದು ಚಿಕ್ಕ ಕೆಲಸ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಹೊಟ್ಟೆ ಹೊಂದಿರುವ ನಿಮ್ಮ ಗೆಳೆಯರಿಗೆ ಮತ್ತು ನಿಮ್ಮ ಸಂಬಂಧಿಕರಿಗೆ ತಲುಪಿಸಿ.
ಸ್ನೇಹಿತರೆ ಇದು ಒಂದು ನೈಸರ್ಗಿಕವಾದ ಔಷದಿ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ನೀವು ಇದನ್ನ ಮನೆಯಲ್ಲೇ ತಯಾರಿಸಿಕೊಳ್ಳ ಬಹುದು, ಸ್ನೇಹಿತರೆ ಇದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಅಂದರೆ, ತಿನ್ನುವ ಸೋಂಪು, ಜೀರಿಗೆ, ಇಂಗು, ಸೋಡಾ, ಉಪ್ಪು, ಕರಕ್ಕಾಯಿ ಮತ್ತು ಅಗಸಿ ಬೀಜಗಳು. ಸ್ನೇಹಿತರೆ ನೀವು ಈ ಆಹಾರಗಳನ್ನ ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಅತೀ ವೇಗವಾಗಿ ಆಗಿ ನಿಮ್ಮ ಹೊಟ್ಟೆಯ ಸುತ್ತಲೂ ಇರುವ ಬೊಜ್ಜುಗಳು ಕಡಿಮೆ ಆಗುತ್ತದೆ. ಇನ್ನುಇದನ್ನ ಮಾಡುವ ವಿಧಾನ ಏನು ಅಂದರೆ, ನೀವು ಮೊದಲು ಅಗಸಿ ಬೀಜ, ಜೀರಿಗೆ ಮತ್ತು ಸೊಂಪನ್ನ ಫ್ರೈ ಮಾಡಿಕೊಳ್ಳಿ ಮತ್ತು ಇವುಗಳು ತಣ್ಣಗಾದ ತಕ್ಷಣ ಮಿಕ್ಸಿಯಲ್ಲಿ ಚನ್ನಾಗಿ ರುಬ್ಬಿಕೊಳ್ಳಿ.
ಇನ್ನು ರುಬ್ಬಿದ ಈ ಮಿಶ್ರಣಕ್ಕೆ ಒಂದು ಚಮಚ ಕರಕ್ಕಾಯಿ, ಒಂದು ಚಮಚ ಅರಿಶಿನ, ಅರ್ಧ ಚಮಚ ಸೋಡಾ, ಅರ್ಧ ಚಮಚ ಉಪ್ಪು, ಅರ್ಧ ಚಮಚ ಇಂಗು ಮತ್ತು ಅರ್ಧ ಚಮಚ ಕರಿಬೇವನ್ನ ಬೆರೆಸಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇನ್ನು ಇದನ್ನ ನೀವು ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಅರ್ಧ ಚಮಚದಷ್ಟು ಸೇವಿಸುತ್ತಾ ಬನ್ನಿ ಮತ್ತು ಮಲಗುವಾಗ ಇದನ್ನ ತಿಂದು ಮಲಗಿದರೆ ನೀವು ಮಲಗಿದ ನಂತರ ಇದು ನಿಮ್ಮ ಹೊಟ್ಟೆಯ ಬದಿಯಲ್ಲಿ ಇರುವ ಕೊಬ್ಬನ್ನ ಮತ್ತು ದೇಹದ ಇತರೆ ಭಾಗದಲ್ಲಿ ಇರುವ ಕೊಬ್ಬನ್ನ ಕರಗಿಸಲು ಆರಂಭಿಸುತ್ತದೆ.
ಇನ್ನು ಅಗಸಿ ಪುಡಿಯಲ್ಲಿ ಫೈಬರ್ ಜಾಸ್ತಿ ಇರುವುದರಿಂದ ಇದು ನಮ್ಮ ದೇಹಕ್ಕೆ ರಕ್ಷಣೆಯನ್ನ ನೀಡುತ್ತದೆ, ಇನ್ನು ಪ್ರತಿದಿನ ನೀವು ಮಲಗುವ ಅರ್ಧಘಂಟೆ ಮುಂಚೆ ಇದನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚದಷ್ಟು ಹಾಕಿ ಸೇವಿಸುತ್ತಾ ಬಂದರೆ ನಿಮ್ಮ ದೇಹದಲ್ಲಿ ಇರುವ ಕೊಬ್ಬುಗಳು ಬಹುಬೇಗ ಕರಗುವುದರಲ್ಲಿ ಎರಡು ಮಾತಿಲ್ಲ. ಇನ್ನು ಇದು ನೈಸರ್ಗಿಕವಾದ ಔಷದಿಯಾಗಿರುವುದರಿಂದ ನಿಮ್ಮ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಮತ್ತು ಆದಷ್ಟು ಹೊರಗಿನ ಆಹಾರಗಳ ಸೇವನೆ ಕಡಿಮೆ ಮಾಡಿದರೆ ನಿಮ್ಮ ದೇಹದಲ್ಲಿನ ಕೊಬ್ಬು ಬಹುಬೇಗ ಕರಗುತ್ತದೆ.
Comments are closed.