ಸ್ನೇಹಿತರೆ ಬಾಳೆ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಬಾಳೆ ಹಣ್ಣುಗಳು ಆರೋಗ್ಯಕರ ಮತ್ತು ಪೌಷ್ಟಿಕಾಂಶ ಭರಿತ ಎಂಬ ಬಗ್ಗೆ ಯಾವುದೇ ಸಂದೇಹವಿಲ್ಲ, ಅದು ಫೈಬರ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ ಮತ್ತು ಕ್ಯಾಲೊರಿ ಕಡಿಮೆ ಇರುತ್ತದೆ. ತೂಕ ಇಳಿಕೆಗೆ ಸಹಾಯವಾಗುವಂತ ಹಲವು ಗುಣಗಳು ಬಾಳೆ ಹಣ್ಣಿನಲ್ಲಿದ್ದು ನೀವು ತೂಕ ಕಳೆದುಕೊಳ್ಳಲು ಬಯಸುವುದಾದರೆ ನಿಸ್ಸಂದೇಹವಾಗಿ ಬಾಳೆಹಣ್ಣನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಬಹುದು. ಕೇವಲ ಬಾಳೆ ಹಣ್ಣಿನಿಂದ ಮಾತ್ರವಲ್ಲದೆ ಸಿಪ್ಪೆಯಿಂದ ಕೂಡ ಹಲವಾರು ರೀತಿಯ ಲಾಭಗಳಿವೆ, ಬಾಳೆ ಹಣ್ಣುಗಳನ್ನ ಸಿಪ್ಪೆ ಸಮೇತ ಸೇವನೆ ಮಾಡುವುದರಿಂದ ದೇಹಕ್ಕೆ ಅನೇಕ ಉಪಯೋಗಗಳು ಕೂಡ ಇದೆ ಎಂದು ಹೇಳಿದರೆ ತಪ್ಪಾಗಲ್ಲ.
ಮನೆಯಲ್ಲಿನ ಹಿರಿಯರು ನಮ್ಮ ಬಳಿ ಊಟ ಮಾಡಿದ ನಂತರ ಬಾಳೆ ಹಣ್ಣನ್ನ ಸೇವನೆ ಮಾಡಿ ಎಂದು ಹೇಳುತ್ತಾರೆ ಕಾರಣ ಏನೆಂದರೆ ನಾವು ಆಗ ತಾನೇ ಊಟ ಮಾಡಿರುವುದರಿಂದ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣ ಆಗಬೇಕು ಮತ್ತು ಅದರಲ್ಲಿನ ಅನೇಕ ಸತ್ವಗಳು ನಾವು ಮಲಗಿ ನಿದ್ರಿಸುತ್ತಿರಬೇಕಾದರೆ ನಮ್ಮ ದೇಹಕ್ಕೆ ಚೆನ್ನಾಗಿ ಹೀರಿಕೊಳ್ಳಬೇಕು ಅಂದರೆ ಬಾಳೆಹಣ್ಣು ಬಹಳ ಸಹಕಾರಿ ಆಗುತ್ತದೆ. ಇನ್ನು ಬೇಯಿಸಿದ ಬಾಳೆ ಹಣ್ಣಿನ ಉಪಯೋಗ ಮಾತ್ರ ನೀವಿನ್ನು ಕೇಳಿರಲು ಸಾಧ್ಯವಿಲ್ಲ, ಹಾಗಾದರೆ ಬೇಯಿಸಿದ ಬಾಳೆ ಹಣ್ಣನ್ನ ಸೇವನೆ ಮಾಡುವುದರಿಂದ ಏನು ಲಾಭ ಮತ್ತು ಅದರಿಂದ ದೇಹಕ್ಕೆ ಏನು ಲಾಭ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ನಿಮಗೆ ನಿದ್ದೆ ಬಾರದಿದ್ದರೆ ಸಣ್ಣ ಗಾತ್ರದ ಮಾಗಿದ ಬಾಳೆ ಹಣ್ಣಿನೊಂದಿಗೆ ಸಣ್ಣ ತುಂಡು ದಾಲ್ಚಿನ್ನಿ ಮತ್ತು ಒಂದು ಕಪ್ ನೀರು ತೆಗೆದುಕೊಳ್ಳಿ, ಅದರ ನಂತರ ದಾಲ್ಚಿನ್ನಿಯನ್ನು ನೀರಿನಲ್ಲಿ ಹಾಕಿ ಕುದಿಯಲು ಬಿಡಿ ಮತ್ತು ಅದು ಚೆನ್ನಾಗಿ ಕುಡಿಯುತ್ತಿರುವಾಗ ಸಿಪ್ಪೆಯೊಂದಿಗೆ ಬಾಳೆ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಕುದಿಯುವ ನೀರಿನಲ್ಲಿ ಹಾಕಿ 10 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಬೇಯಿಸಿದ ನಂತರ ಈ ನೀರನ್ನು ಚಹಾದಂತೆ ಫಿಲ್ಟರ್ ಮಾಡಿ ಮತ್ತು ಕುಡಿಯಿರಿ. ಹೀಗೆ ಮಾಡುವುದರಿಂದ ನಿಮಗೆ ನಿದ್ರಾಹೀನತೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ನೀವು ರಾತ್ರಿ ಮಲಗಿದ್ದರೂ ಸಹ ಇದು ನಿಮಗೆ ಪ್ರಯೋಜನಕಾರಿಯಾಗಿದೆ. ಇನ್ನು ಬೇಯಿಸಿದ ಬಾಳೆ ಹಣ್ಣಿನ ಸಿಪ್ಪೆಗಳು ಸಹ ಬಹಳ ಪ್ರಯೋಜನಕಾರಿ ಎಂದು ಬಹುಶಃ ನಿಮಗೆ ತಿಳಿದಿಲ್ಲ, ಬಾಳೆ ಹಣ್ಣಿನ ಸಿಪ್ಪೆಗಳಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಹ ಕಂಡುಬರುತ್ತವೆ ಮತ್ತು ಇದು ನರಮಂಡಲಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸ್ಮೆಹಿತರೇ ನೀವು ಕೂಡ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಇಂದೇ ಈ ಕೆಲಸವನ್ನ ಮಾಡಿ ನಿಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.
Comments are closed.